Advertisement

ಕೆನಡಾಗೆ ಹೊರಟಿದ್ದ ಯುವ ದಂಪತಿ ಸೆರೆ!

10:41 PM Jul 02, 2024 | Team Udayavani |

ನವದೆಹಲಿ: ಹಿರಿಯ ನಾಗರಿಕರ ರೀತಿಯ ದಾಖಲೆಗಳನ್ನು ಸೃಷ್ಟಿಸಿಕೊಂಡು ಕೆನಡಾ ಮೂಲಕ ಅಮೆರಿಕಕ್ಕೆ  ಹೊರಟಿದ್ದ 24 ವರ್ಷ ಯುವ ದಂಪತಿಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡು, ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಉತ್ತರ ಪ್ರದೇಶದ ಗುರು ಸೇವಕ್‌ ಸಿಂಗ್‌, 67 ವರ್ಷದವರು ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ಆ ಮೂಲಕ ಕೆನಡಾಗೆ ಹೋಗಿ ಅಲ್ಲಿಂದ, ಡಾಂಕಿ ರೂಟ್‌ ಮೂಲಕ ಅಮೆರಿಕ್ಕೆ ಹೋಗುವ ಪ್ಲ್ರಾನ್‌ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಗುರು ಸೇವಕ್‌ ಸಿಂಗ್‌ ಅವರು ಟ್ರಾವೆಲ್‌ ಏಜೆಂಟ್‌ರೊಬ್ಬರಿಗೆ ಮುಂಗಡವಾಗಿ 30 ಲಕ್ಷ ರೂ. ನೀಡಿದ್ದ.  ಆತ ಹಿರಿಯ ನಾಗರಿಕರ ರೀತಿಯ ದಾಖಲೆಗಳನ್ನು ಮಾಡಿಕೊಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next