Advertisement

ವಾಟ್ಸ್‌ಆ್ಯಪ್‌ನಲ್ಲಿ ನಿಮಗೆ ನೀವೇ ಮೆಸೇಜ್‌ ಮಾಡಿ!

08:34 AM Nov 02, 2022 | Team Udayavani |

ವಾಷಿಂಗ್ಟನ್‌: ಸದ್ಯದಲ್ಲೇ ನಿಮ್ಮ ವಾಟ್ಸ್‌ಆ್ಯಪ್‌ಗೆ ನೀವೇ ಸಂದೇಶ ಕಳುಹಿಸಲು ಸಾಧ್ಯವಾಗಲಿದೆ. ಟೆಕ್‌ ದಿಗ್ಗಜ ವಾಟ್ಸ್‌ಆ್ಯಪ್‌ ಇಂಥದ್ದೊಂದು ಹೊಸ ಅಪ್‌ಡೇಟ್‌ಗೆ ತಯಾರಿ ನಡೆಸುತ್ತಿದೆ.

Advertisement

“ನಿಮ್ಮೊಂದಿಗೆ ನೀವೇ ಸಂದೇಶ ಕಳುಹಿಸಿ’ ಎಂಬ ಫೀಚರ್‌ ಇದಾಗಿದ್ದು, ಇಲ್ಲಿ ನಿಮ್ಮ ವಾಟ್ಸ್‌ಆ್ಯಪ್‌ ಚಾಟ್‌ಗೆ ನೀವೇ ಸಂದೇಶವನ್ನು ಕಳುಹಿಸಬಹುದಾಗಿದೆ.

ಬೇರೆಯವರಿಗೆ ಮೆಸೇಜ್‌ ಹೇಗೆ ಮಾಡುತ್ತೀರೋ, ಅದೇ ಮಾದರಿಯಲ್ಲಿ ನಿಮಗೆ ನೀವೇ ಮೆಸೇಜ್‌ ಮಾಡುವಂಥ ಫೀಚರ್‌ ಇದಾಗಿದೆ.

ಇದಿಷ್ಟೇ ಅಲ್ಲದೆ, ಕ್ಯಾಪ್ಶನ್‌ನೊಂದಿಗೇ ಮೀಡಿಯಾವನ್ನು ಫಾರ್ವರ್ಡ್‌ ಮಾಡುವಂಥ, ವಾಟ್ಸ್‌ಆ್ಯಪ್‌ ಡೆಸ್ಕ್ಟಾಪ್‌ ಆ್ಯಪ್‌ಗೆ ಹೊಸ ಬ್ಲಿರ್‌ ಟೂಲ್‌ ಸೇರಿದಂತೆ ಹಲವು ಹೊಸ ಫೀಚರ್‌ಗಳನ್ನು ಪರಿಚಯಿಸಲೂ ಸಂಸ್ಥೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next