Advertisement

ಗಾಯಕ ರಘು ದೀಕ್ಷಿತ್‌ಗೆ ಆತ್ಮಹತ್ಯೆ ಶಾಕ್‌!

01:59 PM Jan 11, 2021 | Team Udayavani |

ಕನ್ನಡದ ಗಾಯಕ ಕಂ ಸಂಗೀತ ಸಂಯೋಜಕ ರಘು ದೀಕ್ಷಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಖಾಸಗಿ ಯು-ಟ್ಯೂಬ್‌ ಚಾನೆಲ್‌ ಒಂದು ವರದಿ ಮಾಡಿದೆ.

Advertisement

ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಡಿಪ್ರಷನ್‌ಗೆ ಒಳಗಾಗಿದ್ದು, ಆ ನಂತರ ಅದರಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು ಎಂದು ಹೇಳಿಕೊಂಡಿದ್ದರು.

ರಘು ದೀಕ್ಷಿತ್‌ ಅವರ ಇದೇ ಹೇಳಿಕೆಯನ್ನು ಇಟ್ಟುಕೊಂಡು ಯು-ಟ್ಯೂಬ್‌ ಚಾನೆಲ್‌ವೊಂದರಲ್ಲಿ ಆತ್ಮಹತ್ಯೆ ಬಗ್ಗೆ ವರದಿ ಪ್ರಸಾರ ಮಾಡಲಾಗಿದೆಯಂತೆ. ಈ ಬಗ್ಗೆ ಗರಂ ಆಗಿರುವ ರಘು ದೀಕ್ಷಿತ್‌, ಯು-ಟ್ಯೂಬ್‌ ಚಾನೆಲ್‌ ತಪ್ಪಾದ ಮಾಹಿತಿ ನೀಡಿರುವುದರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next