Advertisement
ಕೇವಲ ಒಂದು ಮಿಸ್ಡ್ ಕಾಲ್ ಹಾಗೂ ವಾಟ್ಸ್ಯಾಪ್ ನೀಡುವ ಮೂಲಕ ನಾವು ಗ್ಯಾಸ್ ಸಿಲಿಂಡರ್ ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಹೌದು, ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಾದ ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು ಎಚ್ ಪಿ ಗ್ಯಾಸ್ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಿಲಿಂಡರ್ ಗಳನ್ನು ಕಾಯ್ದಿರಿಸುವ ಸೇವೆಯನ್ನು ನೀಡುತ್ತಿದೆ.
Related Articles
Advertisement
ಇಂಡೇನ್ ಗ್ಯಾಸ್ ಗ್ರಾಹಕರು 7588888824 ಸಂಖ್ಯೆಯ ಮೂಲಕ ಗ್ಯಾಸ್ ಬುಕ್ ಮಾಡಬಹುದು. ಗ್ರಾಹಕರು 7588888824 ನಂಬರ್ ನನ್ನು ಮೊಬೈಲ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು.
ವಾಟ್ಸಾಪ್ ತೆರೆಯಿರಿ. ಈಗ ಸೇವ್ ಮಾಡಿರುವ ನಂಬರ್ ನನ್ನು ಓಪನ್ ಮಾಡಿ. ನೋಂದಾಯಿತ ಸಂಖ್ಯೆಯಿಂದ BOOK ಅಥವಾ REFILL# ಎಂದು ಟೈಪ್ ಮಾಡುವ ಮೂಲಕ ಮೆಸೇಜ್ ಕಳುಹಿಸಬೇಕಾಗುತ್ತದೆ.
ತದನಂತರ ಈ ಮೆಸೇಜ್ ಕಳುಸಿದ ನಂತರ ನಿಮ್ಮ ಸಿಲಿಂಡರ್ ಬುಕ್ ಆಗಿರುವುದು ನಿಮಗೆ ಮೆಸೇಜ್ ಮೂಲಕ ತಿಳಿಸಲಾಗುತ್ತದೆ.
ತದನಂತರ ಈ ಮೆಸೇಜ್ ಕಳುಹಿಸಿದ ತಕ್ಷಣ ಸಿಲಿಂಡರ್ ಬುಕ್ ಆಗಿರುವ ಮೆಸೇಜ್ ಬರುತ್ತದೆ. ಇದರಲ್ಲಿ ಸಿಲಿಂಡರ್ ಯಾವಾಗ ಡೆಲಿವೆರಿ ಆಗಲಿದೆ ಎನ್ನುವ ಮಾಹಿತಿ ಕೂಡಾ ನಿಮಗೆ ತಿಳಿಯುತ್ತದೆ.
ಇದನ್ನೂ ಓದಿ : ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ: ಸಿಎಂ ಯಡಿಯೂರಪ್ಪ ಭರವಸೆ