Advertisement

ಬಿಹಾರದಲ್ಲಿ ಇಯರ್‌ ಫೋನ್‌ ಧಾರಿ ತರುಣ ರೈಲು ಢಿಕ್ಕಿಯಾಗಿ ಸಾವು

03:30 PM May 27, 2017 | Team Udayavani |

ನವಾಡಾ : ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡು ಸಂಗೀತವನ್ನು ಆಲಿಸುತ್ತಾ ಲೋಕವನ್ನೇ ಮರೆತವನಂತೆ ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ತರುಣನೊಬ್ಬನ ಮೇಲೆ ರೈಲು ಹರಿದು ಆತ ದಾರುಣವಾಗಿ ಸಾವಪ್ಪಿರುವ ಘಟನೆ ಬಿಹಾರದ ನವಾಡಾ ಜಿಲ್ಲೆಯಲ್ಲಿ ನಡೆದಿದೆ. 

Advertisement

ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡಿದ್ದ ತರುಣನಿಗೆ ತನ್ನತ್ತ ಧಾವಿಸಿ ಬರುತ್ತಿದ್ದ ಗಯಾ-ಕಿಯೂಲ್‌ ಪ್ಯಾಸೆಂಜರ್‌ ಟ್ರೈನ್‌ನ  ವ್ಹಿಸಲ್‌ ಕೂಡ ಕೇಳಿಸಲಿಲ್ಲ; ಪರಿಣಾಮವಾಗಿ ರೈಲು ಆತನ ಮೇಲೆ ಹರಿದು ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮೃತ ತರುಣನನ್ನು 18ರ ಹರೆಯದ ರಾಜೀವ್‌ ರಂಜನ್‌ ಎಂದು ಗುರುತಿಸಲಾಗಿದೆ ಎಂದು ಸರಕಾರಿ ರೈಲ್ವೇ ಪೊಲೀಸ್‌ ಠಾಣಾಧಿಕಾರಿ ಕರೂ ಚೌಧರಿ ತಿಳಿಸಿದ್ದಾರೆ. ಮೃತ ತರುಣನು ರೋಹ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ದುನಿಯಾವಾನ್‌ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ. 

ರಂಜನ್‌ನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆತನ ಮನೆಯವರಿಗೆ ಒಪ್ಪಿಸಲಾಗಿದ ಎಂದು ಎಸ್‌ಎಚ್‌ಓ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next