Advertisement

ಸೂಟು ಬೂಟಿನಲ್ಲಿ ನೀವು ವೇಟರ್‌ ತರ ಕಾಣುತ್ತೀರಿ: ತರೂರ್‌ಗೆ ಸ್ವಾಮಿ

04:26 PM Aug 07, 2018 | udayavani editorial |

ಹೊಸದಿಲ್ಲಿ : “ನೀವು ತೊಡುವ ವಿದೇಶಿ ಸೂಟು ಬೂಟು ನಮಗೇನೂ ಹೊಸದಲ್ಲ; ಆದರೂ ನೀವು ಆ ದಿರಿಸಿನಲ್ಲಿ  ಹೊಟೇಲ್‌ ವೇಟರ್‌ ತರ ಕಾಣುತ್ತೀರಿ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಗೆ ಟಾಂಗ್‌ ನೀಡಿದ್ದಾರೆ. 

Advertisement

‘ಪ್ರಧಾನಿ ನರೇಂದ್ರ ಮೋದಿ ತಾವು ಹೋದಲ್ಲೆಲ್ಲ ಅಲ್ಲಿನ ಸಾಂಪ್ರದಾಯಿಕ ಶಿರಸ್ತ್ರಾಣಗಳನ್ನು ಧರಿಸುತ್ತಾರೆ; ಆದರೆ ಮುಸ್ಲಿಮರ ಟೋಪಿ ಧರಿಸಲು ಏಕೆ ನಿರಾಕರಿಸುತ್ತಾರೆ’ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ಗೆ ಬಿಜೆಪಿಯ ಉರಿ ನಾಲಗೆಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಈ ರೀತಿಯಲ್ಲಿ ತಿರುಗೇಟು ನೀಡಿದರು. 

ಪ್ರಧಾನಿ ಮೋದಿ ಅವರ ಈಶಾನ್ಯ ಭಾರತದ ರಾಜ್ಯಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಬಡಕಟ್ಟು ಸಮುದಾಯದವರು ತೊಡುವ ಸಾಂಪ್ರದಾಯಿಕ ಶಿರಸ್ತ್ರಾಣ ತೊಟ್ಟದ್ದನ್ನು ಲೇವಡಿ ಮಾಡಿದ್ದ ತರೂರ್‌, ಈ ಬಗೆಯ ಶಿರಸ್ತ್ರಾಣಗಳು ಈ ನೆಲದ್ದಲ್ಲದ ವಿಚಿತ್ರ ರೀತಿಯ ಶಿರಸ್ತ್ರಾಣಗಳು ಎಂದು ಟೀಕಿಸಿದ್ದರು.

ಇದಕ್ಕೆ ಕಟುವಾಗಿ ಉತ್ತರಿಸಿರುವ ಕೇಂದ್ರ ಸಹಾಯಕ ಸಚಿವ ಕಿರಣ್‌ ರಿಜಿಜು ಅವರು “ಕಾಂಗ್ರೆಸ್‌ ಪಕ್ಷ ಮತ್ತು ಶಶಿ ತರೂರ್‌ ಜೀ, ನೀವು ದಯವಿಟ್ಟು ವಿವರಿಸಿ ಹೇಳಿ : ಔಟ್‌ಲ್ಯಾಂಡಿಶ್‌ ಮತ್ತು ಹಿಲೇರಿಯಸ್‌ ಹೆಡ್‌ ಗೇರ್‌  ಎಂದರೇನು ಎಂದು. ನೀವು  ಈಶಾನ್ಯ ಜನರನ್ನು, ಬುಡಕಟ್ಟು ಸಮುದಾಯದವರನ್ನು ಅವಮಾನಿಸಿ ಪಾರಾಗಲಾರಿರಿ; ಇದಕ್ಕಾಗಿ ನೀವು ಕ್ಷಮೆ ಕೇಳಬೇಕು’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next