Advertisement

ವಿಲೀನ ಬಗ್ಗೆ ನೀವೇ ನಿರ್ಧರಿಸಿ

08:50 AM Sep 18, 2017 | Team Udayavani |

ಹೊಸದಿಲ್ಲಿ: “ನಿಮ್ಮ ನಿಮ್ಮ ಆಡಳಿತ ಮಂಡಳಿಗಳಲ್ಲಿ ಪರಸ್ಪರ ವಿಲೀನದ ಬಗ್ಗೆ ಚರ್ಚೆಗಳನ್ನು ಆರಂಭಿಸಿ.’ ಹೀಗೆಂದು ಕೇಂದ್ರ ಸರಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದೆ. ಬ್ಯಾಂಕ್‌ಗಳು ಕೂಡ ಕೇಂದ್ರ ವಿತ್ತ ಸಚಿವಾಲಯದಿಂದ ಇಂಥ ಸೂಚನೆ ಬಂದಿರುವುದನ್ನು ಖಚಿತಪಡಿಸಿವೆ. 

Advertisement

ಆದರೆ ಇದು ವರೆಗೆ ಯಾವುದೇ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಪ್ರಕ್ರಿಯೆ ಶುರು ಮಾಡಿಲ್ಲವೆಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಈ ವರ್ಷದ ಎಪ್ರಿಲ್‌ನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಐದು ಬ್ಯಾಂಕ್‌ಗಳು ವಿಲೀನ ಗೊಂಡ ಪ್ರಕ್ರಿಯೆ ಮುಕ್ತಾಯದ ಬಳಿಕ ಇದು ಅತಿ ದೊಡ್ಡ ಪ್ರಕ್ರಿಯೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಾಗಿರುವಂತೆಯೇ ಮತ್ತು ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳಿಗೆ ಅನುಮೋದನೆ ನೀಡಿದ ಬಳಿಕ ಈ ಸೂಚನೆ ನೀಡಲಾಗಿದೆ. ಜೂನ್‌ ಅಂತ್ಯಕ್ಕೆ 41 ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಮೌಲ್ಯ 8,28,000 ಕೋಟಿ ರೂ. ಇತ್ತು. ಮಾರ್ಚ್‌ ಅಂತ್ಯಕ್ಕೆ 7,65,000 ಕೋಟಿ ರೂ. ಇತ್ತು. ಅಂದರೆ 3 ತಿಂಗಳ ಅವಧಿಯಲ್ಲಿ ಎನ್‌ಪಿಎ ಪ್ರಮಾಣ 63 ಸಾವಿರ ಕೋಟಿ ರೂ. ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next