ವಾಷಿಂಗ್ಟನ್: ಟ್ವಿಟರ್ ಬಳಕೆದಾರರ ಪರಿಶೀಲನೆ ಪ್ರಕ್ರಿಯೆಯನ್ನು ಮತ್ತೆ ಪರಿಷ್ಕರಿಸಲಿದೆ ಎಂದು ಜಗತ್ತಿನ ಪ್ರಭಾವಶಾಲಿ ಸಾಮಾಜಿಕ ಜಾಲತಾಣವಾದ ಟ್ವಿಟರ್ ಖರೀದಿ ಬೆನ್ನಲ್ಲೇ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ತನಗೆ ಹಾವು ಕಚ್ಚಿತೆಂದು ತಿರುಗಿ ಹಾವನ್ನೇ ಕಚ್ಚಿದ ಬಾಲಕ… ಮುಂದೆ ಆಗಿದ್ದು ಮಾತ್ರ ವಿಸ್ಮಯ
ಟ್ವಿಟರ್ ಬಳಕೆದಾರರ ಪರಿಶೀಲನಾ ಪ್ರಕ್ರಿಯೆ ಸಂಪೂರ್ಣವಾಗಿ ಬದಲಾಗಲಿದೆ ಎಂದು ತಿಳಿಸಿರುವ ಮಸ್ಕ್, ಯಾವ ರೀತಿಯ ಬದಲಾವಣೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡದೆ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಟ್ವಿಟರ್ ಖಾತೆದಾರರ ಬ್ಲೂ ಟಿಕ್ ಗೆ ಶುಲ್ಕ ವಿಧಿಸುವ ಕುರಿತು ಚಿಂತನೆ ನಡೆಸಿರುವುದಾಗಿ ವಿವರಿಸಿದೆ. ಟ್ವಿಟರ್ ಬಳಕೆದಾರರು ಬ್ಲೂ ಟಿಕ್ ಗಾಗಿ ಪ್ರತಿ ತಿಂಗಳು 19.99 ಡಾಲರ್ (1647 ರೂಪಾಯಿ) ಪಾವತಿಸಬೇಕಾಗಲಿದೆ. ಶುಲ್ಕ ಪಾವತಿಸದಿದ್ದಲ್ಲಿ ಖಾತೆದಾರರು ತಮ್ಮ ಪರಿಶೀಲನೆಗೊಂಡ ಬ್ಯಾಡ್ಜ್ ಅನ್ನು ಕಳೆದುಕೊಳ್ಳಬೇಕಾಗಲಿದೆ ಎಂದು ತಿಳಿಸಿದೆ.
ಬ್ಲೂ ಟಿಕ್ ಉದಯವಾಣಿ ಗೆ 19.99 ರೂಪಾಯಿ, ಎಂದು ಪ್ರಸ್ತುತ ಟ್ವಿಟರ್ ಬ್ಲೂ ಟಿಕ್ ಗೆ ಪ್ರತಿ ತಿಂಗಳು 4.99 ಡಾಲರ್ (411.30 ಪೈಸೆ) ಶುಲ್ಕ ಪಾವತಿಸಬೇಕಾಗಿದೆ. ಆದರೆ ಇನ್ಮುಂದೆ ಪ್ರತಿ ತಿಂಗಳು 19.99 ಡಾಲರ್ (1647ರೂಪಾಯಿ) ಪಾವತಿಸಬೇಕಾಗಲಿದೆ ಎಂದು ವರದಿ ತಿಳಿಸಿದೆ.
ಟ್ವಿಟರ್ ಬಳಕೆದಾರರ ಬ್ಲೂ ಟಿಕ್ ಗೆ ಶುಲ್ಕ ವಿಧಿಸುವ ಬಗ್ಗೆ ಎಲಾನ್ ಮಸ್ಕ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಒಂದು ವೇಳೆ ಈ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯೂ ಇದ್ದಿರುವುದಾಗಿ ನ್ಯೂಸ್ ಲೆಟರ್ ಪ್ಲ್ಯಾಟ್ ಫಾರ್ಮರ್ ವರದಿ ಮಾಡಿದೆ.