Advertisement

ಬೃಹತ್‌ ಗಾತ್ರದ ಮೀನು ರಕ್ಷಿಸಿದ ಯುವಕರು 

11:14 AM Apr 12, 2018 | Team Udayavani |

ಮಂಗಳೂರು: ಸಮುದ್ರ ತೀರಕ್ಕೆ ಅಲೆಗಳಲ್ಲಿ ತೇಲಿ ಬಂದ ದೊಡ್ಡ ಗಾತ್ರದ ಮೀನನ್ನು ಇಬ್ಬರು ಯುವಕರು ರಕ್ಷಣೆ ಮಾಡಿ ಪುನಃ ಸಮುದ್ರಕ್ಕೆ ಸೇರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗುತ್ತಿದೆ.
ಈ ಘಟನೆ ಯಾವ ಬೀಚ್‌ನಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ವೀಡಿಯೋದಲ್ಲಿ ಬ್ಯಾರಿ ಭಾಷೆ ಮಾತ ನಾಡುತ್ತಿರುವುದು ಕೇಳಿಬರುತ್ತಿರುವ ಹಿನ್ನೆಲೆ ಯಲ್ಲಿ ಈ ಘಟನೆ ನಡೆದದ್ದು ಕರಾವಳಿ
ಪ್ರದೇಶದ ಯಾವುದಾದರೊಂದು ಬೀಚ್‌ನಲ್ಲಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ದೊಡ್ಡ ಗಾತ್ರದ ಮೀನೊಂದು ಸಮುದ್ರ ತೀರಕ್ಕೆ ಬಂದು ಒದ್ದಾಡುತ್ತಿದ್ದ ದೃಶ್ಯ ವೀಡಿಯೋದಲ್ಲಿ ಕಾಣುತ್ತಿದ್ದು, ಇಬ್ಬರು ಯುವಕರು ಸತತ ನಾಲ್ಕೈದು ಬಾರಿ ಪ್ರಯತ್ನಪಟ್ಟರೂ ಮೀನನ್ನು ಸಮುದ್ರಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ದೊಡ್ಡ ಪ್ರಮಾಣದ ಅಲೆಯೊಂದು ಬಂದಿದ್ದರಿಂದ ಮತ್ತು ಈ ಯುವಕರ ಸತತ ಪ್ರಯತ್ನದಿಂದಾಗಿ ಮೀನು ಸಮುದ್ರಕ್ಕೆ ಮರಳಿ ಸೇರಿತು.

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಉಳ್ಳಾಲ ಸಮುದ್ರ ತೀರದ ಜೀವರಕ್ಷಕ ಈಜುಗಾರ ಮೋಹನ್‌ ಕುಮಾರ್‌ ಉಳ್ಳಾಲ “ಕಳೆದ ಮೂರು ದಿನಗಳ ಹಿಂದೆ ಉಳ್ಳಾಲ ಸಮುದ್ರ ತೀರದಲ್ಲಿ ಮೀನೊಂದು ಸಾವನ್ನಪ್ಪಿತ್ತು. ಆದರೆ ಈ ಮೀನಿಗೆ ಹೋಲಿಸಿದರೆ ವಿಡಿಯೋದಲ್ಲಿ ವೈರಲ್‌ ಆದ ಮೀನಿನ ಗಾತ್ರ ತುಂಬಾ ದೊಡ್ಡದಿದೆ. ಉಳ್ಳಾಲ ಬೀಚ್‌ ಪರಿಸರದಲ್ಲಿ ಈ ಘಟನೆ ನಡೆದ ಬಗ್ಗೆ ಮಾಹಿತಿಯಿಲ್ಲ’ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next