Advertisement
ಬದುಕಿನ ಹಳೆಯ ನೋವುಗಳನ್ನುಮನಸ್ಸಿನಿಂದ ತೊಡೆದು ಹಾಕಿನವೋಲ್ಲಾಸದಿಂದ ಹೊಸ ವರ್ಷವನ್ನುಹೊಸ ಉತ್ಸಾಹದಿಂದ ಸ್ವಾಗತಿಸುವಸುದಿನ ಇದಾಗಿದೆ. ಎಲೆಗಳನ್ನುಕಳಚಿಕೊಂಡು ಮತ್ತೆ ಚಿಗೊರೆಡೆದುಮರುಜೀವ ಪಡೆಯುವ ಮರಗಳುಪ್ರಕೃತಿಗೆ ಮತ್ತೆ ಹೊಸ ರೂಪ, ನವೋತ್ಸಾಹತರುವ ಕಾಲವಾದರೆ, ಚೈತ್ರ-ವಸಂತರಆಗಮನದಿಂದ ಪ್ರಕೃತಿ ಹೊಸ ರೂಪವನ್ನುತಂದು ಎಲ್ಲೆಡೆ ಸಂಭ್ರಮ ಉಲ್ಲಾಸವನ್ನು ತರುವ ಹಬ್ಬವೂ ಹೌದು.
Related Articles
Advertisement
ದೇವಸ್ಥಾನಗಳಲ್ಲಿ ನೂತನ ಪಂಚಾಂಗ ಶ್ರವಣ ಹಬ್ಬದ ಆಚರಣೆಯ ಒಂದು ಆಕರ್ಷಣೆ. ಯುಗಾದಿಯ ನೈಜತೆ ಇಂದು ಉಳಿದಿರುವುದು ಹಳ್ಳಿಗಳಲ್ಲಿ ಮಾತ್ರ. ನಗರವಾಸಿಗಳಿಗೆ ಯುಗಾದಿಕೇವಲ ಒಂದು ದಿನದ ಹಬ್ಬ ವಾದರೆಹಳ್ಳಿಗಳಲ್ಲಿ ಈ ಹಬ್ಬದ ಒಂದು ತಿಂಗಳತನಕ ಇರುವ ಹಬ್ಬ . ಹಳ್ಳಿಗಳಲ್ಲಿ ಈಹಬ್ಬವನ್ನು ತುಂಬಾ ವಿಶೇಷವಾಗಿ ಆಚರಿಸುತ್ತಾರೆ. ಯುಗಾದಿ ದೊಡ್ಡ ಹಬ್ಬ. ಗುಜರಾತ್ -ರಾಜಸ್ಥಾನದ ಕೆಲವು ಭಾಗಗಳನ್ನು ಹೊರತುಪಡಿಸಿ ಇತರೆಕಡೆಗಳಲ್ಲಿ ಚೈತ್ರಮಾಸದಿಂದ ಹಿಂದೂ ಸಂವತ್ಸರದ ಹೊಸವರ್ಷಾಚರಣೆ ನಡೆದು ಬಂದಿದೆ.
ಆಂಧ್ರ ಹಾಗೂ ಕರ್ನಾಟಕದಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ಕ ಎಂದು ಆಚರಿಸಲಾಗುವುದು.ಜೀವನ ಎಂಬುದು ಕೇವಲ ಸುಖದಕಲ್ಪನೆಯಲ್ಲ. ಹಾಗಂತ ಕಷ್ಟದಕೋಟಲೆಯಲ್ಲ. ಹಗಲು-ರಾತ್ರಿಗಳಂತೆ,ಗಿಡದಲ್ಲಿರುವ ಹೂವು ಮುಳ್ಳುಗಳಂತೆ ಮನುಷ್ಯನ ಬದುಕು ನೋವು ನಲಿವುಗಳ ಸಂಗಮ ಎನ್ನುವುದನ್ನು ಎಷ್ಟೋ ವರ್ಷಗಳ ಹಿಂದೆ ಜನರು ಅರಿತಿದ್ದರು. ಜೀವನದಲ್ಲಿ ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ
ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದಾಗಮಾತ್ರ ಬದುಕು ಸುಂದರವಾಗಲು ಸಾಧ್ಯ.ಈ ಅಂಶವನ್ನು ಜನರಿಗೆ ಸಾರಲೆಂದೇಯುಗಾದಿಯಂದು ಬೇವು-ಬೆಲ್ಲವನ್ನುಹಂಚಲಾಗುತ್ತದೆ ಎನ್ನುವುದು ಬಲ್ಲವರಅನಿಸಿಕೆ. ಇದರ ಹಿಂದೆ ವೈಜ್ಞಾನಿಕ ಹಿನ್ನೆಲೆಯೂ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಯುಗಾದಿ ಮತ್ತೆ ಬಂದಿದೆ. ಈ ಹಬ್ಬದಬೇವು-ಬೆಲ್ಲ ಸಮರಸದ ಬದುಕಿಗೆಬುನಾದಿಯಾಗಲಿ… ಈ ದಿನದಲ್ಲಿ ಹೊಸಭರವಸೆಯ ಕನಸುಗಳು ನನಸಾಗಲಿ ಎನ್ನುವುದು ನಮ್ಮ ಹಾರೈಕೆ