ಈ ತರಹದ ಕಾಂಬಿನೇಶನ್ ಚಿತ್ರರಂಗದಲ್ಲಿ ಸಿಗೋದು ಅಪರೂಪ. ಆದರೆ, ಈ ಅಪರೂಪ ಈಗ ಜರುಗಿದೆ. ಅದು ಲೈಫ್ ಜೊತೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರೋದು “ಲೈಫ್ ಜೊತೆ ಒಂದ್ ಸೆಲ್ಫಿ’ ಸಿನಿಮಾ ಬಗ್ಗೆ. ದಿನಕರ್ ತೂಗುದೀಪ ಈ ಸಿನಿಮಾದ ನಿರ್ದೇಶಕರು.
Advertisement
ದಿನಕರ್ ಪತ್ನಿ ಮಾನಸ ದಿನಕರ್ ಈ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಹೆಂಡ್ತಿ ಕಥೆ ಇಷ್ಟವಾಗಿ ದಿನಕರ್ ಈಗ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಕೂಡಾ ನಡೆದು ಹೋಗಿದೆ. ದಿನಕರ್ ತೂಗುದೀಪ “ಸಾರಥಿ’ ನಂತರ ಯಾವ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಈಗ ಐದು ವರ್ಷಗಳ ನಂತರ ಹೆಂಡ್ತಿ ಕಥೆ ಮೂಲಕ ದಿನಕರ್ ವಾಪಾಸ್ಸಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದಮಾನಸ ಅವರು ಕಥೆ ಮಾಡುತ್ತಿದ್ದರಂತೆ. ಕಥೆಯ ಲೈನ್ ಅನ್ನು ದಿನಕರ್‌ಗೆ ಹೇಳಿದಾಗ, ಲೈನ್ ಚೆನ್ನಾಗಿದ್ದು, ಮತ್ತಷ್ಟು ಡೆವಲಪ್ ಮಾಡುವಂತೆ ಹೇಳಿದ್ದರಂತೆ. “ಮಾನಸ ಒಂದೂವರೆ ವರ್ಷಗಳಿಂದ ಕಥೆ ಮಾಡಿಕೊಂಡಿದ್ದಾಳೆ. ಡೆವಲಪ್ ಮಾಡುತ್ತಾ ಕಥೆ ತುಂಬಾ ಚೆನ್ನಾಗಿ ಬಂತು. ಹಾಗಾಗಿ, ಈಗ ಸಿನಿಮಾ ಮಾಡುವ ಹಂತಕ್ಕೆ ಬಂದಿದೆ.
Related Articles
ಮಾತು. ಚಿತ್ರದಲ್ಲಿ ಸುಧಾರಾಣಿ, ಪ್ರಜ್ವಲ್ ಅವರ ತಾಯಿಯಾಗಿ ನಟಿಸುತ್ತಿದ್ದಾರೆ. ಇದು ಕೂಡಾ ಪ್ರಜ್ವಲ್‌ಗೆ ಖುಷಿಕೊಟ್ಟಿದೆ. “ನನ್ನ ತಂದೆ ಜೊತೆ ಸುಧಾರಾಣಿಯವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರ ಜೊತೆ ನನಗೆ ನಟಿಸುವ ಅವಕಾಶ ಸಿಕ್ಕಿದೆ’ ಎಂದು ಹೇಳಿಕೊಂಡ
ಪ್ರಜ್ವಲ್, ಇಡೀ ತಂಡದ ಗುಣಗಾನ ಮಾಡಿದರು.
Advertisement
ಚಿತ್ರದಲ್ಲಿ ಪ್ರೇಮ್ ಸಾಫ್ಟ್ವೇರ್ ಕ್ಷೇತ್ರದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು 11 ವರ್ಷಗಳ ನಂತರ ಮತ್ತೆ ದಿನಕರ್ ನಿರ್ದೇಶನದಲ್ಲಿ ನಟಿಸುವ ಖುಷಿ ಪ್ರೇಮ್‌ಗಿದೆ. “ಸಾಮಾನ್ಯವಾಗಿ ಹೊಸಬರು ನನಗೆ ಅವಕಾಶ ಕೊಡುತ್ತಾರೆ. ಅಂದು ದಿನಕರ್ ತಮ್ಮ ಮೊದಲ ನಿರ್ದೇಶನದಲ್ಲಿ ನನಗೆ ಅವಕಾಶ ಕೊಟ್ಟರು. ಈಗ ಅವರ ಪತ್ನಿ ಮಾನಸ ಅವರು ಮೊದಲ ಬಾರಿಗೆ ಕಥೆ ಬರೆದ ಸಿನಿಮಾದಲ್ಲೂ ನನಗೆ ಅವಕಾಶ ಸಿಕ್ಕಿದೆ. ಸಾಫ್ಟ್ವೇರ್ ಉದ್ಯಮದಲ್ಲಿರುವ ಒಬ್ಬ ವ್ಯಕ್ತಿ. ಇಡೀ ಕಥೆ ತುಂಬಾ ಚೆನ್ನಾಗಿದೆ’ ಎಂಬುದು ಪ್ರೇಮ್ ಮಾತು.
ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ತುಂಬಾ ಕನಸು ಕಟ್ಟಿಕೊಂಡು ತನ್ನ ಜೀವನದ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ದಿಟ್ಟ ಹುಡುಗಿಯ ಪಾತ್ರವಂತೆ. “ಮಾನಸ ಅವರ ಕಥೆ ತುಂಬಾ ಸ್ಟ್ರಾಂಗ್ ಆಗಿದೆ. ಅವರೊಬ್ಬ ಹೆಣ್ಣಾಗಿ ನಾಯಕಿ ಪಾತ್ರವನ್ನು ತುಂಬಾ ವಿಭಿನ್ನವಾಗಿ ನೋಡಿದ್ದಾರೆ. ರಶ್ಮಿ ಎನ್ನುವ ವಯಸ್ಸಿಗೆ ತಕ್ಕುದಾದ ಪಾತ್ರ ಸಿಕ್ಕಿದೆ’ ಎನ್ನುತ್ತಾರೆ ಹರಿಪ್ರಿಯಾ. ಸುಧಾರಾಣಿ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದು, ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಂಡರು.
ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ದಿನಕರ್ ಅವರ ಮೊದಲ ಸಿನಿಮಾ “ಜೊತೆ ಜೊತೆಯಲಿ’ ಮೂಲಕ ಸಂಗೀತ ನಿರ್ದೇಶಕರಾದ ಹರಿಕೃಷ್ಣ ಈಗ 100 ಸಿನಿಮಾಗಳನ್ನು ಮಾಡಿದ್ದಾರೆ. ದಿನಕರ್ ಜೊತೆ ಕೆಲಸ ಮಾಡುವ ಅನುಭವ ಹಂಚಿಕೊಂಡರು ಹರಿಕೃಷ್ಣ. ಚಿತ್ರಕ್ಕೆಕವಿರಾಜ್, ಯೋಗರಾಜ್ ಭಟ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ರಘು ಶಾಸ್ತ್ರಿ ಸಂಭಾಷಣೆ, ನಿರಂಜನಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ಸುಮಾರು 30 ದಿನಗಳ ಕಾಲ ಗೋವಾ ಹಾಗೂ 20 ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ರವಿಪ್ರಕಾಶ್ ರೈ