ನಮಗೆ ಬಟ್ಟೆ ಖರೀಸುವ ವೇಳೆ ಸಾಕಷ್ಟು ಬಾರಿ ಯೋಚಿಸುತ್ತೇವೆ. ಹಲವು ಶೋ ರೂಂ, ದೊಡ್ಡ ದೊಡ್ಡ ಮಾಲ್ ಗಳಿಗೆ ಅಲೆಯುತ್ತೇವೆ. ನೂರೆಂಟು ಬಗೆಯ ಉಡುಗೆಗಾಗಿ ತಡಕಾಡುತ್ತೇವೆ. ಕೊನೆಗೊಂದು ಕೊಂಡುಕೊಳ್ಳುತ್ತೇವೆ. ಕಾರಣ ಅವು ನಮಗೆ ಅರಾಮಾದಾಯಕ ಮತ್ತು ಸೊಗಸಾಗಿ ಕಾಣಬೇಕೆಂಬುದು ನಮ್ಮ ಉದ್ದೇಶವಾಗಿರುತ್ತವೆ.
ಒಂದು ಸಣ್ಣ ಪ್ಯಾಂಟ್ ಕೊಂಡುಕೊಳ್ಳಲು ನೂರಾರು ಅಂಗಡಿಗಳಿಗೆ ಅಲೆಯುವ ಎಷ್ಟೋ ಜನರು, ತಮ್ಮ ಮಕ್ಕಳ ಬಟ್ಟೆ ಆಯ್ಕೆ ಮಾಡಲು ಅಷ್ಟೊಂದು ಸಮಯ ನೀಡುವುದಿಲ್ಲ. ಆದರೆ, ಪುಟ್ಟ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಸರಿಹೊಂದುವ, ಅವರಿಗೆ ಅರಾಮದಾಯಕ ಹಾಗೂ ನೋಡಲು ಸುಂದರವಾಗಿಯೂ ಕಾಣುವಂತಹ ಉಡುಗೆ ತೊಡುಗೆ ಆಯ್ಕೆ ಮಾಡುವುದರತ್ತ ಗಮನ ಹರಿಸುವುದು ಕೂಡ ಮುಖ್ಯ.
ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಬಟ್ಟೆಗಳು ಲಗ್ಗೆ ಇಟ್ಟಿವೆ. ಆಫ್ ಲೈನ್ ಇರಬಹುದು ಅಥವಾ ಆನ್ ಲೈನ್ ನಲ್ಲಿರಬಹುದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಉಡುಪುಗಳು ನಮ್ಮ ಕಣ್ಣು ಮುಂದೆ ಇವೆ.
1 ) ಉದ್ದನೇಯ ಉಡುಗೆ : ಈ ಬಗೆಯ ಉಡುಪು ಮೊಣಕಾಲಿನ ವರೆಗೆ ಇರುತ್ತೆ. ರೌಂಡ್ ನೆಕ್ ಹೊಂದಿರುವ ಇದು ನೋಡಲು ಅಂದವಾಗಿ ಕಾಣುತ್ತೆ. ಸಂಪೂರ್ಣ ಹತ್ತಿಯಿಂದಲೇ ಸಿದ್ಧವಾಗಿರುವುದರಿಂದ ಮಕ್ಕಳಿಗೆ ಅರಾಮಾದಾಯಕ. ಅರ್ಧ ತೋಳುಗಳ ಈ ಉಡುಪು ಹಲವು ವಿಧದ ಬಣ್ಣಗಳಲ್ಲಿ ಲಭ್ಯ. ಆನ್ ಲೈನ್ ನಲ್ಲಿ ಇದರ ಬೆಲೆ 650 ರೂ.
2) ಸ್ಟೈಲೋಬಗ್ ಫಿಟ್ & ಫ್ಲೇರ್ ಕ್ಯಾಶುಯಲ್ ಉಡುಗೆ : ಇದು 4-5 ವರ್ಷದ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದಂತಹ ಉಡುಪು. ಪಾಲಿಸ್ಟರ್ ನಿಂದ ತಯಾರಿಸಲ್ಪಟ್ಟ ಇದರ ಮೇಲೆ ಬಣ್ಣ ಬಣ್ಣದ ಚಿತ್ತಾರಗಳಿವೆ. ಹಾಫ್ ಶೋಲ್ಡರ್ ಬಗೆಯ ಸ್ಟೈಲಿಶ್ ನೆಕ್ ಇದೆ. ಆನ್ ಲೈನ್ ನಲ್ಲಿ ಇದರ ಬೆಲೆ 599 ರೂ.
3) ರೌಂಡ್ ನೆಕ್ ಲೈನ್ ಇರುವ ಉಡುಗೆ ಖರೀದಿ ಕಡಿಮೆ ಮಾಡಿ : ಇನ್ನು ಮಾರುಕಟ್ಟೆಯಲ್ಲಿ ಹಲವು ಬಗೆಯ ಬಟ್ಟೆಗಳು ಲಗ್ಗೆ ಇಟ್ಟಿರುತ್ತವೆ. ಆದರೆ, ರೌಂಡ್ ನೆಕ್ ಜತೆಗೆ ಲೈನ್ ಇರುವ ಬಟ್ಟೆ ಖರೀದಿಸುವುದು ಕಡಿಮೆ ಮಾಡುವುದು ಉತ್ತಮ. ಅದರ ಬದಲಾಗಿ ಸಂಪೂರ್ಣ ರೌಂಡ್ ಕೊರಳಿನ ಬಟ್ಟೆಗಳು ಸಾಕಷ್ಟು ಲಭ್ಯ ಇವೆ. ಆನ್ ಲೈನ್ ನಲ್ಲಿ ಇದರ ಬೆಲೆ 799 ರೂ.
4) ಸ್ಕೇಟರ್ ಮಿನಿ ಉಡುಗೆ : ಸಂಪೂರ್ಣ ಹತ್ತಿಯಿಂದ ( ಕಾಟನ್ ) ತಯಾರಾಗಿರುವ ಈ ಉಡುಗೆಯಲ್ಲಿ ಅಂದವಾದ ಹೂವಿನ ಚಿತ್ತಾರಗಳಿವೆ. ತೋಳುರಹಿತ ಈ ಮಿನಿ ಸ್ಕರ್ಟ್ ಗಳಲ್ಲಿ ಹೆಣ್ಣು ಮಕ್ಕಳು ಅಂದವಾಗಿ ಕಾಣುತ್ತಾರೆ. ಜತೆಗೆ ಇದು ಅವರಿಗೆ ಅರಾಮಾದಾಯ. ಆನ್ ಲೈನ್ ನಲ್ಲಿಇದರ ಬೆಲೆ 389 ರೂ.