Advertisement

Yugadi: ಹೊಸ ಯುಗದ ಆರಂಭ

10:54 AM Apr 06, 2024 | Team Udayavani |

“ಸಿಹಿ ಕಹಿಗಳೆರಡೂ ಜೀವನದಲ್ಲಿ ಸಮಾನವಾಗಿರಬೇಕು”. ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲನೆಯ ದಿನವಾಗಿದೆ ಇದು ನಮ್ಮ ಭಾರತದ ಅನೇಕ ಕಡೆಗಳಲ್ಲಿ ಈ ದಿನವನ್ನು ಹೊಸ ವರ್ಷದ ಮೊದಲನೆಯ ದಿನವೆಂದು ಹೇಳುತ್ತಾರೆ. ಈ ಒಂದು ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ.

Advertisement

ಹುಣಸೆ ಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳನ್ನ ಬಳಸಿಕೊಂಡು ಕೆಲವೊಂದು ತಿಂಡಿ ತಿನಿಸುಗಳನ್ನ ಮಾಡುತ್ತಾರೆ ಬೆಳಗ್ಗೆ ಎದ್ದು ತಳಿರು ತೋರಣವನ್ನು ಮನೆಯ ಬಾಗಿಲಿಗೆ ದೇವರ ಮನೆಯ ಬಾಗಿಲಿಗೆ ಕಟ್ಟುತ್ತಾರೆ. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕುತ್ತಾರೆ. ನಂತರ ಎಣ್ಣೆ ಸೀಗೆಕಾಯಿಂದ ತಲೆಯನ್ನು ತೊಳೆದುಕೊಂಡು ಕೆಲವೊಂದು ಪುಣ್ಯಾಹ ಮಂತ್ರವನ್ನು ಹೇಳಿಕೊಳ್ಳುತ್ತಾ ಮಾವಿನ ಎಲೆಯಿಂದ ಮನೆಯ ಎಲ್ಲಾ ಕಡೆ ಕಳಸದ ನೀರನ್ನ ಹಾಕುತ್ತಾರೆ ನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನ ಧರಿಸಿಕೊಂಡು ಪಂಚಾಂಗವನ್ನು ಮನೆಯ ಹಿರಿಯರು ಎಲ್ಲರೂ ಓದುತ್ತಾರೆ. ಹಬ್ಬದ ದಿನ ವಿಶೇಷ ತಿಂಡಿಗಳನ್ನು ಮಾಡುವುದರ ಜೊತೆಗೆ ಒಬ್ಬಟ್ಟು ಹೋಳಿಗೆ ಅದರಲ್ಲಿಯೂ ಕಡಲೆ ಅಥವಾ ತೊಗರಿ ಬೆಳೆಯ ಹೂರಣದಲ್ಲಿ ಮಾಡುತ್ತಾರೆ.

ವಿಶೇಷವಾಗಿ ಯುಗಾದಿಯ ದಿನದ ಸಂಕೇತವಾಗಿ ಬೇವು-ಬೆಲ್ಲವನ್ನು ಸ್ವೀಕರಿಸುತ್ತಾರೆ ಬೇವು ಕಷ್ಟದ ಸಂಕೇತವನ್ನು ಮತ್ತು ಬೆಲ್ಲವನ್ನು ಸಿಹಿಯ ವಿಚಾರವನ್ನು ಎರಡನ್ನು ಒಟ್ಟಿಗೆ ಬೆರಸಿ ಸಮಾನವಾಗಿ ಸ್ವೀಕರಿಸಬೇಕೆನ್ನುವದು ಇದರ ಉದ್ದೇಶವಾಗಿದೆ. ಪ್ರಮುಖವಾಗಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕ್ಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ ಎನ್ನುವ ರೀತಿಯಲ್ಲಿ ಹಾಡಿನ ಮೂಲಕ ಮನೆಯ ಕೆಲವೊಂದು ಕೃಷಿಗೆ ಸಂಬಂಧಪಟ್ಟ ವಸ್ತುಗಳಿಗೆ ಪೂಜೆಯನ್ನು ಮಾಡುತ್ತಾರೆ.

ಯುಗಾದಿ ಎಂದರೆ ಯುಗ +ಆದಿ ಅಂದ್ರೆ ಹೊಸ ಯುಗದ ಆರಂಭ ಅಂತ . ಮುಖ್ಯವಾಗಿ ಬೇವು ಬೆಲ್ಲನೆ ಯಾಕೆ ಕೊಡ್ತಾರೆ ಗೊತ್ತಾ ಜೀವನದ ಸಿಹಿಕಹಿ ಗಳೆರಡನ್ನು ಪಡೆಯಬೇಕೆಂದು ಮತ್ತು ಅವುಗಳನ್ನು ನೆನಪಿಸಿಕೊಳ್ಳಲು ಬೇವು , ಬೆಲ್ಲಗಳ ಮಿಶ್ರಣವನ್ನು ಮಾಡಲಾಗುತ್ತದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಕಷ್ಟ-ಸುಖ ಇರೋವಷ್ಟು ದಿನ ಎಲ್ಲವನ್ನು ಸಮಾನವಾಗಿ ಹಂಚಿಕೊಂಡು ಬಾಳೋಣ.

ಪ್ರಿಯಾ,

Advertisement

ಎಂ.ಜಿ.ಎಂ. ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next