Advertisement
- ಕೃಷಿ ಸಾಧಕ ನಾರಾಯಣ ರೆಡ್ಡಿ, ಯುವಕರಿಗೆ ನೀಡಿದ ಸಲಹೆ ಇದು.
Related Articles
ಅಂದುಕೊಂಡಿದ್ದೆ. ಆದರೆ, ಅದರಲ್ಲಿನ ಮೋಸ-ವಂಚನೆ ಮನಸ್ಸಿಗೆ ಕಿರಿಕಿರಿ ಉಂಟುಮಾಡಿತು.
Advertisement
ಹಾಗಾಗಿ, 8 ವರ್ಷಗಳ ನಂತರ ಹಳ್ಳಿಗೆ ಹಿಂತಿರುಗಿದೆ. ತಂದೆಯ ಒಂದೂವರೆ ಎಕರೆ ಜಮೀನು ಇತ್ತು. ನಾನು ದುಡಿದು ಸಂಗ್ರಹಿಸಿಟ್ಟ 45 ಸಾವಿರ ರೂ. ಇತ್ತು. ಅದರಿಂದ ಜಮೀನು ಖರೀದಿಸಿ, ವ್ಯವಸಾಯದಲ್ಲಿ ತೊಡಗಿಕೊಂಡೆ’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಉಪಸ್ಥಿತರಿದ್ದರು. ತಿಂಗಳ ಅತಿಥಿಗೆ ಪ್ರೇಕ್ಷಕರ ಪ್ರಶೆ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಬರುವುದು ಯಾವಾಗ? ರೈತರು ಆರು ತಿಂಗಳ ಮಟ್ಟಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಆಗ, ಬೆಲೆಯೂ ಬರುತ್ತದೆ. ಪ್ರಧಾನಿ, ಸಿಎಂನಿಂದ ಹಿಡಿದು ಎಲ್ಲರೂ ರೈತರ ಬಳಿ ಬರುತ್ತಾರೆ.
ಕೃಷಿ ಮಾಡ್ಬೇಕಂತಾ ಆಸೆ ಇದೆ. ಆದರೆ, ಭೂಮಿ ಇಲ್ವಲ್ಲಾ? ಕೇವಲ 3-4 ಗುಂಟೆ ಜಮೀನನ್ನು ಗುತ್ತಿಗೆ ಪಡೆಯಿರಿ ಸಾಕು. ಅದರಲ್ಲಿ ತರಕಾರಿ, ಹಣ್ಣು ಬೆಳೆಯಿರಿ. ದುಡ್ಡಿದ್ದರೂ ರಾಜ್ಯದಲ್ಲಿ ಭೂಮಿ ಸಿಗದಿದ್ದರೆ, 30 ಕಿ.ಮೀ. ದೂರದಲ್ಲಿರುವ ತಮಿಳುನಾಡಿನಲ್ಲಿ ಭೂಮಿ ಖರೀದಿಸಿ. ಅದಕ್ಕೂ ಮೊದಲು ಕೃಷಿ ತರಬೇತಿ ಪಡೆಯಿರಿ.
ಜಿಎಂ ತಳಿಗಳು ಮಾರಕವೇ? ಈ ಬಗ್ಗೆ ಪರ-ವಿರೋಧ ಎರಡೂ ಇವೆ. ಆದರೆ, ವಿಜ್ಞಾನಿಗಳು ಯಾಕೆ ಇಷ್ಟು ತರಾತುರಿಯಲ್ಲಿ ಇದನ್ನು ತುಂಬುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅದೇನೇ ಇರಲಿ, ಈ ಕುರಿತು ನನಗೂ ಗೊಂದಲವಿದೆ. ಕೃಷಿಗೂ ವಾಸ್ತು ಇದೆಯಾ? ವೈಜ್ಞಾನಿಕವಾಗಿ ಹೇಳುವುದಾದರೆ ಆಗ್ನೇಯ ದಿಕ್ಕಿಗೆ ತುಸು ಎತ್ತರ ಇರಬೇಕು ಹಾಗೂ ಈಶಾನ್ಯದಲ್ಲಿ ಇಳಿಜಾರು ಇರಲಿ. ಇದರಿಂದ ಬೆಳೆಗಳ ಮೇಲೆ ಎಳೆಬಿಸಿಲು ಬೀಳುವುದರಿಂದ ಉತ್ತಮ.
ಶ್ರೀ ಪದ್ಧತಿ ಕಾವೇರಿ ವಿವಾದಕ್ಕೆ ಪರಿಹಾರ
ಕರ್ನಾಟಕ-ತಮಿಳುನಾಡು ರೈತರು ಶ್ರೀ ಪದ್ಧತಿಯಲ್ಲಿ ಭತ್ತ ಬೆಳೆದರೆ, ಕಾವೇರಿ ವಿವಾದವನ್ನೇ ಬಗೆಹರಿಸಬಹುದು ಎಂದು ಕೃಷಿಕ ನಾರಾಯಣ ರೆಡ್ಡಿ ತಿಳಿಸಿದರು. ಒಣಭೂಮಿಯಲ್ಲಿ ಭತ್ತ ಬೆಳೆಯಲು ಸಾಧ್ಯವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತಾ ಒಣಭೂಮಿ ಯಲ್ಲೂ ಭತ್ತ ಬೆಳೆಯಬಹುದು. ಬಳಕೆಯಾಗುತ್ತಿರುವುದರ ಪೈಕಿ ಮೂರನೇ ಒಂದು ಭಾಗ ನೀರು ಬಳಸಿ, ಈಗ ಬರುತ್ತಿರುವ ಇಳುವರಿಗಿಂತ ನಾಲ್ಕು ಪಟ್ಟು ಭತ್ತ ಬೆಳೆಯಬಹುದು. ಆಗ, ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಎರಡೂ ರಾಜ್ಯಗಳ ರೈತರಿಗೆ ನೀರಿನ ಕೊರತೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಯೂಟ್ಯೂಬ್ ನೋಡಿ ಕೃಷಿಯತ್ತ ಮುಖ! “ಯೂಟ್ಯೂಬ್‌ನಲ್ಲಿ ನಾರಾಯಣ ರೆಡ್ಡಿ ಅವರ ಸಾಧನೆ ವಿಡಿಯೋ ನೋಡಿ, ನಾನು ಕೃಷಿಕನಾ ಗಲು ನಿರ್ಧರಿಸಿದ್ದೇನೆ,’ ಎಂದು ಗೋಕಾಕ್‌ನ ಹಿರೇಮಠ ತಿಳಿಸಿದರು. “18 ವರ್ಷದಿಂದ ಬೆಂಗಳೂರಿನಲ್ಲಿರುವ ನನಗೆ ನಗರದ ಜೀವನಸಾಕಾಗಿದೆ. ಯ್ಯೂಟ್ಯೂಬ್‌ನಲ್ಲಿ ನಿಮ್ಮ ಕೃಷಿ ಸಾಧನೆ ನೋಡಿ ಇಷ್ಟವಾಯಿತು. ಈಗ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಜನವರಿಯಿಂದ ಹಳ್ಳಿಗೆ ತೆರಳಿ, ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ನಿರ್ಧರಿಸಿದ್ದೇನೆ,’ ಎಂದಾಗ ಚಪ್ಪಾಳೆಗಳ ಸ್ವಾಗತ ದೊರೆಯಿತು.