Advertisement

ಕಳ್ಳರ ಪತ್ತೆಗೆ ಮೈಸೂರಿನ ಯುವಕ ಸಾಥ್‌

12:38 PM Feb 07, 2018 | |

ಮೈಸೂರು: ಸಮಾಜದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಶ್ರಮದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂಬ ಮಾತಿದೆ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಯುವಕನೊಬ್ಬ ಪೊಲೀಸರ ಕಾರ್ಯಾಚರಣೆಗೆ ಸಾಥ್‌ ನೀಡುವ ಮೂಲಕ ಖತರ್ನಾಕ್‌ ಕಳ್ಳರ ಗ್ಯಾಂಗ್‌ನ ನಾಲ್ಕು ಜನ ಮಹಿಳೆಯರು ಸೇರಿದಂತೆ 11 ಜನ ಬಂಧನಕ್ಕೆ ನೆರವಾಗಿದ್ದಾರೆ.

Advertisement

ಹೌದು, ಮೈಸೂರಿನ ವಿಜಯನಗರ ನಿವಾಸಿ ಪ್ರತಾಪ್‌ರಾಜ್‌ ಎಂಬುವರೇ ಪೊಲೀಸರ ಕಾರ್ಯಾಚರಣೆಯಲ್ಲಿ ಕೈಜೋಡಿಸಿ ಸಾಹಸ ಪ್ರವೃತ್ತಿ ಮೆರೆದವರು. ಕಳೆದ 2017ರ ಡಿಸೆಂಬರ್‌ನಲ್ಲಿ ಮಂಡ್ಯ ಪೊಲೀಸರು ಮೈಸೂರಿನಲ್ಲಿ ನಡೆದ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಸಾಥ್‌ ನೀಡಿದ ಪ್ರತಾಪ್‌, ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಗಳ್ಳತನ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾ¸‌ರಣ ದೋಚಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಅಡ್ಡಾಡುತ್ತಿದ್ದ ಖತರ್ನಾಕ್‌ ಕಳ್ಳರ ಗ್ಯಾಂಗ್‌ವೊಂದರ ಬಂಧನದಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಸಾಹಸ ಪ್ರವೃತ್ತಿ ಮೆರೆದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ: ಕಳೆದ ಒಂದೂವರೆ ವರ್ಷದಿಂದ ಮಂಡ್ಯ ಜಿಲ್ಲಾಧ್ಯಂತ ನಡೆಯುವ ಜಾತ್ರೆ ಸಂದ¸‌ìಗಳಲ್ಲಿ ಸಾಕಷ್ಟು ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿತ್ತು. ಹೀಗಾಗಿ ಈ ಪ್ರಕರಣವನ್ನು ಪತ್ತೆಹಚ್ಚುವ ಸಲುವಾಗಿ ವಿಶೇಷ ತಂಡವೊಂದನ್ನು ರಚಿಸಿ, ಆಪರೇಷನ್‌ ಸೋನಾ ಹೆಸರಿನೊಂದಿಗೆ ಮಂಡ್ಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಹೀಗೆ ಸರಗಳ್ಳರ ಬೇಟೆಗೆ ಹೊರಟ ಪೊಲೀಸರಿಗೆ ಆರೋಪಿಗಳು ಮೈಸೂರಿನಲ್ಲಿ ಅಡ್ಡಾಡುತ್ತಿರುವ ಬಗ್ಗೆ ಒಂದಿಷ್ಟು ಸುಳಿವು ಲಭಿಸಿದ್ದು,

ಡಿ.20ರಂದು ಮೈಸೂರಿಗೆ ಬಂದ ಮಂಡ್ಯ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ಬೆಳಗ್ಗೆ 9 ಗಂಟೆ ಸಮಯದಲ್ಲಿ (ಕೆಎ-09,ಸಿ-7539) ತವೇರ ಕಾರಿನಲ್ಲಿ ಹೋಗುತ್ತಿದ್ದ ಸರಗಳ್ಳರನ್ನು ಚೇಸ್‌ ಮಾಡಿಕೊಂಡು ಹೊರಟಿದ್ದಾರೆ. ಆರೋಪಿಗಳ ಸೆರೆಹಿಡಿಯಲು ಎಲ್ಲಾ ರೀತಿಯಲ್ಲೂ ಸಜಾjಗಿದ್ದ ಪೊಲೀಸರು ಇನ್ನೇನು ತವೇರ ವಾಹನವನ್ನು ಅಡ್ಡಹಾಕಬೇಕು ಎನ್ನುವಷ್ಟರಲ್ಲಿ ದುರಾದೃಷ್ಟವಶಾತ್‌ ಪೊಲೀಸರು ತೆರಳುತ್ತಿದ್ದ ವಾಹನದ ಕ್ಲಚ್‌ ವೈಯರ್‌ ಕಟ್ಟಾಗಿ ಅರ್ಧದಲ್ಲೇ ಕೆಟ್ಟುನಿಂತಿದೆ.

ಕಳ್ಳರ ಬೆನ್ನಟ್ಟಿದ ಪ್ರತಾಪ್‌: ತಮ್ಮ ವಾಹನ ಕೈಕೊಡುತ್ತಿದ್ದಂತೆ ಕಾರ್ಯಾಚರಣೆ ನಿಲ್ಲಿಸದ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯಲೇಬೇಕೆಂದು ಹಠಕ್ಕೆ ಬಿದಿದ್ದಾರೆ. ಈ ವೇಳೆ ಹಲಗೂರು ಪೊಲೀಸ್‌ ಠಾಣೆ ಪಿಎಸ್‌ಐ ಶ್ರೀಧರ್‌, ತಮ್ಮ ಸ್ನೇಹಿತ ಪ್ರತಾಪ್‌ ಅವರಿಗೆ ನಡೆದ ವಿಷಯವನ್ನು ತಿಳಿಸಿ, ಕೂಡಲೇ ಸ್ಥಳಕ್ಕೆ ಬರುವಂತೆ ಕೋರಿದ್ದಾರೆ. ಈ ವೇಳೆ ತಮ್ಮ ಮಾರುತಿ ಸ್ವಿಪ್ಟ್ ಕಾರಿನೊಂದಿಗೆ ಸ್ಥಳಕ್ಕೆ ದಾವಿಸಿದ ಪ್ರತಾಪ್‌, ಕಾರ್ಯಾಚರಣೆಗೆಂದು ಬಂದಿದ್ದ ಪೊಲೀಸರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಸರಗಳ್ಳರ ಕಾರನ್ನು ಚೇಸ್‌ ಮಾಡಿಕೊಂಡು ಹೋಗಿದ್ದಾರೆ.

Advertisement

ಅಷ್ಟರಲ್ಲಾಗಲೇ ಮೈಸೂರಿನ ಬೋಗಾದಿಯ ಗದ್ದಿಗೆ ರಸ್ತೆಯಲ್ಲಿ ಅಂದಾಜು 20 ಕಿ.ಮೀ.ಗೂ ಹೆಚ್ಚು ಮುಂದಿದ್ದ ಕಾರನ್ನು ವೇಗವಾಗಿ ಬೆನ್ನಟ್ಟಿದ ಪೊಲೀಸ್‌ ತಂಡ, ಗದ್ದಿಗೆ ಸಮೀಪ ತವೇರಾ ಕಾರನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಕಾರಿನಲ್ಲಿದ್ದ ನಾಲ್ಕೈದು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರು ನಾಲ್ಕು ಮಹಿಳೆಯರು ಸೇರಿದಂತೆ ಹನ್ನೊಂದು ಜನ ಆರೋಪಿಗಳನ್ನು ಬಂಧಿಸಿ, 24 ಲಕ್ಷ ರೂ. ಮೌಲ್ಯದ 850 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ನನ್ನ ಸ್ನೇಹಿತರಾದ ಪಿಎಸ್‌ಐ ಶ್ರೀಧರ್‌ ಅವರು ಸರಗಳ್ಳರ ಬಂಧನಕ್ಕಾಗಿ ನಡೆಸುತ್ತಿದ್ದ ಕಾರ್ಯಾಚರಣೆಗೆ ಒಂದಿಷ್ಟು ನೆರವಾಗಿದ್ದೆ. ಅಂದು ಆರೋಪಿಗಳನ್ನು ಚೇಸ್‌ ಮಾಡುವಾಗ ವಾಹನ ಕೈಕೊಟ್ಟ ವಿಷಯ ತಿಳಿಸುತ್ತಿದ್ದಂತೆ ಸ್ಥಳಕ್ಕೆ ತೆರಳಿದೆ. ನಂತರ ಪೊಲೀಸರೊಂದಿಗೆ ನನ್ನ ಕಾರಿನಲ್ಲೇ ಸರಗಳ್ಳರು ಹೋಗುತ್ತಿದ್ದ ವಾಹನವನ್ನು ಚೇಸ್‌ ಮಾಡಿದೆ. ತಮಗೆ ನಿಜಕ್ಕೂ ಇದೊಂದು ರೋಮಾಂಚನಕಾರಿ ಅನುಭವ ನೀಡಿತು, ಪೊಲೀಸರ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದು ಖುಷಿಕೊಟ್ಟಿದೆ.
-ಪ್ರತಾಪ್‌ರಾಜ್‌, ಪೊಲೀಸರಿಗೆ ನೆರವಾದ ಯುವಕ.

* ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next