Advertisement

ಕವಿಸಂ ಯುವಜನ ಮಂಟಪ ಸಲಹಾ ಸಮಿತಿ ರಚನೆ 

04:25 PM Jun 20, 2018 | Team Udayavani |

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪದ ಕಾರ್ಯ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ
ಪ್ರಾರಂಭಿಸುವಲ್ಲಿ ನೆರವಾಗಲು ಹತ್ತು ಜನರ ಸಲಹಾ ಸಮಿತಿಯೊಂದನ್ನು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಯುವಜನ ಮಂಟಪದ ಸಂಚಾಲಕ ಸತೀಶ ತುರಮರಿ ನೇತೃತ್ವದಲ್ಲಿ ರಚಿಸಲಾಯಿತು.

Advertisement

ಸಂಘದ ಸಭಾಭವನದಲ್ಲಿ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ, ಕನ್ನಡ ನಾಡು ನುಡಿಗಾಗಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೇವೆ ಸಲ್ಲಿಸುತ್ತಿರುವ ಸಂಘದ ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.

ಮುಂಬರುವ ದಿನದಲ್ಲಿ ಯುವಜನರಲ್ಲಿ ಸಾಹಿತ್ಯಿಕ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಶಾಲಾ-ಕಾಲೇಜು, ವಸತಿ ನಿಲಯ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಮಾರಂಭಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಯಿತು. ಯುವಜನರಲ್ಲಿ ಸಾಹಿತ್ಯಿಕ ಬೆಳವಣಿಗೆ ಬೆಳೆಸುವುದರ ಜೊತೆಗೆ ದುಶ್ಚಟಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡ ಪರ ಕಾರ್ಯಕ್ರಮ ರೂಪಿಸುವುದು, ಆರೋಗ್ಯಕರ ಶಿಬಿರ ಹಾಗೂ ವಿಚಾರ ಸಂಕಿರಣ, ಗೋಷ್ಠಿ ಏರ್ಪಡಿಸುವುದು. ಸೆಟ್‌, ನೆಟ್‌, ಕೆಎಎಸ್‌-ಐಎಎಸ್‌ ಹಾಗೂ ಉದ್ಯೋಗದ ಮಾಹಿತಿ, ಕಾನೂನು ಮಾಹಿತಿ ಒದಗಿಸುವ ಹಾಗೂ ಯುವಕ ಮಂಡಳಗಳನ್ನು ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ವಿಜ್ಞಾನ- ಮೂಢನಂಬಿಕೆಗಳ ತಿಳಿವಳಿಕೆ ಕುರಿತ ಸಮ್ಮೇಳನ ಆಯೋಜನೆ, ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪುರಸ್ಕಾರ ಹಾಗೂ ಹೆಲ್ಮೆಟ್‌ ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶನ ಏರ್ಪಡಿಸಲು ಸಭೆ ಅಭಿಪ್ರಾಯಪಟ್ಟಿತು.

ಸಲಹಾ ಸಮಿತಿ: ಸದಸ್ಯರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ, ಚನ್ನಬಸು ನೂಲ್ವಿ, ಪ್ರಕಾಶ ಮಲ್ಲಿಗವಾಡ, ವೈ.ಬಿ. ಕಡಕೋಳ, ಬಾಬಾಜಾನ ಮುಲ್ಲಾ, ಅನಿಲ ಮೇತ್ರಿ, ರಾಜೀವಸಿಂಗ್‌ ಆರ್‌. ಹಲವಾಯಿ, ಕಲ್ಲನಗೌಡ ಶಿದ್ಧಾಪುರ, ಸಿ.ಸಿ. ಮುಂಡಾಸ್‌, ರಾಜಶೇಖರ ಅಂಗಡಿ ಸೇರಿದಂತೆ ಹತ್ತು ಜನರ ಸಮಿತಿ ರಚನೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next