Advertisement
ಕಳೆದ ಮೂರು ವಾರದ ಹಿಂದೆ ಸುರಿದ ಮಳೆಗೆ ಕಲ್ಮಾಡಿ ಮುಖ್ಯ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ಅದನ್ನು ನಗರಸಭೆಯ ವತಿಯಿಂದ ಕಡಿದು ತೆರವುಗೊಳಿಸಲಾಗಿತ್ತು. ಆದರೆ ಕಡಿದ ಮರದ ತುಂಡುಗಳು ಮಾತ್ರ ರಸ್ತೆಯಲ್ಲೇ ಬಾಕಿ ಉಳಿದಿದ್ದವು. ರಸ್ತೆಗೆ ಚಾಚಿಕೊಂಡಿದ್ದ ಮರದ ತುಂಡುಗಳು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದವು. ಮರದ ಚೂಪಾದ ಭಾಗಗಳು ರಸ್ತೆಯ ಬದಿಯಲ್ಲಿ ಸಾಗುವ ದ್ವಿಚಕ ವಾಹನ ಸಾವಾರಿಗೆ ತಾಗಿ ಅನಾಹುತಗಳು ನಡೆಯುತ್ತಿದ್ದವು.ಈ ಬಗ್ಗೆ ನಾಗರಿಕರು ಹಲವು ಬಾರಿ ನಗರಸಭೆಗೆ ದೂರಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಮಾಡಿಯ ಸ್ಥಳೀಯ ಯುವಕರು ಸುಂದರ್ ಜೆ. ಕಲ್ಮಾಡಿ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಹಿಟಾಚಿ ಮೂಲಕ ಮರದ ತುಂಡುಗಳನ್ನು ತೆರವುಗೊಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ರಸ್ತೆ ಬದಿಯ ಮರವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದೇªವೆ. ಯಾವ ಸ್ಪಂದನೆಯೂ ದೊರೆಯದಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ಸ್ವಂತ ಖರ್ಚು ಹಾಕಿ ಈ ಕಾರ್ಯಕ್ಕೆ ಮುಂದಾಗಿದೇªವೆ.
– ಸುಂದರ್ ಜೆ. ಕಲ್ಮಾಡಿ,ಸಮಾಜ ಸೇವಕರು