ನವದೆಹಲಿ: ವಿಜ್ಞಾನ ಕ್ಷೇತ್ರದಲ್ಲಿನ ವಿವಿಧ ಸಂಶೋಧನೆ ಹಾಗೂ ಸಾಧನೆಗಳನ್ನು ಪರಿಗಣಿಸಿ, ನವದೆಹಲಿಯ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್‌ಎಸ್‌ಎ) ಕೊಡಮಾಡುವ ಯಂಗ್ ಸೈಂಟಿಸ್ಟ್ ವಾರ್ಷಿಕ ಪ್ರಶಸ್ತಿ ಪುರಸ್ಕಾರಕ್ಕೆ ಕರ್ನಾಟಕದ 10 ಯುವ ವಿಜ್ಞಾನಿಗಳು ಭಾಜನರಾಗಿದ್ದಾರೆ.
ಅಕಾಡೆಮಿ ನೀಡುವ ಅತ್ಯಂತ ಉತ್ಕೃಷ್ಟ ಪ್ರಶಸ್ತಿ ಇದಾಗಿದ್ದು, ಪ್ರತಿ ವರ್ಷ 40 ಯುವ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ವರ್ಷ 42 ಯುವ ವಿಜ್ಞಾನಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕದ ಬೆಂಗಳೂರಿನಲ್ಲಿ ವ್ಯಾಸಂಗ ಹಾಗೂ ಉದ್ಯೋಗ ಮಾಡುತ್ತಿರುವ ಮಾಡಿದ 9 ವಿಜ್ಞಾನಿಗಳು ಹಾಗೂ ಮಂಗಳೂರಿನಲ್ಲಿ ವ್ಯಾಸಂಗ ಮಾಡಿದ ಓರ್ವ ವಿಜ್ಞಾನಿ ಸೇರಿದ್ದಾರೆ.
ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಸರಿತ್ ಎಸ್.ಅಗಸ್ತಿ, ಟಿಐಎಫ್ಆರ್‌ನ ಡಾ.ಸುಭ್ರೋ ಭಟ್ಟಾಚಾರ್ಜಿ, ಪ್ರಸ್ಟೀಜ್ ಟೆಕ್‌ಪಾರ್ಕ್‌ನ ಡಾ.ಸಿದ್ಧಾರ್ಥ ಚೌಧರಿ, ಐಐಟಿಯ ಡಾ. ಶ್ರಿಮೋಂಟಾ ಗಾಯೆನ್, ಡಾ. ಶ್ರೀ ಶೂಭೋಜಾಯ್ ಗುಪ್ತಾ, ಡಾ. ಮೋಹಿತ್ ಕುಮಾರ್ ಜಾಲಿ, ಐಸಿಟಿಎಸ್‌ನ ಡಾ.ಮಾನಸ್ ಶ್ರೀಕಾಂತ್ ಕುಲಕರ್ಣಿ, ಐಐಎಸ್‌ಸಿಯ ಡಾ. ವೆಂಕಟೇಶ್ ರಾಜೇಂದ್ರನ್, ಅಶೋಕಾ ಟ್ರಸ್ಟ್ ಫಾರ್ ರಿಸರ್ಚ್ ಎಕಾಲಜಿ ಆ್ಯಂಡ್ ಎನ್ವಿರಾನ್‌ಮೆಂಟ್‌ನ ಡಾ.ಅಸ್ಮಿತಾ ಸೇನ್ ಗುಪ್ತಾ ಹಾಗೂ ಎನ್‌ಐಟಿ ಮಂಗಳೂರಿನ ಡಾ.ದೇವಶ್ರೀ ಚಕ್ರವರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಗ್ರ 10ರಲ್ಲೂ ಮೂವರಿಗೆ ಸ್ಥಾನ
ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಸರಿತ್ ಎಸ್. ಅಗಸ್ತಿ, ಟಿಐಎಫ್ಆರ್ ಬೆಂಗಳೂರಿನ ಡಾ.ಸುಭೊÅà ಭಟ್ಟಾಚಾರ್ಜಿ ಹಾಗೂ ಎನ್‌ಐಟಿ ಮಂಗಳೂರಿನ ಡಾ. ದೇವಶ್ರೀ ಚಕ್ರವರ್ತಿ ಅವರು ಪ್ರಶಸ್ತಿಗೆ ಭಾಜನರಾದವರ ಪೈಕಿ ಅಗ್ರ 10 ವಿಜ್ಞಾನಿಗಳ ಸಾಲಿನಲ್ಲಿ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.