ವಿಚಿತ್ರವಾದ ಸತ್ಯವಿದು. ನನಗೆ ನೀನು ಆಡಿದ ಮಾತು ಕಣ್ಣೀರು ತರಿಸಿದ್ರೂ ನೀ ಹೇಳಿದ ಕಾರಣ ಮಾತ್ರ ದಿನದಿಂದ ದಿನಕ್ಕೆ ಉಸಿರು ಕಟ್ಟಿಸುತ್ತಿದೆ. ನಮ್ಮಿಬ್ಬರ ಪ್ರೀತಿಗೆ ಒಂಬತ್ತು ವರ್ಷ ಕಳೆದರೂ ನೀನು ನೀ ನನ್ನ ಮೇಲಿಟ್ಟಿರೋ ನಂಬಿಕೆ ಮಾತ್ರ ಸೊನ್ನೆ. ಯಾವ ಕಾರಣಕ್ಕೆ ನಿನ್ನ ಈ ವಿಚಿತ್ರ ನಡವಳಿಕೆ? ಗೊತ್ತಿಲ್ಲ. ಆದರೆ ನನ್ನ ಪ್ರಶ್ನೆ ಅದಲ್ಲ.
ನೀ ಯಾವಾಗಲೂ ಹೇಳ್ಳೋ ಹಾಗೆ, ಎಲ್ಲ ಹುಡುಗೀರ ಥರ ನೀನು ಇಲ್ಲ. ಅದೇ ನಂಗೆ ತುಂಬಾ ಇಷ್ಟ ಅನ್ನೋ ಮಾತೇ ನಂಗೆ ಕಷ್ಟ ಆಗಿದೆ.
ಬೇರೆ ಹುಡುಗಿಯರ ಥರ ಒಂದಿನ ಕೂಡ, ನಂಗೆ ಇದು ಬೇಕು, ಅದು ಬೇಕು ಅಂತ ಹಠ ಹಿಡಿಯಲಿಲ್ಲ. ಪ್ರತಿ ಹೆಜ್ಜೆ ಇಡುವಾಗ್ಲೂ ನಿನ್ನ ಅನುಮತಿ ತಗೊಂಡೇ ಇಡುತಿ¨ªೆ. ನಂಗೆ ನೀನೇ ಪ್ರಪಂಚ. ನಿನ್ನ ಬಿಟ್ಟು ನನಗೆ ಬೇರೆ ಪ್ರಪಂಚದ ಅರಿವಿಲ್ಲ. ನಿನ್ನ ಮಾತು ಮೀರಿ ಒಂದೇ ಒಂದು ದಿನವೂ ನಡೆದುಕೊಂಡಿಲ್ಲ. ಬೇರೆಯವರ ಕೋಪಕ್ಕೆ ನಾನು ಬಲಿಯಾದಾಗ ಕೂಡ ಪ್ರತಿಕ್ರಿಯೆ ನೀಡಲಿಲ್ಲ. ನೀನು ಕಟ್ಟಿ ಕೊಟ್ಟ ಕನಸಿನ ಕೋಟೆಯಲ್ಲಿ, ರಾಣಿ ತರ ಇದ್ದ ನನಗೆ ಆ ಅರಮನೆಯನ್ನೇ ನೆಲಸಮ ಮಾಡುವ ಪ್ರಯತ್ನ ಮಾಡಿಬಿಟ್ಟೆ.
ಆದರೆ, ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ? ಸುಖ-ದುಃಖ ಎರಡು ಅವನ ಸೂತ್ರದಲ್ಲಿದೆ ಅನ್ನೋ ಹಾಡಿನ ಸಾಲುಗಳು ಮಾತ್ರ ತುಂಬಾ ನೋವುಂಟು ಮಾಡುತ್ತಿವೆ. ಈ ಸಾಲುಗಳ ಹಾಗೆ ಆ ಬ್ರಹ್ಮನ ಹಳೆಯಲ್ಲಿ ನಾನು ರಾಜನ ಜೊತೆ ರಾಣಿ ಥರ ಇರರ್ತಿನೋ ಅಥವಾ ಮುಂದೆ ಏನು ಬರೀಬೇಕಂತ ಗೊತ್ತಾಗ್ತಾ ಇಲ್ಲ…
ಲಕ್ಕಿ ಸಿಂದಗಿ