Advertisement

‘Don’t hate BJP…; ಜೈಲಿನಿಂದ ಕೇಜ್ರಿವಾಲ್ ನೀಡಿದ ಸಂದೇಶ ಓದಿದ ಪತ್ನಿ

07:04 PM Mar 23, 2024 | Team Udayavani |

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಆಪ್ ಕಾರ್ಯಕರ್ತರು ಮತ್ತು ದೆಹಲಿಯ ಜನತೆಗೆ ಜೈಲಿನಲ್ಲಿರುವ ತಮ್ಮ ಪತಿ ಬರೆದು ನೀಡಿರುವ ಸಂದೇಶವನ್ನು ವಿಡಿಯೋ ಹೇಳಿಕೆಯಲ್ಲಿ ಓದಿ ಹೇಳಿ ಕೇಜ್ರಿವಾಲ್ ದೇಶ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

”ಯಾವುದೇ ಜೈಲು ನನ್ನನ್ನು ಒಳಗೆ ಇಡಲು ಸಾಧ್ಯವಿಲ್ಲ ಮತ್ತು ನಾನು ಹೊರಗೆ ಬಂದು ನನ್ನ ಭರವಸೆಗಳನ್ನು ಪೂರೈಸುತ್ತೇನೆ” ಎಂದು ಕೇಜ್ರಿವಾಲ್ ಅವರು ನೀಡಿದ ಸಂದೇಶವನ್ನು ಓದಿ ಹೇಳಿದರು.

ನಾನು ಜೈಲಿಗೆ ಹೋಗುವುದರೊಂದಿಗೆ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣ ನಿಲ್ಲಬಾರದು. ಈ ಕಾರಣಕ್ಕಾಗಿ ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರು ನಮ್ಮ ಸಹೋದರ ಸಹೋದರಿಯರು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದಾರೆ.

ಹೈಕೋರ್ಟ್‌ಗೆ  ಅರ್ಜಿ

ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 24 ರ ಭಾನುವಾರದ ಮೊದಲು ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದ್ದಾರೆ.

Advertisement

ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ: ಬಾನ್ಸುರಿ ಸ್ವರಾಜ್ ತಿರುಗೇಟು

ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್ ಪ್ರತಿಕ್ರಿಯಿಸಿ “ಅವರು ಇಂದು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಅರಿತುಕೊಳ್ಳಬಲ್ಲೆ. ಅದಕ್ಕೆ ನಾನು ಹೇಳುವ ಏಕೈಕ ವ್ಯಕ್ತಿ ಅರವಿಂದ್ ಕೇಜ್ರಿವಾಲ್. ಈ ಮದ್ಯದ ನೀತಿ ಕಾರಣಕ್ಕಾಗಿ ಅಳುವ ಎಲ್ಲಾ ಮಹಿಳೆಯರಿಗೆ ಅವರು ಉತ್ತರಿಸಬೇಕು” ಎಂದಿದ್ದಾರೆ.

ಎಎಪಿ-ಕಾಂಗ್ರೆಸ್ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಬಾನ್ಸುರಿ “ಕಾಂಗ್ರೆಸ್ ತನ್ನ ರಾಗವನ್ನು ಬದಲಾಯಿಸುತ್ತಿದೆ. ಅರವಿಂದ್ ಕೇಜ್ರಿವಾಲ್, ಅವರ ಪಕ್ಷ ಮತ್ತು ಕ್ಯಾಬಿನೆಟ್ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್ ತೆಗೆದುಕೊಂಡಿದ್ದಾರೆ ಎಂದು ಅಜಯ್ ಮಾಕನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ. ಗೋವಾ ಚುನಾವಣೆಯಲ್ಲಿ ಹಗರಣ ನಡೆದಿದೆ, ಕಾಂಗ್ರೆಸ್ ವಿರುದ್ಧ ಹಣ ಬಳಸಲಾಗಿದೆ ಎಂದು ಅಜಯ್ ಮಾಕನ್ ಆರೋಪಿಸಿದ್ದಾರೆ. ಇಂದು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ತನ್ನ ರಾಗವನ್ನು ಬದಲಾಯಿಸುತ್ತಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next