Advertisement
ನೀವು ಸಾಮಾನ್ಯ ದಿನಗಳಲ್ಲಿ ಮಕ್ಕಳಿಗಾಗಿ ಎಂದಾದರೂ ಸಮಯ ಕೊಟ್ಟಿದ್ದೀರಾ? ಖಂಡಿತ ಇಲ್ಲ. “ಅಪ್ಪಾ, ಈ ಚಿತ್ರ ಹೇಗೆ ಬರೆಯೋದು?’ ಅಂತ ಮಗಳೇನಾದರೂ ಕೇಳಿದರೆ-“ನಾನು ಆಫಿಸಿಂದ ಬಂದು ಹೇಳ್ತೀನಿ. ಈಗ ಬಿಟ್ಟುಬಿಡು’ ಅಂದು ತಪ್ಪಿಸಿಕೊಂಡಿರುತ್ತೀರಿ.’ “ನನ್ನ ಜೊತೆ ಕೇರಂ ಆಡೋಕೆ ಬಾರಪ್ಪಾ’ ಅಂತ ಮಗ ಕರೆದರೆ, “ಎಲ್ಲಯ್ನಾ, ಟೈಮೇ ಇಲ್ಲ. ನಿಮ್ಮ ಅಮ್ಮನ ಜೊತೆ ಆಡಿಕೋ’ ಅಂದು ಎದ್ದು ಹೋಗಿರುತ್ತೀರಿ. ಹೀಗೆ, ಬ್ಯುಸಿ ಅಂತ ಹೇಳಿ ತಪ್ಪಿಸಿಕೊಂಡದ್ದಕ್ಕೆಲ್ಲಾ ಪ್ರಾಯಃ ಶ್ಚಿತ್ತ ಮಾಡಿಕೊಳ್ಳುವಷ್ಟು ಸಮಯ ಈಗ ಸಿಕ್ಕಿದೆಯಲ್ಲ; ಅದನ್ನು ಬಳಸಿಕೊಳ್ಳಿ. ನಿಮ್ಮ ಮಗು ಮಾಡುವ ಏಕಪಾತ್ರಾಭಿನಯವನ್ನು ಮನೆಮಂದಿಯ ಜೊತೆ ಕೂತು ನೋಡಿ. ಮಗ ಚೆಸ್ ಆಟಗಾರನಾಗಿದ್ದರೆ, ಬೆಳಗ್ಗೆ ಅವನ ಜೊತೆ ಚೆಸ್ ಆಡಿ, ಸೋತು ಬಿಡಿ!