Advertisement
ಹಾಯ್ ಮುದ್ದು , ಹೇಗಿದ್ದೀ? ಏನು ಮಾಡ್ತಾ ಇದ್ದೀ.. ಅಂತೆಲ್ಲಾ ನಾನು ಖಂಡಿತಾ ಕೇಳಲ್ಲ. ನೀನೇ ಹೇಳಿದ್ದಿ ಅಲ್ವಾ, ನಾನು ಯಾವತ್ತೂ ಚೆನ್ನಾಗಿರಿ¤àನಿ ಮತ್ತು ಏನೇ ಮಾಡ್ತಾ ಇದ್ರೂ ನಿನಗೋಸ್ಕರ ಫ್ರೀ ಆಗ್ತಿನಿ ಅಂತ. ನನಗೂ ಆ ಮಾತಲ್ಲಿ ವಿಪರೀತ ನಂಬಿಕೆ. ಇರಲಿ, ನಿನಗೂ ಈ ಪತ್ರ ನೋಡಿ ಖಂಡಿತಾ ಅಚ್ಚರಿ ಆಗಿರುತ್ತೆ. ನಿನಗೆ ಮಾತ್ರವಲ್ಲ, ನನಗೂ ಈ ಪತ್ರ ಬರೆಯುತ್ತಿರುವುದಕ್ಕೆ ಅಚ್ಚರಿ ಆಗುತ್ತಿದೆ. ಜೊತೆಗೆ ಸಣ್ಣಗೆ ನಗು ಕೂಡ ಬರುತ್ತಿದೆ.
Related Articles
Advertisement
ಅಷ್ಟಕ್ಕೂ ಅಷ್ಟೊಂದು ಹೊತ್ತು ಮಾತನಾಡಿದ್ದಾದರೂ ಏನು ಎನ್ನುವುದು ನನಗೆ ಈ ಹೊತ್ತಿಗೂ ನೆನಪಾಗುತ್ತಿಲ್ಲ. ಆದರೆ ನಿನ್ನೊಂದಿಗೆ ಮಾತಾಡುತ್ತಿದ್ದ ಆ ಕ್ಷಣಗಳಲ್ಲಿ ಮಾತ್ರ ನಾನು ಅದ್ಭುತ ಎನ್ನಿಸುವಂಥ ರೊಮಾಂಚಕತೆಗೆ ಒಳಪಡುತ್ತಿದ್ದೆ. ಅದೊಂದು ಹೇಳತೀರದ ಹೇಳಲಾಗದ ರಮ್ಯ ಭಾವ. ಕಳೆದ ಶನಿವಾರ ಆಂಜನೇಯ ದೇವಸ್ಥಾನದ ಹೊರಗಡೆ ನಾವಿಬ್ಬರೂ ಅಕಸ್ಮಾತ್ತಾಗಿ ಭೇಟಿಯಾಗಿದ್ದನ್ನು ಯಾವತ್ತೂ ಮರೆಯಲಾರೆ.
ನೀನು ಅಮ್ಮನನ್ನು ಹುಡುಕಿ ಅಲ್ಲಿಗೆ ಬಂದಿದ್ದೆ. ನಾನು ದೇವಸ್ಥಾನದ ಪಕ್ಕದ ಗಂಗಣ್ಣನ ಅಂಗಡಿಯಲ್ಲಿ ಖರೀದಿಗಾಗಿ ಬಂದಿದ್ದೆ. ಅಕಸ್ಮಾತಾಗಿ ಎದುರೆದುರು ಬಂದಾಗ ಅರೆಕ್ಷಣ ನಾನು ಬೆಚ್ಚಿದ್ದೆ. ಆದರೆ ನಿನ್ನ ಮುಖದಲ್ಲರಳಿದ ಪ್ರೀತಿಯ ನಗು ನನ್ನೆಲ್ಲಾ ಹೆದರಿಕೆಯನ್ನು ಮರೆಸಿಬಿಟ್ಟಿತ್ತು. ನಾನು ನಕ್ಕಿದ್ದೆ. ಬಹು ಕಾಲದ ಸ್ನೇಹಿತರಂತೆ ಉಭಯ ಕುಶಲೋಪರಿ ನಡೆಸಿದ್ದೆವು ನಾವು.
ನಿನಗ್ಗೊತ್ತಾ? ನಿನ್ನಂತ ಚಂದದ ಹುಡುಗಿಯ ಜೊತೆ ಮಾತನಾಡುತ್ತಿದ್ದರೆ ಗಂಗಣ್ಣ ನಮ್ಮನ್ನೇ ಕದ್ದು ಕದ್ದು ನೋಡುತ್ತಿದ್ದ. ನನಗೆ ಒಳಗೊಳಗೆ ಒಂಥರಾ ಹೆಮ್ಮೆ ಎನಿಸುತಿತ್ತು! ಹಾಗೆ ಆ ದಿನ ಮಾತಾಡುವಾಗ ನೀನು, “ನೋಡಿ, ಇದೇನು ನಿಮ್ಮ ಕಿವಿಯ ಹತ್ತಿರ ಹುಳ ಇದೆ’ ಎಂದು ಹೇಳುತ್ತಲೇ ನಿನ್ನ ಕಿರುಬೆರಳನ್ನು ಹಾಗೇ ಕಿವಿಯ ಹತ್ತಿರ ತಂದು ಸ್ಪರ್ಶಿಸಿದ್ದೆಯಲ್ಲಾ.. ಆ ಕ್ಷಣದಲ್ಲಿ ಒಮ್ಮೆಗೆ ಮಿಂಚು ಹೊಡೆದಂಥ ಪುಳಕ ನನಗಾಗಿತ್ತು. ಹುಳ-ಬಿತ್ತೋ ಅಲ್ಲೇ ಇತ್ತೋ ಗೊತ್ತಿಲ್ಲ.
ಆದರೆ ನಾನಂತೂ ಮತ್ತಷ್ಟು ಪ್ರೀತಿಯೊಳಕ್ಕೆ ಬಿದ್ದಿದ್ದೆ. ಆವತ್ತಿನಿಂದ ಹೊಸದೊಂದು ಸಣ್ಣ ಆಸೆ ಹುಟ್ಟಿಕೊಂಡು ಬಿಟ್ಟಿದೆ. ಆದಷ್ಟು ಬೇಗ ಒಮ್ಮೆಯಾದರೂ ನಿನ್ನ ಬಲಗೈ ಕಿರುಬೆರಳನ್ನು ಹಿಡಿದು ನಿನಗೊಂದು ಥ್ಯಾಂಕ್ಸ್ ಹೇಳಬೇಕು… ಅದೊಂದು ಕ್ಷಣಕ್ಕಾಗಿ ಇನ್ನಿಲ್ಲದಂತೆ ಕಾಯುತ್ತಿದ್ದೇನೆ. ಅದೊಂದನ್ನು ಬಿಟ್ಟು ಖಂಡಿತ ಬೇರೇನೂ ಕೇಳಲಾರೆ. ಒಂದೇ ಒಂದು ಸಲ ಅದೇ ಜಗಲಿಯ ಬಳಿ ಬರ್ತೀಯಾ? ಪ್ಲೀಸ್.ಇಂತಿ ನಿನ್ನ ಪ್ರೀತಿಯ ಹುಡುಗ
ನರೇಂದ್ರ ಎಸ್. ಗಂಗೊಳ್ಳಿ