ಮುಂಬಯಿ : ಅತ್ಯಂತ ಅಚ್ಚರಿಯಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದು ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಅವರ ನಿವಾಸಕ್ಕೆ ತೆರಳಿ ಹಿರಿಯ ನಟನನ್ನು ಗೌರವ ಮತ್ತು ಅಕ್ಕರೆಯಿಂದ ಭೇಟಿಯಾಗಿ ಕುಶಲೋಪರಿ ನಡೆಸಿದರು.
ಸಲ್ಮಾನ್ ಅವರ ಈ ಅಚ್ಚರಿಯ ಭೇಟಿ ಹಾಗೂ ಆತ ತೋರಿದ ಪ್ರೀತಿ-ವಾತ್ಸಲ್ಯದಿಂದ ಧರ್ಮೇಂದ್ರ ಅವರಿಗೆ ಹೃದಯ ತುಂಬಿ ಬಂದು, “ಸಲ್ಮಾನ್, ನೀನು ಯಾವತ್ತೂ ನನ್ನ ಮಗನ ಹಾಗೆ’ ಎಂದು ಹೇಳಿದರು.
52ರ ಹರೆಯದ ಸಲ್ಮಾನ್ ಖಾನ್ ಜತೆಗೆ ನಟ ದರ್ಮೇಂದ್ರ ಅವರು ಈ ಹಿಂದೆ,”ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ನೀಡಿದ ಅಚ್ಚರಿಯ ಭೇಟಿಯ ಫೋಟೋವನ್ನು ಧರ್ಮೇಂದ್ರ ಅವರು ಒಡನೆಯೇ ಟ್ವಿಟರ್ನಲ್ಲಿ ಹಾಕುವ ಮೂಲಕ ತಮಗಾದ ಸಂತಸವನ್ನು ಪ್ರಕಟಿಸಿದ್ದಾರೆ.
82ರ ಹರೆಯದ ನಟ ಧರ್ಮೇಂದ್ರ ಅವರ ಮಗ ಬಾಬ್ಬಿ ದೇವಲ್ ಅವರ ಅವರು ಸಲ್ಮಾನ್ ಜತೆಗೆ ರೇಸ್ 3 ಆ್ಯಕ್ಷನ್ ಥ್ರಿಲ್ಲರ್ನಲ್ಲಿ ನಟಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಲು, ಬಾಬ್ಬಿ ಜತೆಗಿರುವ ಫೋಟೋವನ್ನು ಕೂಡ ಧರ್ಮೇಂದ್ರ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದ ಹಾಗೆ ಸಲ್ಮಾನ್ ಖಾನ್ ಅಭಿನಯದ ಹೊಸ ಚಿತ್ರ ಟೈಗರ್ ಜಿಂದಾ ಹೈ ಬಿಡುಗಡೆಗೊಂಡ ಮೊದಲ ವಾರದಲ್ಲಿ 200 ಕೋಟಿ ರೂ. ಬಾಕ್ಸ್ ಆಫೀಸ್ ಗಳಿಕೆ ದಾಖಲಿಸುವ ಮೂಲಕ ವಿಕ್ರಮ ಮೆರಿದಿದೆ.