Advertisement

ಯುವ ಜನತೆ ದೇಶದ ಸಂಪನ್ಮೂಲವಾಗಬೇಕು

12:27 AM Aug 15, 2020 | Karthik A |

ಭಾರತ ಯುವರಾಷ್ಟ್ರ. ಯುವಜನತೆ ದೇಶದ ಮುಖ್ಯ ಸಂಪನ್ಮೂಲವಾಗಿದ್ದಾರೆ.

Advertisement

ವಿವಿಧ ಕ್ಷೇತ್ರಗಳಲ್ಲಿ ಗಣ್ಯವಾದ ಸಾಧನೆ ಮೂಲಕ ದೇಶದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದಾರೆ.

ಇನ್ನೂ ಭವಿಷ್ಯದ ಭಾರತಕ್ಕಾಗಿ ಯುವ ಸಮುದಾಯ ನೀಡಬೇಕಾದ ಕೊಡುಗೆ ಮಹತ್ವವಾದುದು.

ಈ ಹಿನ್ನೆಲೆಯಲ್ಲಿ 2030ರ ಮಿಷನ್‌ ಭಾರತಕ್ಕೆ ಆದ್ಯತೆ ನೀಡಬೇಕಿದೆ.

ದೇಶದಲ್ಲಿ ಯುವ ಸಮುದಾಯ ತಮ್ಮದೇ ಕೊರತೆಗಳನ್ನು ಮೀರಿ ಸಾಧನೆ ಮಾಡಿದ್ದಾರೆ. ಇಂದಿನ ಕೆಲವು ಯುವಕರು ಕೇವಲ ಶಿಕ್ಷಣವನ್ನು ಉದ್ಯೋಗಕ್ಕಾಗಿ ಪಡೆಯುತ್ತಿದ್ದಾರೇನೂ ಎಂದೆನಿಸುತ್ತದೆ. ಈ ಮನೋಭಾವ ಬದಲಾ ಗಬೇಕಿದೆ.

Advertisement

ಜ್ಞಾನಕ್ಕಾಗಿ ಓದಿದಾಗ ಮಾತ್ರ ನಾವು ಸಂಪನ್ಮೂಲವಾಗಬಹುದು. ಈ ನಿಟ್ಟಿನಲ್ಲಿ 2030-ಮಿಷನ್‌ ಭಾರತಕ್ಕೆ ಯಶಸ್ವಿಯಾಗಬೇಕಾದರೆ ಕೆಲವೊಂದು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಬೇಕಿರುವುದನ್ನು ನಾವು ತಿಳಿಯುವುದು ಅಗತ್ಯ.

ಕೃಷಿ ಸಂಶೋಧನೆ ಅಗತ್ಯ
ದೇಶದ ಜನರು ಜೀವನಾಧಾರಕ್ಕಾಗಿ ಕೃಷಿ ಕ್ಷೇತ್ರವನ್ನೇ ಅವಲಂಬಿಸಿದ್ದಾರೆ. ಈ ದೃಷ್ಟಿಯಲ್ಲಿ ಇಂದಿನ ಯುವ ಸಮುದಾಯ ಕೃಷಿ ಕ್ಷೇತ್ರದ ಕಡೆಗೆ ಗಮನಹರಿಸಬೇಕಿದೆ. ಕೃಷಿ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಯಬೇಕಿದೆ. ವಿದೇಶಿ ತಳಿ, ಬೀಜಗಳನ್ನು ಬಹಿಷ್ಕರಿಸಿ, ಸ್ವದೇಶಿ ತಳಿ, ಬೀಜಗಳನ್ನು ಬಳಸುವಂತಾಗಬೇಕು. ನೈಸರ್ಗಿಕ ಕೃಷಿ, ಸಾವಯವ ಕೃಷಿಯ ಕಡೆ ಹೆಚ್ಚಿನ ಗಮನಹರಿಸಬೇಕು. ಯಂತ್ರಜ್ಞಾನ, ತಂತ್ರಜ್ಞಾನ ಮುಂದುವರೆದಷ್ಟೂ ಅವುಗಳಿಗೆ ಪೂರಕವಾಗುವ ಉಪಕರಣಗಳೆಲ್ಲವೂ ದೇಶಿಯವಾಗಿ ನಿರ್ಮಾಣವಾದಾಗ ಅಭಿವೃದ್ಧಿ ಸಾಧ್ಯ.

ಖನಿಜ ಸಂಪನ್ಮೂಲಗಳ ಅಭಿವೃದ್ಧಿ
ಖನಿಜ ಸಂಪನ್ಮೂಲಗಳು ಹೇರಳವಾಗಿ ದೊರೆಯುತ್ತವೆ. ಬೇರೆ ದೇಶಗಳಿಗೆ ಕೂಡ ಹೇರಳವಾಗಿ ರಫ್ತು ಮಾಡಲಾಗುತ್ತದೆ. ಖನಿಜ ಸಂಪನ್ಮೂಲಗಳನ್ನು ರಫ್ತು ಮಾಡುವ ಬದಲಿ ಸ್ವದೇಶಿಯವಾಗಿ ಬಳಸಿಕೊಂಡು ಅಭಿವೃದ್ಧಿಗೆ ಚಿಂತಿಸುವ ಕಾರ್ಯವಾಗಬೇಕಿದೆ. ಸ್ವದೇಶಿಯ ಉತ್ಪಾದಿಸಿ ಬಳಸಬೇಕಿದೆ.

ಶೈಕ್ಷಣಿಕ ಜತೆಗೆ ಕ್ರೀಡೆಗೆ ಕೊಡುಗೆ ಅಗತ್ಯ
ಶಿಕ್ಷಣ ವ್ಯವಸ್ಥೆಯ ಹೊಸ ನೀತಿ 2030ರೊಳಗೆ ಶೈಕ್ಷಣಿಕ ಕ್ರಾಂತಿ ಮುನ್ನುಡಿಯಾಗಲಿದೆ. ಶಿಕ್ಷಣದಲ್ಲಿ ವೃತ್ತಿ ಕೌಶಲ, ಮೌಲ್ಯ ವರ್ಧನೆ ಯಾಗಲಿದೆ. ಇನ್ನು ಯುವ ಸಮುದಾಯ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ, ಕಠಿನ ಪರಿಶ್ರಮ ಮತ್ತು ಧೈರ್ಯದಿಂದ ಮುನ್ನುಗಿದಾಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಇದಕ್ಕೆ ಸಹಕಾರ, ಪ್ರೋತ್ಸಾಹ ಅಗತ್ಯಬೇಕು. ಕ್ರೀಡೆ, ಶಿಕ್ಷಣದಲ್ಲಿ ಯುವ ಸಮುದಾಯವು ಅಭಿವೃದ್ಧಿ ಹೊಂದಿದಾಗ ಯುವಕರು ಸಂಪನ್ಮೂಲವಾಗುವುದಂತೂ ಖಂಡಿತ.

ವೈದ್ಯಕೀಯ ಕ್ಷೇತ್ರ ಮುಂದುವರಿಬೇಕಿದೆ
ಕಾಣದ ವೈರಸ್‌ವೊಂದಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಈ ಮಹಾ ಮಾರಿಗೆ ಇನ್ನೂ ಗುಣಮುಖವಾಗುವ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇವೆಲ್ಲವನ್ನು ಗಮನಿಸಿದರೆ ಭಾರತದಲ್ಲಿ ಆರೋಗ್ಯ ಕ್ಷೇತ್ರವೂ ಕ್ಷಿಪ್ರವಾಗಿ ಅಭಿವೃದ್ಧಿ ಕಾಣಬೇಕಿದೆ ಎಂದೆನಿಸುತ್ತದೆ. ಹೀಗಾಗಿ ಯುವ ಸಮುದಾಯವೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ. ಆರೋಗ್ಯ ಕ್ಷೇತ್ರದಲ್ಲಿ ಹಲವು ರೀತಿಯಲ್ಲಿ ಸಂಶೋಧನೆ ಆಗಬೇಕಿದೆ. ಆಯುರ್ವೇದ ಶಿಕ್ಷಣ ಬೆಳೆಯಬೇಕಿದೆ. 2030ರ ಭಾರತದ ಅಭಿವೃದ್ಧಿ ಕಾಣಬೇಕಾದರೆ ಈ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡಾಗ ಮಾತ್ರ ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. 2030ರ ಮಿಷನ್‌ ಅಭಿವೃದ್ಧಿಗೆ ಈ ಸವಾಲು-ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂಬುದನ್ನು ಮನಗಾಣಬೇಕಿದೆ.

 ಬಸವರಾಜ ಎನ್‌. ಬೋದೂರು

 

Advertisement

Udayavani is now on Telegram. Click here to join our channel and stay updated with the latest news.

Next