ಕುಷ್ಟಗಿ: ಭಾರತೀಯ ಸೇನೆಗೆ ಸೇರುವ ಹಿನ್ನೆಲೆಯಲ್ಲಿ ಫಿಟ್ ನೆಸ್ ಮಂತ್ರವಾಗಿ ರಾಜಸ್ಥಾನದ ಪಧವೀಧರ ಯುವಕ ರಾಷ್ಟ್ರಧ್ವಜಾದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 5,604ಕಿ.ಮೀ. ಕಾಲ್ನಡಿಗೆ ಯಾತ್ರೆ ನಡೆಸಿರುವುದು ಗಮನಾರ್ಹವೆನಿಸಿದೆ.
ರಾಜಸ್ಥಾನ ರಾಜ್ಯದ ಜಿಲ್ಲೆಯ ಸುರೈ ಜಿಲ್ಲೆಯ ಶಿವಗಂಜ್ ತಾಲೂಕಿನ ನಿವಾಸಿ 21 ವರ್ಷದ ಪ್ರದೀಪ್ ಜಗನ್ಲಾಲ್, ಶ್ರೀನಗರದಿಂದ ಕಳೆದ ನವೆಂಬರ್ 30, 2021ರಿಂದ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾನೆ. ಪಂಜಾಬ್, ಹರಿಯಾಣ ಮದ್ಯಪ್ರದೇಶ, ಮಹಾರಾಷ್ಟ್ರದ ಮೂಲಕ ಇದೀಗ ಕರ್ನಾಟಕದಲ್ಲಿ ಕಾಲ್ನಡಿಗೆ ಯಾತ್ರೆ ಮುಂದುವರೆದಿದ್ದು ಶನಿವಾರ ಕುಷ್ಟಗಿ ತಾಲೂಕಿಗೆ ಆಗಮಿಸಿದ್ದು ಈ ವೇಳೆ ಮಾಜಿ ಸೈನಿಕ ಶಿವಾಜಿ ಹಡಪದ ಸ್ವಾಗತಿಸಿಕೊಂಡರು.
ಪ್ರತಿ ದಿನ 30ರಿಂದ 35 ಕಿ.ಮೀ. ಸಂಚರಿಸುವ ಯುವ ಸಾಹಸಿ ಪ್ರದೀಪ, ಮನೆಯಲ್ಲಿ ಬೇಡವೆಂದರೂ, ಪಾಲಕರನ್ನು ಒಪ್ಪಿಸಿ ಈ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದು ಮಾರ್ಗ ಮದ್ಯೆ ವಿವಿಧ ರಾಜ್ಯದ ಜನರು, ಈತನ ಸಾಹಸವನ್ನು ಮೆಚ್ಚಿ ತಮ್ಮ ಕುಟುಂಬದ ಸದಸ್ಯರಂತೆ ಕರೆದು ಊಟ, ಉಪಹಾರ ನೀಡಿ ಗೌರವಿಸುವ ಮನೋಭಾವನೆಯಿಂದ ಪ್ರತಿ ದಿನವೂ ಹುಮ್ಮಸ್ಸು ಯುವಕ ಪ್ರದೀಪನಲ್ಲಿ ವ್ಯಕ್ತವಾಗಿದೆ.ಕಾಣಬಹುದಾಗಿದೆ
ಶನಿವಾರ ಕುಷ್ಟಗಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುವಾಗ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್, ಕಳೆದ 4 ತಿಂಗಳಿನಿಂದ 4 ಸಾವಿರ ಕಿ.ಮೀ. ಅಧಿಕ ದೂರ ಕ್ರಮಿಸಿದ್ದೇನೆ. ಇದೀಗ ಕನ್ಯಾಕುಮಾರಿ ತಲುಪಲು ಇನ್ನೂ ಎರಡೂವರೆ ತಿಂಗಳವರೆಗೆ ಈ ಯಾತ್ರೆ ಮುಂದುವರಿಸಬೇಕಿದೆ. ಈ ಮಾರ್ಗದಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ಭಾಷೆ, ಅಹಾರ ಎಲ್ಲವನ್ನು ಅರಿತು ಕೊಳ್ಳಲು ಸಾಧ್ಯವಾಗಿದೆ. ಅರಣ್ಯ ನಾಶದಿಂದಾಗಿ ಪ್ರತಿಕೂಲ ದುಷ್ಪರಿಣಾಮ ತಪ್ಪಿಸಲು ಪ್ರತಿಯೊಬ್ಬರು ಗಿಡಗಳನ್ನು ನೆಡುವ ಜಾಗೃತಿ ಮೂಡಿಸುತ್ತಿರುವ ಪ್ರದೀಪ್ ಸೈನ್ಯಕ್ಕೆ ಸೇರುವ ಹಂಬಲ ವ್ಯಕ್ತಪಡಿಸಿದರು. ಸೈನ್ಯಕ್ಕೆ ಸೇರಲು ಬೇಕಿರುವ ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ನಿರಂತರ ಕಾಲ್ನಡಿಗೆ ಆರಂಭಿಸಿರುವುದಾಗಿ ಹೇಳಿಕೊಂಡರು. ಮಾರ್ಗದಲ್ಲಿ ಡಾಬಾ, ಟೋಲ್, ಹೋಟಲ್ ಗಳಲ್ಲಿ ಊಟ, ವಾಸಕ್ಕೆ ಅನಕೂಲತೆ ಕಲ್ಪಿಸುತ್ತಿದ್ದಾರೆ ಎಂದರು.
-ಮಂಜುನಾಥ ಮಹಾಲಿಂಗಪುರ ಕುಷ್ಟಗಿ.