Advertisement
“ಇನ್ಮೆಲೆ ಮೆಸೇಜ್ ಮಾಡ್ಬೇಡಿ. ಎದುರು ಸಿಕ್ಕಾಗ ಮಾತಾಡಿಸ್ಬೇಡಿ. ಯಾಕೆ ಅಂತ ಏನೂ ಕೇಳ್ಬೇಡಿ ಪ್ಲೀಸ್. ನಿಮ್ಮ ಪಾಡಿಗೆ ನೀವ್ ಚೆನ್ನಾಗಿರಿ…’
ಅವತ್ತಿನ ದಿನಗಳು ನೆನಪಿದ್ಯಾ ಟೀಚರ್? ಕಣ್ಣಲ್ಲೇ ಪಿಸುಗುಟ್ಟಿ ಮೌನ ಭಾಷೆಯಲ್ಲೇ ಅನಂತ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳೋ ಕಲೆ ಕಲಿಸಿದವರೇ ನೀವು. ಸದಾ ಪಟಪಟ ಮಾತಾಡ್ತಿದ್ದ ನಾನು, ಆ ಕ್ಷಣಕ್ಕಾಗಲೇ ಮಹಾ ಮೌನಿಯಾಗಿºಟ್ಟೆ. ನಿಮ್ಮನ್ನು ಆ ಪುಟಾಣಿ ಕಂದಮ್ಮಗಳ ಜೊತೆ ಕಂಡ ವೇಳೆಗಾಗಲೇ ನನ್ನ ಹೃದಯ ಕಳವಾದ ಸೂಚನೆ ಸಿಕ್ಕಿಬಿಟ್ಟಿತ್ತು. ಎಷ್ಟೊಂದೆÇÉಾ ಪರಿಶುದ್ಧ ಒಡನಾಟ ಏರ್ಪಟ್ಟಿತ್ತಲ್ವಾ ನಮ್ಮ ನಡುವೆ? ಪ್ರೀತಿ- ಪ್ರೇಮದಂಥ ಮಧುರ ಭಾವನೆಗಳನ್ನು ತುಂಬಿಕೊಂಡ ನನ್ನ ಎಳಸು ಹೃದಯವಂತೂ ಸ್ವರ್ಗಕ್ಕೊಂದೇ ಗೇಣು ಎಂಬಂತೆ, ನವಿಲು ಗರಿಬಿಚ್ಚಿ ಸಂಭ್ರಮಿಸುವಂತೆ ವಿಪರೀತ ಸಡಗರದಿಂದ ಛಂಗನೆ ಕುಣಿದು ಕುಪ್ಪಳಿಸಿಬಿಟ್ಟಿತ್ತು. “ಮಳೆ ಬಿದ್ದ ಮಣ್ಣ ಘಮಕೆ, ನಿಮ್ಮ ಹೆಸರು ಇಡುವ ಬಯಕೆ’ ಎಂಬ ಉತ್ಕಟ ಪ್ರೇಮಗೀತೆ ಗಝಲನ್ನು ಬರೆಯುವಷ್ಟರ ಮಟ್ಟಿಗೆ ನನ್ನ ಹೃದಯ ಖುಷಿಯಾಗಿತ್ತು. ಆಗಸದ ಅಷ್ಟೂ ತಾರೆಗಳನ್ನೆÇÉಾ ಹರಾಜಿನಲ್ಲಿ ಕೊಂಡುಕೊಂಡು ಪೋಣಿಸಿ ನಿನಗೆ ಮಾಲೆ ಮಾಡಿ ತೊಡಿಸಿದಂಥ ಅಪೂರ್ವ ಕನಸು ಮೊನ್ನೆ ತಾನೆ ಬಿದ್ದಿತ್ತು.
Related Articles
Advertisement
ಆದ್ರೆ ಈಚೀಚೆಗೆ ಅದೇನಾಯ್ತು ಅಂತ ನಿಮ್ಗೆ? ನೋಡಿದ್ರೂ ನೋಡದೆ ಇರೋರ ಹಾಗೆ ಇರ್ತೀರಾ, ಈಗಂತೂ ನನ್ನ ಕಂಡ್ರೆ ದೂರ ಓಡಿ ಹೋಗ್ತಿàರಾ. ಆಜನ್ಮ ಶತ್ರು ಥರಾ ನನ್ನ ನಿಷ್ಕಾರಣವಾದ ಪ್ರೀತಿಯನ್ನು ದ್ವೇಷಿಸ್ತಿರೋ ಆ ಸಕಾರಣ ಆದ್ರೂ ಯಾವುದು ಅಂತಾ ಹೇಳಿ…
ಅದೆಂಥದೇ ಸಮಸ್ಯೆ ಇದ್ರೂ ನಾನು ಮೆಟ್ಟಿ ನಿಲ್ತಿàನಿ. ನಿಮ… ಖುಷಿಗೆ ಕಾರಣ ನಾನಾಗ್ತಿàನಿ. ನಿಮ್ಮನ್ನು ಗುಬ್ಬಚ್ಚಿ ಹಾಗೆ ಎದೆಗೂಡಲ್ಲೇ ಇಟ್ಕೊಂಡು ಮುದ್ದು ಮಾಡ್ತೀನಿ. ಇಷ್ಟೆಲ್ಲಾ ಹೇಳಿದ್ಮೇಲೆ ನೀವು ನನ್ನಿಂದ ದೂರ ಆಗಲ್ಲ ಅಂತ ಅಂದ್ಕೋಡಿದೀನಿ.
ಒಂದ್ ವಿಷ್ಯಾ ತಿಳ್ಕೊಳಿ ಟೀಚರ್, ನಾನು ನಿಮ್ಮನ್ನ ಬರೀ ಪ್ರೀತಿಸ್ತಿಲ್ಲ, ಆರಾಧಿಸ್ತಿದೀನಿ! ಆರಾಧನೆಯಲ್ಲಿ ಅಪಾವಿತ್ರ್ಯವಿರುವುದಿಲ್ಲ. ನನ್ನ ನಂಬಿ ಟೀಚರ್. ನನ್ನೆಡೆಗೆ ಬಂದೇ ಬರ್ತೀರಾ ಅಂತ ಕಾಯ್ತಾ ಇರ್ತೀನಿ…ಇಂತಿ ನಿಮ್ಮ ಸಾರ್ವಕಾಲಿಕ ಹಿತೈಷಿ…..
– ಹೃದಯರವಿ, ರಾಮನಗರ