Advertisement
ಟೋಬಿ ಕುರಿತು ತನ್ನ ಆಲೋಚನೆಗಳನ್ನು ಸರಳವಾಗಿ ಹಂಚಿಕೊಂಡ ವೇಳೆ ಯುವಕ ಆಕ್ರೋಶಗೊಂಡು ಯುವತಿಯತ್ತ ಧಾವಿಸಿ ಬಂದು, ಏನು ಚೆನ್ನಾಗಿಲ್ಲ..ಹೋಗ್ತಾ ಇರ್ಬೇಕು.. ಎಂದು ಕಿಡಿ ಕಾರಿದ್ದಾನೆ.. ಪರಿಸ್ಥಿತಿ ಉಲ್ಬಣಗೊಳಿಸಿ ಜನಸಂದಣಿ ಸೇರಿದ ವೇಳೆ ಆಕೆಯನ್ನು ನಿಂದಿಸಿ, ಅಂತಿಮವಾಗಿ ಆಕೆಯನ್ನು ಸ್ಥಳದಿಂದ ತೆರಳುವಂತೆ ಒತ್ತಾಯಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ತಾಣದಲ್ಲಿ ಹಲವರು ಯುವಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ವಿಚಾರ ತಿಳಿಯುತ್ತಿದ್ದಂತೆ ನಟ ರಾಜ್ ಬಿ ಶೆಟ್ಟಿ ಅವರೂ ಪ್ರತಿಕ್ರಿಯೆ ನೀಡಿದ್ದಾರೆ.
ಯುವತಿ ಎದುರಿಸಬೇಕಾದ ಕಿರುಕುಳಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಕ್ಷಮಿಸಿ ಮತ್ತು ನಮ್ಮನ್ನು ಕ್ಷಮಿಸಿ” ಎಂದು ರಾಜ್ ಬಿ. ಶೆಟ್ಟಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.