Advertisement

ಡಿಜಿಟಲ್‌ ಲೈಬ್ರರಿಗೆ ಮೊರೆ ಹೋದ ಯುವಜನತೆ

03:40 PM May 06, 2020 | mahesh |

ತುಮಕೂರು: ಇಂದು ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ ಯಾಗುತ್ತಿರುವ ವೇಳೆಯಲ್ಲಿ ಪುಸ್ತಕವನ್ನು ಗ್ರಂಥಾಲಯಕ್ಕೆ ಹೋಗಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ವೇಳೆಯಲ್ಲಿ ತುಮಕೂರು ಸ್ಮಾರ್ಟ್‌ ಸಿಟಿಯಿಂದ ಕೇಂದ್ರ ಗ್ರಂಥಾಲಯದಲ್ಲಿ ಮಾಡಿರುವ ಡಿಜಿಟಲ್‌ ಲೈಬ್ರರಿ ಕೋವಿಡ್  ಲಾಕ್‌ ಡೌನ್‌ ವೇಳೆಯಲ್ಲಿ ಜನರಿಗೆ ಹೆಚ್ಚು ಉಪಯೋಗವಾಗುತ್ತಿದೆ.

Advertisement

ನಗರದ ಟೌನ್‌ಹಾಲ್‌ ವೃತ್ತದಲ್ಲಿರುವ ಕೇಂದ್ರೀಯ ಗ್ರಂಥಾಲಯದಲ್ಲಿ ಡಿಜಿಟಲ್‌ ಲೈಬ್ರರಿ ಇದ್ದು ಇದರಲ್ಲಿ ಉಚಿತ ಇಂಟರ್‌ನೆಟ್‌ ಸೌಲಭ್ಯ, ಸಾರ್ವಜನಿಕರಿಗಾಗಿ ವಿಶೇಷವಾದ 20 ಆಲ್‌ ಇನ್‌ ಒನ್‌ ಟಚ್‌ ಆಧಾರಿತ ಡೆಸ್ಕ್ ಟಾಪ್‌ಗ್ಳ ಸೌಲಭ್ಯ, ಓದುಗರು ಮತ್ತು ಗ್ರಂಥಾಲಯ ಬಳಕೆದಾರರು ತಮ್ಮ ಪ್ರತಿ ಕ್ರಿಯೆಗಳನ್ನು ಯಾವುದೇ ಸಮಯದಲ್ಲಾದರೂ ನೀಡಲು ಅವಕಾಶ, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ತಮಗೆ ಬೇಕಾದ ವಿಷಯದ ಬಗ್ಗೆ ಹುಡುಕಾಟ ನಡೆಸಲು ಅವಕಾಶ, ಪ್ರಮುಖವಾಗಿ ಗುರುತಿಸಲ್ಪಟ್ಟ ಉದ್ಯೋಗ ವೆಬ್‌ಸೈಟ್‌ನ್ನು ಈ ಕೇಂದ್ರೀಕೃತ ಅಪ್ಲಿಕೇಷನ್‌ನಲ್ಲಿ ಲಭಿಸುತ್ತವೆ.

ಏನಿದು ಟಿಡಿಎಲ್‌: ನಗರದಲ್ಲಿರುವ ಕೇಂದ್ರೀಯ ಗ್ರಂಥಾಲಯದಲ್ಲಿ ಪ್ರಭಾವಿ ಗ್ರಂಥಾಲಯ ನಿರ್ವಹಣೆ ವ್ಯವಸ್ಥೆಯೊಂದಿಗೆ ತುಮಕೂರು ಡಿಜಿಟಲ್‌ ಲೈಬ್ರರಿಯು ಡಿಜಿಟಲ್‌ ರೈಟ್ಸ್‌ ಮ್ಯಾನೇಜ್‌ಮೆಂಟ್‌ ಭಾಷಾಂತರ ವ್ಯವಸ್ಥೆಯಿಂದ ಸಕ್ರಿಯಗೊಂಡಿದೆ. ಓದುಗರು ಈ ಲೈಬ್ರರಿಗೆ ಸದಸ್ಯತ್ವ ಹೊಂದುವ ಮೂಲಕ ಯಾವುದೇ ಎಲೆಕ್ಟ್ರಾನಿಕ್‌ ಸಾಧನದ ಮೂಲಕ ಹೆಚ್ಚು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಲಭ ರೀತಿಯಲ್ಲಿ ದೇಶ-ವಿದೇಶಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಡಿಜಿಟಲ್‌ ಲೈಬ್ರರಿಯ ಸದಸ್ಯತ್ವ ಹೊಂದಿಸದ್ಬಳಕೆ ಮಾಡಿಕೊಳ್ಳುವುದರಿಂದ ತಂತ್ರಜ್ಞಾನದಿಂದ ಯುವಸಮೂಹ ಹಾಳಾಗುತ್ತಿದ್ದಾರೆ ಎನ್ನುವ ಅಪವಾದ ದೂರವಾಗುತ್ತದೆ. ಮಕ್ಕಳು, ವಯಸ್ಕರು, ವೃದ್ಧೆರೆಂಬ ಯಾವುದೇ ವಯೋಬೇಧವಿಲ್ಲದೆ ತಮಗೆ ಬೇಕಾದ
ಪ್ರಚಲಿತ ವಿದ್ಯಮಾನ, ದಿನಪತ್ರಿಕೆ, ಸಾಹಿತ್ಯ, ಪರೀಕ್ಷೆ, ವೈದ್ಯಕೀಯ, ತಾಂತ್ರಿಕ ಮತ್ತಿತರ ಹಲವಾರು ವಿಷಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

ಪ್ರತಿ ದಿನ ಕೇಂದ್ರೀಯ ಗ್ರಂಥಾಲಯಕ್ಕೆ ಭೇಟಿ ನೀಡಿ ಟಿಡಿಎಲ್‌ ಪ್ರಯೋಜನ ಪಡೆದಿರುವ ಓದುಗರು ತಮ್ಮ ಮೆಚ್ಚುಗೆ ಸೂಚಿಸಿದ್ದಾರಲ್ಲದೆ, ನಗರದ ಮೇಯರ್‌ ಫ‌ರೀದಾ ಬೇಗಂ ಅವರೂ ಸಹ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಜಿಟಲ್‌ ಲೈಬ್ರರಿ ಯಲ್ಲಿ ಓದುಗರಿಗಾಗಿ ಕಲ್ಪಿಸಿರುವ ವ್ಯವಸ್ಥೆ ಯನ್ನು ಶ್ಲಾ ಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಲೈಬ್ರರಿಯಲ್ಲಿ ಏನೇನಿದೆ: ಡಿಜಿಟಲ್‌ ಲೈಬ್ರರಿಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಸುಮಾರು 6000 ಇ-ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳೊಂದಿಗೆ ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿ ನಡೆಸುವ 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಒಳಗೊಂಡಿರುತ್ತದೆ, ಪಠ್ಯಪುಸ್ತಕಗಳು, ಮಕ್ಕಳ ಪುಸ್ತಕಗಳು, ವೈದ್ಯಕೀಯ, ಮಾನವೀಯತೆ, ತಾಂತ್ರಿಕ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ 230ಕ್ಕೂ ಹೆಚ್ಚು ನಿಯತಕಾಲಿಕೆಗಳು, 250ಕ್ಕಿಂತ ಹೆಚ್ಚು ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಿಯತಕಾಲಿಕೆಗಳು, 300ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ರಸಪ್ರಶ್ನೆಗಳು ಇಲ್ಲಿವೆ.

Advertisement

ಪ್ರಸ್ತುತ ಕೊರೊನಾ ವೈರಾಣುವಿನಿಂದಾಗಿ ಸಂಭವಿಸುತ್ತಿರುವ ಅನಾಹುತವನ್ನು ತಪ್ಪಿಸಲು ಭಾರತಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದು, ಇಂಥ ಸಮಯದಲ್ಲಿ ಸಾರ್ವಜನಿಕರು ಮನೆಗಳಲ್ಲಿ ಕಂಪ್ಯೂಟರ್‌, ಟ್ಯಾಬ್‌, ಮೊಬೈಲ್‌ ಮತ್ತಿತರ ಎಲೆಕ್ಟ್ರಾನಿಕ್‌ ಸಾಧನಗಳಿಂದ ಉಚಿತವಾಗಿ ಡಿಜಿಟಲ್‌ ಲೈಬ್ರರಿಗೆ ನೋಂದಾಯಿಸಿಕೊಂಡು ಸದುಪಯೋಗ ಪಡೆಯಲು ಉತ್ತಮ ಮಾರ್ಗ.
● ಟಿ.ಭೂಬಾಲನ್‌, ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next