Advertisement

Wheeling: ಹೆದ್ದಾರಿಯಲ್ಲೇ ವ್ಹೀಲಿಂಗ್ ಮಾಡಿದ ಯುವಕ-ಯುವತಿ: ವಿಡಿಯೋ ವೈರಲ್

01:07 PM Nov 25, 2023 | Team Udayavani |

ರಾಮನಗರ: ವ್ಯಕ್ತಿಯೊಬ್ಬ ಯುವತಿಯನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ ಘಟನೆ ಬೆಂಗಳೂರು- ಮೈಸೂರು ರಸ್ತೆಯ ಬಿಡದಿ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ರೀಲ್ಸ್ ಹುಚ್ಚಾಟಕ್ಕೆ ಬಿದ್ದು ಯುವತಿಯನ್ನು ಹಿಂಬದಿ ಕೂರಿಸಿ ಡೇಂಜರ್ ಡ್ರೈವ್ ಮಾಡಿದ್ದು, ಹೆದ್ದಾರಿ ಮೇಲೆ ವ್ಹೀಲಿಂಗ್ ಮಾಡಿದ ಯುವಕ ಯುವತಿಯ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕ-ಯುವತಿಯ ಮೇಲೆ ಕ್ರಮ ಜರುಗಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಈ ಹಿನ್ನೆಲೆ ಬಿಡದಿ ಪೊಲೀಸರು ಸದ್ಯ ಆ ಬೈಕ್ ನಂಬರ್ ಪ್ಲೇಟ್ ನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next