Advertisement

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

04:18 PM Apr 13, 2021 | Team Udayavani |

ಇಂದು ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ಇದು ಹಿಂದೂಗಳಿಗೆ ಹೊಸ ವರ್ಷ. ಬೇವು-ಬೆಲ್ಲ ಸವಿದು ಸಂಭ್ರಮಿಸುವ ಈ ಹಬ್ಬದಂದು ವಿಶೇಷವಾಗಿ ಒಂದು ಸಿಹಿ ಖಾದ್ಯವನ್ನು ತಯಾರಿಸಲಾಗುತ್ತದೆ. ಅದುವೇ ಹೂರಣದ ಹೋಳಿಗೆ.

Advertisement

ಇದೊಂದು ವಿಶೇಷ ಮಹಾರಾಷ್ಟ್ರಿಯನ್ ಆಹಾರವಾಗಿದ್ದು,ಯುಗಾದಿಯಂದು ಸಿದ್ಧಪಡಿಸಲಾಗುತ್ತದೆ. ಹೂರಣದ ಹೋಳಿಗೆ ಅಥವಾ ಒಬ್ಬಟ್ಟು ಎಂದೂ ಕೂಡ ಈ ಸಿಹಿಯನ್ನು ಕರೆಯುತ್ತಾರೆ. ಇಂದು ನಾವು ಹೂರಣದ ಹೋಳಿಗೆ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಬೇಕಾಗುವ ಪದಾರ್ಥಗಳು :

ಮೈದಾ – 2 ಕಪ್‌ಗಳು

ರವೆ – 2 ಸ್ಪೂನ್

Advertisement

ಅರಶಿನ ಹುಡಿ – ಸ್ವಲ್ಪ

ಬೆಲ್ಲ – 11/2 ಕಪ್

ತೆಂಗಿನ ತುರಿ – 2 ಕಪ್ (ತುರಿದದ್ದು)

ಏಲಕ್ಕಿ – 2-3 (ಹುಡಿಮಾಡಿದ್ದು)

ತುಪ್ಪ – 2ಸ್ಫೂನ್

ನೀರು – 1 ಕಪ್

ಮಾಡುವ ವಿಧಾನ:

ಬೆಲ್ಲ ಹಾಗೂ ಕಡಲೆಬೇಳೆಯನ್ನು ಬಳಸಿ ಹೂರಣ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಕೆಲವು ಕಡೆಗಳಲ್ಲಿ, ಹೂರಣದ ಹೋಳಿಗೆ ತಯಾರಿಸಲು ತೆಂಗಿನ ಕಾಯಿಯನ್ನು ಬಳಸುತ್ತಾರೆ.

ತುರಿದ ತೆಂಗಿನ ಕಾಯೊಯೊಂದಿಗೆ ಬೆಲ್ಲವನ್ನು ಮಿಶ್ರಣ ಮಾಡಿ ಹೋಳಿಗೆಯನ್ನು ಸಿದ್ಧಪಡಿಸುತ್ತಾರೆ. ತೆಂಗಿನ ಕಾಯಿಯ ಸುವಾಸನೆ ಮತ್ತು ಅಸಾಮಾನ್ಯ ರುಚಿ ಹೋಳಿಗೆಗೆ ವಿಶೇಷ ಸ್ವಾದವನ್ನು ನೀಡುತ್ತದೆ.

ಒಂದು ಪಾತ್ರೆಯಲ್ಲಿ, ಮೈದಾ, ರವೆ, ಅರಶಿನ ಹುಡಿಯನ್ನು ಸೇರಿಸಿ ಮತ್ತು ಸ್ವಲ್ಪ ನೀರು ಬಳಸಿ ಮೃದುವಾದ ಹಿಟ್ಟು ತಯಾರಿಸಿ. 30 ನಿಮಿಷಗಳವರೆಗೆ ಹಿಟ್ಟನ್ನು ತೆಗೆದಿರಿಸಿ.

ಮತ್ತೊಂದು ಪಾತ್ರೆಯಲ್ಲಿ  1/2 ಕಪ್ ನೀರು ಹಾಕಿ ಬೆಲ್ಲವನ್ನು ಕರಗಿಸಿ. ಅದಕ್ಕೆ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬೆಲ್ಲ ದಪ್ಪಗಾಗುವವರೆಗೆ ಬೇಯಿಸಿ.

ಗ್ಯಾಸ್ ಆಫ್ ಮಾಡಿ ತಣಿಯಲು ಬಿಡಿ.

ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನು ತಯಾರಿಸಿ. ಹೂರಣವನ್ನು ಸ್ಟಫ್ ಮಾಡಿ. ಉಂಡೆಯ ಬದಿಗಳನ್ನು ಬೆಲ್ಲದ ಪಾಕದಲ್ಲಿ ಕವರ್ ಮಾಡಿ.

ತುಪ್ಪದಿಂದ ಸವರಿದ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಅದರ ಮೇಲೆ ಈ ಉಂಡೆಯನ್ನಿಡಿ. ನಂತರ ಉಂಡೆಯನ್ನು ಚಪಾತಿ ಆಕಾರದಲ್ಲಿ ಲಟ್ಟಿಸಿ.

ತವಾ ಬಿಸಿ ಮಾಡಿ ಹಾಗೂ ಬೆಲ್ಲ ಬಳಸಿಕೊಂಡು ಹೂರಣದ ಹೋಳಿಗೆಯನ್ನು ಬೇಯಿಸಿ.

ಹೂರಣದ ಹೋಳಿಗೆ ಸವಿಯಲು ಸಿದ್ಧವಾಗಿದೆ. ಬಿಸಿ ಬಿಸಿಯಾದ ಹೋಳಿಗೆಯನ್ನು ಸವಿಯಲು ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next