ಪುದುಚೇರಿ/ ಚೆನ್ನೈ: “ಯುವಕರೇ ನಮ್ಮ ದೇಶದ ಶಕ್ತಿ. ನಮ್ಮ ದೇಶದ ಯುವಕರು ಎಷ್ಟು ಜವಾಬ್ದಾರಿಯುತರಾಗಿದ್ದಾರೆ ಎನ್ನುವುದನ್ನು ಇಲ್ಲಿನ ಲಸಿಕೆ ಅಭಿಯಾನದ ವೇಗವೇ ತೋರಿಸುತ್ತದೆ.’
ಬುಧವಾರ ಪುದುಚೇರಿಯಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದ ವರ್ಚುವಲ್ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಆಡಿದ ಮಾತಿದು.
15-18 ವರ್ಷದವರ ಲಸಿಕೆ ಅಭಿಯಾನದಲ್ಲಿ ಈಗಾಗಲೇ 2 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ಕೊಡಲಾಗಿದೆ. ಈ ವೇಗ ನಮ್ಮ ಯುವಕರಿಗಿರುವ ಜವಾಬ್ದಾರಿಯುನ್ನು ತೋರಿಸುತ್ತಿದೆ ಎಂದಿ ದ್ದಾರೆ ಮೋದಿ. ಜತೆಗೆ, ಸರ್ಕಾರ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ಹೆಣ್ಣು ಮಕ್ಕಳು ಕೂಡ, ತಮ್ಮ ವೃತ್ತಿ ಜೀವನಕ್ಕೆ ಸಮಯ ಕೊಡಲಿ, ಜೀವನವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರಕ್ಕೆ ಕೈ ಹಾಕಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?
ಇದೇ ವೇಳೆ, ಸ್ವಾಮಿ ವಿವೇಕಾನಂದರು, ಅರಬಿಂದೊ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್ ಸೇರಿ ಅನೇಕರನ್ನು ದೇಶದ ಯುವ ಐಕಾ ನ್‌ಗಳು ಎಂದೂ ಕರೆದಿದ್ದಾರೆ.
11 ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆ
ತಮಿಳುನಾಡಿನಲ್ಲಿ ನಿರ್ಮಿಸಲಾಗಿರುವ 11 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನೂ ಪ್ರಧಾನಿ ಮೋದಿ ಬುಧ ವಾರ ಉದ್ಘಾಟಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ವೈದ್ಯಕೀಯ ಕ್ಷೇತ್ರದ ಮಹತ್ವ ಮತ್ತೊಮ್ಮೆ ದೃಢಪಟ್ಟಿದೆ. ವೈದ್ಯಕೀಯ ವಲಯದಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಭವಿಷ್ಯವಿದೆ’ ಎಂದಿದ್ದಾರೆ.