Advertisement

Love: ಪ್ರೀತಿಸಿದ ಇಬ್ಬರನ್ನೂ ಮದುವೆಯಾದ ಯೂಟ್ಯೂಬರ್: ಕುಟುಂಬ, ಸಮಾಜದ ಅವಮಾನ ಒಂದೆರೆಡಲ್ಲ

12:53 PM Apr 09, 2023 | Team Udayavani |

ಸಾಮಾನ್ಯ ಸಂಬಂಧವೆಂದರೆ ಅಲ್ಲಿ ಒಬ್ಬಳು ಹೆಂಡತಿ ಇರುತ್ತಾಳೆ. ಇಬ್ಬರೂ ಹೆಂಡತಿಯರು ಒಂದೇ ಮನೆಯಲ್ಲಿ ಜೊತೆಯಾಗಿ ಯಾವುದೇ ಜಗಳ ಆಡದೇ ಇರುತ್ತಾರೆ ಎಂದರೆ ನೀವು ನಂಬುತ್ತೀರಾ? ಹೀಗೊಂದು ಫ್ಯಾಮಿಲಿಯನ್ನು ಹೊಂದಿದ್ದಾನೆ ಖ್ಯಾತ ಯೂಟ್ಯೂಬರ್.‌

Advertisement

ತನ್ನ ಫ್ಯಾಮಿಲಿ ವ್ಲಾಗ್‌ ವಿಡಿಯೋಸ್‌ ಗಳಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸನ್ನಿ ರಜಪೂತ್ ಎಂಬಾತ ಇಬ್ಬರು ಹೆಂಡತಿಯರ ಮುದ್ದಿನ ಗಂಡ.!

ʼಸನ್ನಿ ಫ್ಯಾಮಿಲಿʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಸನ್ನಿ ರಜಪೂತ್ ಅವರು ಇತ್ತೀಚೆಗೆ ತಮಗೆ ಇಬ್ಬರು ಹಂಡತಿಯರು ಇದ್ದಾರೆ ಎನ್ನುವ ಬಗ್ಗೆ ಹಾಗೂ ಹಿಂದಿನ ಸ್ಟೋರಿಯ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇಲ್ಲ: ಕುಕ್ಕೆಯಲ್ಲಿ ಸಚಿವ ಎಸ್.ಅಂಗಾರ

ನಾನು ಕಾಲೇಜಿನಲ್ಲಿ ರೂಪ್‌ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದೆ. ಅವರ ಜಾತಿ ಬೇರೆಯಾಗಿತ್ತು, ಇಬ್ಬರ ಕುಟುಂಬ ಸದಸ್ಯರು ಅವರ ಮದುವೆಗೆ ನಿರಾಕರಿಸಿದರು. ಆ ಕಾರಣದಿಂದ ನಾವಿಬ್ಬರೂ ದೂರವಾದೆವು. ಇದಾದ ಬಳಿಕ ನಾನು ಮಾನಸಿ ಎನ್ನುವ ಯುವತಿಯನ್ನು ಪ್ರೀತಿಸ ತೊಡಗಿದೆ. ಅವಳನ್ನು ಮದುವೆಯಾದೆ. ಆದರೆ ಇದಾದ ಕೆಲ ಸಮಯದ ಬಳಿಕ ನನ್ನ ಮೊದಲ ಪ್ರೀತಿ ರೂಪ್‌ ಅವಳ ಸಂಪರ್ಕ ಮತ್ತೆ ಆಯಿತು. ಅವಳೊಂದಿಗೆ ನಿತ್ಯ ಮಾತು ಶುರುವಾಯಿತು. ಮದುವೆ ಬಳಿಕ ನಾನು ಮಾನಸಿ ಅವರಿಗೆ ರೂಪ್‌ ಅವರ ವಿಚಾರವನ್ನು ಹೇಳಿದೆ. ಮಾನಸಿ ಹಾಗೂ ನನಗೆ ಒಂದು ಮಗುವಿದೆ. ರೂಪ್‌ ನನ್ನನು ಮರೆತಿಲ್ಲ, ನಾನು ಆಕೆಯನ್ನು ಮರೆತಿಲ್ಲ. ರೂಪ್‌ ರೊಂದಿಗೆ ನನಗೆ ಮತ್ತೆ ಪ್ರೀತಿ ಆಗಿದೆ. ನಾನು ರೂಪ್‌ ಳನ್ನು ಮದುವೆಯಾದೆ. ನನ್ನೊಂದಿಗೆ ಇಬ್ಬರು ಜೊತೆಯಾಗಿ ಇರಲು ಆರಂಭಿಸಿದರು. ಆದರೆ ನಾವು ಇದ್ದ ಫ್ಲ್ಯಾಟ್‌ ಗೆ ಪೊಲೀಸರು ಬಂದಿದ್ದಾರೆ. ಇಬ್ಬರು ಪತ್ನಿಯರೊಂದಿಗೆ ಇದ್ದಾರೆಂದು ಫ್ಲ್ಯಾಟ್‌ ನವರು ಕೂಡ ನಮ್ಮನ್ನು ಹೋಗಿ ಎಂದಿದ್ದಾರೆ. ನನ್ನ ಇಬ್ಬರು ಪತ್ನಿಯರ ಮನೆಯವರು ಮನೆಗೆ ಬರಬೇಡಿ ಎಂದಿದ್ದಾರೆ. ನಾನು ನನ್ನ ಇಬ್ಬರು ಪತ್ನಿಯರು ತುಂಬಾ ಕಷ್ಟ ಅನುಭವಿಸಿದ್ದೇವೆ. ನಮಗೆ ಯಾರೂ ಮನೆ ಕೂಡ ಕೊಟ್ಟಿಲ್ಲ. ನನ್ನ ಕುಟುಂಬದವರು ನನ್ನ ಬಗ್ಗೆ ಏನೇನೋ ಹೇಳಲು ಶುರು ಮಾಡಿದರು.

Advertisement

ಎಲ್ಲಿ ಹೋದರು ನೆಮ್ಮದಿಯೇ ಇಲ್ಲದಂತಾಯಿತು. ಆಗ ನಾನು ಈ ಸಮಸ್ಯೆ ಹೇಳಿಕೊಳ್ಳಲು ವಿಡಿಯೋವೊಂದನ್ನು ಹಾಕಿದೆ. ಅಲ್ಲಿಂದ ನಮ್ಮ ಯೂಟ್ಯೂಬ್‌ ಪಯಣ ಶುರುವಾಯಿತು. ನನಗೆ ಯಾರಿಂದ ಏನು ಆಗಬೇಕಿಲ್ಲ. ನಾನು ನನ್ನ ಇಬ್ಬರು ಪತ್ನಿಯರನ್ನೂ ತುಂಬಾ ಪ್ರೀತಿಸುತ್ತೇನೆ ಎಂದು ತನ್ನ ಕಥೆಯನ್ನು ಹೇಳಿಕೊಂಡಿದ್ದಾರೆ.

ಸದ್ಯ  ಯೂಟ್ಯೂಬರ್‌ ಅವರ ಕಥೆಯನ್ನು ಕೇಳಿ ಕೆಲವರು ಟ್ರೋಲ್‌ ಮಾಡಿದ್ದರೆ, ಇನ್ನು ಕೆಲವರು ಒಳ್ಳೆಯದಾಲಿ ಎಂದು ಆಶಿಸಿದ್ದಾರೆ.

ʼಸನ್ನಿ ಫ್ಯಾಮಿಲಿʼ 2.63 ಲಕ್ಷ ಸಬ್‌ ಸ್ಕೈಬರ್ಸ್‌ ಗಳನ್ನು ಹೊಂದಿದ್ದು, ಇನ್ಸ್ಟಾಗ್ರಾಮ್‌ ನಲ್ಲಿ 2 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

ಹೈದರಾಬಾದ್‌ ಮೂಲದ ಅರ್ಮಾನ್‌ ಮಲ್ಲಿಕ್‌ ಎಂಬ ಯೂಟ್ಯೂಬರ್‌ ಕೂಡ ಇಬ್ಬರು ಪತ್ನಿಯರನ್ನು ಹೊಂದಿರುವ ಫೋಟೋ, ವಿಡಿಯೋ ವೈರಲ್‌ ಆಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next