ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಲಾಕ್ ಡೌನ್ ಹೇರಿದವರು ನೀವು (ಕೇಂದ್ರ ಸರ್ಕಾರ) ಇದೀಗ ಮಾರ್ಚ್ ನಿಂದ ಆಗಸ್ಟ್ 31ರವರೆಗಿನ ಸಾಲ ಮರುಪಾವತಿ ಮೇಲಿನ ಹೆಚ್ಚುವರಿ ಬಡ್ಡಿ ಮನ್ನಾ ಮಾಡುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನು ಎಂಬುದನ್ನು ಸುಪ್ರೀಂಕೋರ್ಟ್ ಬುಧವಾರ (ಆಗಸ್ಟ್ 26, 2020) ಪ್ರಶ್ನಿಸಿದೆ.
ಕೋವಿಡ್ ನಿಂದಾಗಿ ವ್ಯಾಪಾರ ಮತ್ತು ಬ್ಯಾಂಕ್ ಗಳಲ್ಲಿನ ವಹಿವಾಟಿನ ಮೇಲೆ ಭಾರೀ ಪ್ರಮಾಣದ ಹೊಡೆತ ಬಿದ್ದಿದೆ ಎಂಬ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಇದಾಗಿದ್ದು ನಿಮ್ಮಿಂದ (ಕೇಂದ್ರ ಸರ್ಕಾರ) ಇಡೀ ದೇಶಾದ್ಯಂತ ಲಾಕ್ ಡೌನ್ ಹೇರಿದವರು ನೀವು” ಎಂದು ಹೇಳಿತ್ತು.
ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದರಿಂದ ಆ ಸಮಯದಲ್ಲಿನ ಸಾಲದ ಮರುಪಾವತಿ ಮೇಲಿನ ಹೆಚ್ಚುವರಿ ಬಡ್ಡಿದರವನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಕೇಂದ್ರ ಸರ್ಕಾರ ಸೆಪ್ಟೆಂಬರ್ 1ರಂದು ಸ್ಪಷ್ಟವಾದ ನಿಲುವು ಪ್ರಕಟಿಸಬೇಕೆಂದು ಸೂಚಿಸಿದೆ.
ಒಂದು ವೇಳೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸದಿದ್ದರೆ, ತಮ್ಮ ವಿಶೇಷ ಅಧಿಕಾರ ಉಪಯೋಗಿಸಿಕೊಂಡು ಇದು ಪ್ರಕೃತಿ ವಿಕೋಪದಡಿ ಸಂಭವಿಸಿದ ಹಾನಿ ಎಂದು ಬಡ್ಡಿ ಮನ್ನಾ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಸಮಸ್ಯೆ ಉದ್ಭವಿಸಿದ್ದು ನಿಮ್ಮ (ಕೇಂದ್ರದ) ಲಾಕ್ ಡೌನ್ ನಿಂದಾಗಿ. ಈ ಸಂದರ್ಭದಲ್ಲಿ ಇದನ್ನು ವ್ಯವಹಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದರಲ್ಲಿ ತುಂಬಾ ತೊಂದರೆಗೊಳಗಾದ ಜನರನ್ನು ಕೂಡಾ ಪರಿಗಣಿಸಬೇಕಾಗುತ್ತದೆ. ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಜಸ್ಟೀಸ್ ಅಶೋಕ್ ಭೂಷಣ್ ಅವರಿದ್ದ ಪೀಠ ತಿಳಿಸಿರುವುದಾಗಿ ವರದಿ ವಿವರಿಸಿದೆ.