ಜನಪ್ರಿಯ ಸಾಮಾಜಿಕ ಜಾಲತಾಣ ಯುಟ್ಯೂಬ್ ಎರಡು ಹೊಸ ಫೀಚರ್ ತನ್ನ ಬಳಕೆದಾರರಿಗಾಗಿ ನೀಡಿದೆ. ಅವು ಯಾವವು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಲೂಪ್ ನಲ್ಲಿ ವೀಡಿಯೋ ನೋಡಿ
ಇನ್ಮುಂದೆ ಲೂಪ್ ನಲ್ಲಿ ವೀಡಿಯೋಗಳನ್ನು ಪ್ಲೇ ಮಾಡುವುದಕ್ಕೆ ಯುಟ್ಯೂಬ್ ಅವಕಾಶ ನೀಡಿದೆ. ಇದು ಈಗಾಗಲೇ ಡೆಸ್ಕ್ ಟಾಪ್ ನಲ್ಲಿ ಲಭ್ಯವಿದೆ.ಆದರೆ ಮೊಬೈಲ್ ನಲ್ಲಿ ನೇರ ಕಮಾಂಡ್ ಸಪೋರ್ಟ್ ನ್ನು ಇನ್ನು ಕೂಡ ಒದಗಿಸಿಲ್ಲ. ಕೆಲವೇ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.ಆಂಡ್ರಾಯ್ಡ್ ಬಳಕೆದಾರರು ಮೆನು ಬಟನ್ ನಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ವೀಡಿಯೋ ಕ್ಲಿಪ್ ಮಾಡುವುದಕ್ಕೆ ಅವಕಾಶ
ಎರಡನೇ ಪ್ರಮುಖ ಫೀಚರ್ ಯುಟ್ಯೂಬ್ ಬಳಕೆದಾರರಿಗೆ ಆಂಡ್ರಾಯ್ಡ್ ಫೋನ್ ಗಳಲ್ಲಿ ಲಭ್ಯವಾಗುತ್ತಿರುವುದು ಯಾವುದೆಂದರೆ ವೀಡಿಯೋ ಕ್ಲಿಪ್ ಗಳು.ಈ ಫೀಚರ್ ಮೂಲಕ ನೋಡುಗರ ತಾವು ನೋಡುವ ಯುಟ್ಯೂಬ್ ವೀಡಿಯೋದಲ್ಲಿ 60 ಸೆಕೆಂಡ್ ನ ವೀಡಿಯೋವನ್ನು ಕಟ್ ಮಾಡಿ ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ ಎಂದು ಹೇಳಲಾಗಿದೆ. ಬಳಕೆದಾರರು ಕತ್ತರಿಯ ಐಕಾನ್ ನ್ನು ತಮ್ಮ ಯುಟ್ಯೂಬ್ ನಲ್ಲಿ ನೋಡಿದಾಗ ಅವರು ಈ ಫೀಚರ್ ನ್ನು ಬಳಸಬಹುದಾಗಿದೆ.
ಕಳೆದ ಎಪ್ರಿಲ್ ನಲ್ಲಿ ಯುಟ್ಯೂಬ್ ತನ್ನ ಬಳಕೆದಾರರಿಗೆ ಯಾವ ಕ್ವಾಲಿಟಿಯಲ್ಲಿ ನೀವು ವೀಡಿಯೋ ನೋಡಲು ಇಚ್ಛಿಸುತ್ತೀರಿ ಎಂಬ ಆಯ್ಕೆಯನ್ನು ನೀಡುವ ಹೊಸ ಫೀಚರ್ ನ್ನು ಬಿಡುಗಡೆಗೊಳಿಸಿತ್ತು. ಇದನ್ನು ಸರ್ವರ್ ವಿಭಾಗದ ಅಪ್ ಡೇಟ್ ಆಗಿ ಮೊಬೈಲ್ ಆಪ್ ಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.ವೀಡಿಯೋ ನೋಡುವಾಗ ಬಳಕೆದಾರರಿಗೆ ಯಾವ ರೆಸಲ್ಯೂಷನ್ ನಲ್ಲಿ ವೀಡಿಯೋ ನೋಡಲು ಬಯಸುತ್ತೀರಿ ಎಂದು ಕೇಳುವ ಮೂಲಕ ಆಯ್ಕೆ ಮಾಡುವುದಕ್ಕೆ ಅವಕಾಶ ನೀಡುವ ಹೊಸ ಆಪ್ಶನ್ ಇದಾಗಿತ್ತು.