Advertisement

‘ರುಖೋ ಜರಾ’ ಖ್ಯಾತಿಯ ಪ್ರಸಿದ್ದ ಯೂಟ್ಯೂಬರ್ ‘ಹಿಂದೂಸ್ಥಾನಿ ಭಾವು’ಬಂಧನ!

08:33 AM Feb 01, 2022 | Team Udayavani |

ಮುಂಬೈ: ‘ರುಖೋ ಜರಾ, ಸಬರ್ ಕರೋ…” ಖ್ಯಾತಿಯ ಪ್ರಸಿದ್ಧ ಯೂಟ್ಯೂಬರ್ ಹಿಂದೂಸ್ಥಾನಿ ಭಾವು ಯಾನೆ ವಿಕಾಸ್ ಪಾಠಕ್ ಅವರನ್ನು ಮುಂಬೈನ ಧಾರವಿ ಪೊಲೀಸರು ಬಂಧಿಸಿದ್ದಾರೆ.

Advertisement

ಸೋಮವಾರ 10 ಮತ್ತು 12 ನೇ ತರಗತಿಗಳ ಆಫ್‌ ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್‌ವಾಡ್ ಅವರ ನಿವಾಸದ ಬಳಿ ಜಮಾಯಿಸುವಂತೆ ಅವರು ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಕಾರಣದಿಂದ ವಿಕಾಸ್ ವಿರುದ್ಧ ದೂರು ದಾಖಲಾಗಿದೆ.

ಕೋವಿಡ್ -19 ದೃಷ್ಟಿಯಿಂದ 10 ಮತ್ತು 12 ನೇ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆಗೆ ಒತ್ತಾಯಿಸಿ ನಿನ್ನೆ ಧಾರಾವಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದ ಪ್ರಭಾವಿ ವಿಕಾಸ್ ಪಾಠಕ್ ಅವರನ್ನು ಧಾರಾವಿ ಪೊಲೀಸರು ಬಂಧಿಸಿದ್ದಾರೆ. ಪಾಠಕ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.

‘ಹಿಂದುಸ್ಥಾನಿ ಭಾವು’ ಎಂಬಾತ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಲಾಗಿದೆ. ಗಲಭೆ, ಮಹಾರಾಷ್ಟ್ರ ಪೊಲೀಸ್ ಕಾಯಿದೆ, ವಿಪತ್ತು ನಿರ್ವಹಣಾ ಕಾಯಿದೆ ಮತ್ತು ಮಹಾರಾಷ್ಟ್ರದ ಆಸ್ತಿ ವಿರೂಪಗೊಳಿಸುವಿಕೆ ಕಾಯ್ದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ಜೇಮ್ಸ್‌ಗಾಗಿ ಆರ್‌ಆರ್‌ಆರ್‌ ಮುಂದೂಡಿಕೆ

Advertisement

ಈ ಪ್ರಕರಣದಲ್ಲಿ ಧಾರಾವಿ ಪೊಲೀಸರು ಇಕ್ರಾರ್ ಖಾನ್ ವಖಾರ್ ಖಾನ್ ಎಂಬಾತನನ್ನೂ ಬಂಧಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಿಗಾಗಿ ಅಶೋಕ್ ಮಿಲ್ ನಾಕಾದಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು. ಸಚಿವರ ನಿವಾಸದ ಬಳಿ ತೆರಳದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಹಿಂದುಸ್ಥಾನಿ ಭಾವು ಮತ್ತಿತರರು ವಿದ್ಯಾರ್ಥಿಗಳು ಸೇರಲು ಕಾರಣರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next