ಹೊಸದಿಲ್ಲಿ: ಇನ್ನು ಮುಂದೆ “ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ)’ ಅಪ್‌ಡೇಟ್‌ಗಾಗಿ ನೀವು ಬ್ಯಾಂಕ್ ಗೆ ಹೋಗಬೇಕಿಲ್ಲ. ಇದರ ಬದಲಿಗೆ ಈಗಾಗಲೇ ಸಲ್ಲಿಸಿರುವ ನಿಮ್ಮ ದಾಖಲೆಗಳು ಖಚಿತವಾಗಿದ್ದು, ಯಾವುದೇ ವಿಳಾಸ ಬದಲಾವಣೆ ಇಲ್ಲದಿದ್ದರೆ ಮನೆಯಲ್ಲೇ ಕುಳಿತು ಅಪ್‌ಡೇಟ್ ಮಾಡಬಹುದು ಎಂದು ಆರ್‌ಬಿಐ ಹೇಳಿದೆ.
ಒಂದು ವೇಳೆ ಕೆವೈಸಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ನೀವು ಇ-ಮೇಲ್, ನೋಂದಾಯಿತ ಮೊಬೈಲ್‌ಸಂಖ್ಯೆ, ಎಟಿಎಂ ಅಥವಾ ಇನ್ನಾವುದೇ ಡಿಜಿಟಲ್ ಉಪಕ್ರಮದ ಮೂಲಕ ಸ್ವಯಂ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು.
ಈ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದು, ಕೆವೈಸಿ ಅಪ್‌ಡೇಟ್‌ಗಾಗಿ ಬ್ಯಾಂಕುಗಳಿಗೆ ಬರುವಂತೆ ಗ್ರಾಹಕರನ್ನು ಒತ್ತಾಯಿಸಬೇಡಿ ಎಂದು ಸೂಚಿಸಿದ್ದಾರೆ. ಈ ಸಂಬಂಧ ಮಾರ್ಗಸೂಚಿಗಳನ್ನೂ ಹೊರಡಿಸಲಾಗಿದೆ.
ಕೇವಲ ವಿಳಾಸವನ್ನಷ್ಟೇ ಬದಲಾಯಿಸುವುದಿದ್ದರೂ ಈ ಮೇಲೆ ತಿಳಿಸಿದ ಯಾವುದೇ ರೀತಿಯಲ್ಲಿ ಕೈಗೊಳ್ಳಬಹುದಾಗಿದೆ. ಹೊಸದಾಗಿ ಕೆವೈಸಿಯನ್ನು ವೀಡಿಯೋ ಕಾಲ್ ಅಥವಾ ಬ್ಯಾಂಕಿಗೆ ಹೋಗಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.