Advertisement
ನನ್ಗೆ ಫ್ರೆಂಡ್ಸ್ ಅಂದ್ರೆ ಹೆಣ್ಣು-ಗಂಡು ಅನ್ನೋ ಭೇದ ಇಲ್ಲ. ನನಗೆ ಎಲ್ರೂ ಒಂದೇ. ಎಲ್ಲರ ಹಾಗೆ ಫ್ರೆಂಡ್‌ಗೆ ಹಾಯ್ ಹೇಳಿ, ಶೇಕ್ ಹ್ಯಾಂಡ್ ಮಾಡಿ, ಹಲ್ಲು ಕಿಸಿದು ನಾನು ಮಾತಾಡ್ಸಲ್ಲ. ನೇರವಾಗಿ ಎದೆಗೆ ಹೊಡೆದೇ ಮಾತಿಗಿಳಿಯೋದು. ನನ್ನ ಫ್ರೆಂಡ್ಸ್ ಎಲ್ರೂ ಹೇಳ್ತಾರೆ: “ಆ ರೀತಿ ಎಲ್ಲರ ಜೊತೆ ನಗುನಗುತ್ತಾ ಮಾತಾಡಬೇಡ. ಹುಡುಗರು ಅದನ್ನೇ ಅಪಾರ್ಥ ಮಾಡ್ಕೊತಾರೆ. ನಿನ್ನ ಮಾತಿಂದ ಕೆಲವರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಆಗಿ, ಲವ್ವು-ಗಿವ್ವು ಅಂತ ಏನೇನೋ ಕನಸು ಕಟ್ಕೊಂಡು ಮನ್ಸಲ್ಲಿ ಮಂಡ್ಗಿ ತಿಂದ್ಕೊಂಡು ಹಾಳಾಗಿ ಹೋದ್ರೆ ಆ ಅಪವಾದ ಬೇರೆ ನಿನಗೇ’.. ಹೀಗೆಲ್ಲಾ ಹೇಳಿದ್ರೂ, ಐ ಡೋಂಟ್ ಕೇರ್. ನಾನ್ ಈ ಥರಾ ಅಂತ ಗೊತ್ತಿದ್ದೂ ನಮ್ಮ ಕ್ಲಾಸ್‌ಮೇಟ್ಸು ಬಂದು ಪ್ರಪೋಸ್ ಮಾಡಿ ಹೋಗಿದ್ದಾರೆ. ನಾನು ಅವರಿಗೆ ಕೊಟ್ಟಿರೋ ರಿಯಾಕ್ಷನ್‌ಗೆ ಮತ್ತೆ ನನ್ನ ಕಡೆ ಅವ್ರು ತಿರುಗಿ ಕೂಡ ನೋಡಿಲ್ಲ. ನನಗಂತೂ ಈ ಪ್ರೀತಿ-ಗೀತಿ ಇತ್ಯಾದಿ ಕಡೆ ಯಾಕೋ ಅಟ್ರ್ಯಾಕ್ಷನ್ನೇ ಆಗಲಿಲ್ಲ. ನಾನಾಯ್ತು, ನನ್ನ ಡಿಫ್ರೆಂಟ್ ಲೈಫಾಯ್ತು, ಹಾಗಿದ್ದೆ. ಇಟ್ಸ್ ಓಕೆ. ಅದ್ನ ಬಿಟಾಕು. ಈಗ, ನನ್ನಷ್ಟಕ್ಕ ನಾನೇ ಬದಲಾಗಿದ್ದೀನಿ. ಯಾಕೆ ಅಂತ ಮಾತ್ರ ಗೊತ್ತಿಲ್ಲ.
Advertisement
ಪ್ರೀತಿ ಮಾಡೋಕ್ ಪುರುಸೊತ್ತಿದೆಯಾ?
06:00 AM Jul 31, 2018 | |
Advertisement
Udayavani is now on Telegram. Click here to join our channel and stay updated with the latest news.