Advertisement

ಯುವ ಶಕ್ತಿ ಹೆಚ್ಚು ಕೌಶಲ್ಯ ರೂಢಿಸಿಕೊಂಡರೆ ದೇಶ ಅಭಿವೃದ್ಧಿ

09:34 PM Jul 17, 2019 | Lakshmi GovindaRaj |

ಚಾಮರಾಜನಗರ: ಕೌಶಲ್ಯವನ್ನು ಯುವ ಶಕ್ತಿ ಹೆಚ್ಚಿನ ರೀತಿಯಲ್ಲಿ ರೂಢಿಸಿಕೊಂಡರೆ, ಆರ್ಥಿಕ ಅಭಿವೃದ್ಧಿ ಹೊಂದುವ ಜೊತೆಗೆ ದೇಶ ಪ್ರಗತಿಯಾಗುತ್ತದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕ ಕೆ.ವಿ.ರಾಜೇಂದ್ರ ಪ್ರಸಾದ್‌ ಅಭಿಪ್ರಾಯಪಟ್ಟರು.

Advertisement

ನಗರ ಸಮೀಪದ ಮರಿಯಾಲ ಜೆಎಸ್‌ಎಸ್‌ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ 2019-20ನೇ ಸಾಲಿನ ವಿಶ್ವ ಯುವಕರ ಕೌಶಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೌಶಲ್ಯ ತರಬೇತಿ ನೀಡಿ: ಯುವಶಕ್ತಿ ದೇಶದ ಆಸ್ತಿ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ದೇಶ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಪದವಿ ಜೊತೆಗೆ ಕೌಶಲ್ಯ ತರಬೇತಿಯನ್ನು ನೀಡಿ, ಅವರಲ್ಲಿ ಹೆಚ್ಚಿನ ಅತ್ಮವಿಶ್ವಾಸವನ್ನು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನುಷ್ಠಾನ ಮಾಡಿದೆ ಎಂದು ತಿಳಿಸಿದರು.

ಉತ್ತಮ ಸಾಧನೆ ನಿರೀಕ್ಷಿಸಲು ಸಾಧ್ಯ: ಯುವಕರು ಯಾವುದೇ ರೀತಿಯ ಅನುಭವ ಹಾಗೂ ಕೌಶಲ್ಯ ಇಲ್ಲದೇ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮೊದಲು ಅವರಿಗೆ ಕೌಶಲ್ಯ ತರಬೇತಿಯನ್ನು ನೀಡಿ, ಬಳಿಕ ಅವರಿಂದ ಉತ್ತಮ ಸಾಧನೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿದೆ ಎಂದರು.

ಆರ್ಥಿಕ ಪ್ರಗತಿ ಹೊಂದಲು ಸಾಧ್ಯ: ನಮ್ಮ ದೇಶದಲ್ಲಿ ಕೌಶಲ್ಯ ಪಡೆದು ಉದ್ಯೋಗಕ್ಕಾಗಿ ಹೊರ ರಾಷ್ಟ್ರಗಳಿಗೆ ಹೋಗುವುದರಿಂದ ಆ ದೇಶದ ಅಭಿವೃದ್ಧಿ ಯಾಗುತ್ತಿದೆ. ನಮ್ಮ ದೇಶದ ಬಹಳಷ್ಟು ಮಂದಿ ಆಮೆರಿಕಾ ಇತರೇ ಮುಂದುವರಿದ ರಾಷ್ಟ್ರಗಳಲ್ಲಿ ಉದ್ಯೊಗ ಪಡೆದುಕೊಂಡಿರುವುದರಿಂದ ಆ ದೇಶಗಳು ಅಭಿವೃದ್ಧಿಯಾಗುತ್ತಿದೆ.

Advertisement

ಇದನ್ನು ತಪ್ಪಿಸಲು ಇಲ್ಲಿನ ಸಂಪನ್ಮೂಲವನ್ನು ಕ್ರೋಢಿಕರಿಸಿ, ಕೌಶಲ್ಯ ತರಬೇತಿ ಪಡೆದು ಇಲ್ಲಿಯೇ ಉದ್ಯೋಗವನ್ನು ಪಡೆದುಕೊಂಡಾಗ ದೇಶ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಗತಿಯಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೌಶಲ್ಯ ತರಬೇತಿ ಹೊಂದಿ ಆರ್ಥಿಕ ಪ್ರಗತಿಯನ್ನು ಹೊಂದಲು ಮುಂದಾಗಬೇಕು ಎಂದು ತಿಳಿಸಿದರು.

ದೇಶದ ಅಭಿವೃದ್ಧಿ ಮುಖ್ಯ: ಜೆಎಸ್‌ಎಸ್‌ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಸಿ. ಈರಪ್ಪಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ತಾಂತ್ರಿಕತೆ ಬಹಳ ಬದಲಾವಣೆಯನ್ನು ಹೊಂದಿದೆ. ಅಭಿವೃದ್ಧಿಯನ್ನು ಸಹ ಹೊಂದುತ್ತಿದೆ.

ಇದೆಲ್ಲವೂ ಕೌಶಲ್ಯದಿಂದಲೇ ಮಾತ್ರ ಸಾಧ್ಯ. ಚೀನಾ ಜನರನ್ನೇ ಸಂಪತ್ತು ಮಾಡಿ ಕೌಶಲ್ಯದಲ್ಲಿ ಅಭಿ ವೃ ದ್ಧಿ ಹೊಂದಿದೆ. ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯ ಬಹಳ ಮುಖ್ಯ. ಯುವಕರು ಕೌಶಲ್ಯ ಗಳಿಸಿಕೊಂಡು ತಾವು ಅಭಿವೃದ್ಧಿ ಹೊಂದುವ ಜೊತೆಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ಜೆಎಸ್‌ಎಸ್‌ ಐಟಿಐ ಅಧೀಕ್ಷಕ ಕೆ.ಎನ್‌. ಶಶಿಧರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಪ್ರತಿಯೊಬ್ಬರು ಕೌಶಲ್ಯವನ್ನು ಅಳವಡಿಸಿಕೊಂಡಾಗ ತಾವು ಹೋಗುವ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿ ಆತ್ಮವಿಶ್ವಾಸವನ್ನು ಮೂಡಿಸಿಕೊಳ್ಳಲು ಸಾಧ್ಯವಿದೆ ಎಂದರು. ಸಂಸ್ಥೆಯ ಎನ್‌. ಪ್ರಕಾಶ್‌, ಜಿ.ಎಂ.ಬಸವರಾಜು, ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next