Advertisement
ಕೆ.ಆರ್.ಪುರಂ ಸಮೀಪದ ಭಟ್ಟರ ಹಳ್ಳಿ ನಿವಾಸಿ ಅವಿನಾಶ್ (26) ಆತ್ಮ ಹತ್ಯೆ ಮಾಡಿಕೊಂಡು ಯುವಕ. ಘಟನೆ ಸಂಬಂಧ ಯುವಕನ ಸಹೋದರಿ ನೀಡಿದ ದೂರಿನ ಮೇರೆಗೆ ನೇಹಾ ಶರ್ಮಾ, ತೇಜಸ್ ರಮೇಶ್, ಮೊಹಿನ್ ಖಾನ್, ರಾಬಿನ್ ಖಾನ್, ಜಾವೇದ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
Related Articles
Advertisement
ಅನಂತರ ಆಕೆ ಸಂದೇಶ ಕಳುಹಿಸಿ ಕೂಡಲೇ ತಾನೂ ಸೂಚಿಸಿದ ಖಾತೆಗೆ ಹಣ ಹಾಕಬೇಕು. ಇಲ್ಲವಾದಲ್ಲಿ ನಿನ್ನ ಅಶ್ಲೀಲ ವಿಡಿಯೊ ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಅದಕ್ಕೆ ಹೆದರಿದ ಅವಿನಾಶ್, ತನ್ನ ಖಾತೆ ಹಾಗೂ ಸ್ನೇಹಿತರಿಂದ ಹಣ ಪೆಡದು ಹಂತ-ಹಂತವಾಗಿ ಸುಮಾರು 35 ಸಾವಿರ ರೂ. ಕಳುಹಿಸಿದ್ದಾನೆ.
ಅನಂತರವೂ ಹಣಕ್ಕೆ ಬೇಡಿಕೆ ಇಟ್ಟಾಗ ಮರ್ಯಾದೆಗೆ ಅಂಜಿಕೊಂಡು ಮಾ.23ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಮೃತನ ಸಹೋದರಿಗೆ ಸಂದೇಶ ಕಳುಹಿಸಿದ ಕಿರಾತಕರು: ಅವಿನಾಶ್ ಫೇಸ್‌ಬುಕ್ ಖಾತೆಯಲ್ಲಿ ಆತನ ಸಹೋದರಿ ಅವರ ಮೆಸೆಂಜರ್ ಗೆ ನೇಹಾ ಶರ್ಮಾ ಎಂಬ ಖಾತೆಯಿಂದ “ನೀವು ಅಭಿಗೌಡರ ಕುಟುಂಬ ಸದಸ್ಯರಾ? ಎಂದು ಸಂದೇಶ ಕಳುಹಿಸಿದ್ದರು. ಅದರಿಂದ ಅನುಮಾನಗೊಂಡ ಅವರು, ಆತನ ಫ್ಯಾಮಿಲಿ ಫ್ರೆಂಡ್ ಎಂದು ಉತ್ತರಿಸಿದ್ದಾರೆ. ಬಳಿಕ ಅಭಿಗೌಡನ ಮೊಬೈಲ್ ನಂಬರ್ ಕೇಳಿದ್ದು, ಆಗ ಸಂಬಂಧಿ ಅನಿಲ್ ಕುಮಾರ್ ಮೊಬೈಲ್ ನಂಬರ್ ಕೊಡಲಾಗಿತ್ತು. ಕೆಲ ಹೊತ್ತಿನಲ್ಲೇ ಈ ನಂಬರ್‌ಗೆ ಸಂದೇಶಗಳು ಹರಿದು ಬಂದಿದ್ದು, ವಿಡಿಯೊ ಅಪ್‌ಲೋಡ್ ಮಾಡುವ ಕುರಿತು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಮದುವೆಯಾಗಲು ಮನೆ ಬಿಟ್ಟು ಬರಲು ಕೇಳದ ಹಿನ್ನೆಲೆ: ಮನೆಗೆ ನುಗ್ಗಿ ಪ್ರೇಯಸಿಗೆ ಚೂರಿಯಿಂದ ಇರಿದ
ಬಳಿಕ ನೇಹಾ ಶರ್ಮಾ ಸೇರಿ ಇತರೆ ಆರೋಪಿಗಳ ಹೆಸರು ಕಳುಹಿಸಿದ್ದಾರೆ. ಹೀಗಾಗಿ ತನ್ನ ಸಹೋದರ ಅವಿನಾಶ್‌ಗೆ ನೇಹಾ ಶರ್ಮಾ ಎಂಬ ಯುವತಿ ಮತ್ತು ತಂಡ ಬೆದರಿಕೆ, ಕಿರುಕಳು ನೀಡಿದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಅಮೃತ್ ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜಸ್ಥಾನಕ್ಕೆ ತಂಡ: ಆರೋಪಿಗಳ ಮೊಬೈಲ್ ನಂಬರ್ ಹಾಗೂ ಫೇಸ್‌ಬುಕ್ ಐಪಿ ವಿಳಾಸ ದೆಹಲಿ ಸೇರಿ ಉತ್ತರ ಭಾರತ ತೋರಿಸುತ್ತಿದೆ. ಆದರೆ, ಆರೋಪಿಗಳು ರಾಜಸ್ಥಾನದಲ್ಲಿರುವ ಮಾಹಿತಿ ಸಿಕ್ಕಿದ್ದು, ಒಂದು ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು