ಒಂದಂತೂ ಪ್ರಾಮಿಸ್ ಮಾಡ್ತೀನಿ: ನಿಮ್ಮಪ್ಪಾನೂ ಹೊಟ್ಟೆಕಿಚ್ಚು ಪಡೋವಷ್ಟು ಚೆನ್ನಾಗಿ ನಿಮ್ಮನ್ನ ನೋಡ್ಕೊàತೀನಿ. ನನ್ ಜೊತೆ ಇರಿ¤àರಲ್ವಾ? ಹಾಂ, ನೀವ್ ನೋವು ತಿನ್ನೋವಾಗ ನೋಡಕ್ಕಾಗಲ್ಲಾ ರೀ. ಅವಾಗೆಲ್ಲ ನೀವಿದ್ದಲ್ಲೇ ಬಂದು ನಿಮ್ಮ ತಲೇ ನೇವರಿಸ್ತಾ ಮುದ್ದು ಮಾಡ್ಬೇಕು ಅನ್ನೋ ಆಸೆಯಾಗುತ್ತೆ.
ಹಾಯ್ ಶೋನಾ,
ಏಳು ಹೆಜ್ಜೆಗೆ ನಮ್ಮ ಸಂಪ್ರದಾಯದಲ್ಲಿ ಎಷ್ಟು ಮಹತ್ವ ಇದೆ ಅಲ್ವಾ? ಈಗ್ಯಾಕೆ ಈ ಪ್ರಶ್ನೆ ಅಂತ ಕೇಳ್ಬೇಡಿ. ಅದೇ ಆ ದಿನ ಏಕಾಏಕಿ ಮುನಿಸಿಕೊಂಡು ಮರುದಿನ ಬೆಳಿಗ್ಗೇನೆ ಆ ದೇವಸ್ಥಾನದ ಹತ್ರ ಬರೋಕೆ ಹೇಳಿದ್ರಲ್ಲ… ಆವತ್ತು ನಿಮ್ಮನ್ನ ಕಾದಿದ್ದು ಒಂದೂವರೆ ಗಂಟೇನೇ ಆದ್ರೂ ನಿಮ್ಮನ್ನ ನೋಡೋ ಆಸೆ ಇತ್ತಲ್ಲ, ಅದ್ಕೆà ಅದು ಅಷ್ಟೊಂದು ದೀರ್ಘ ಅಂತ ಅನ್ನಿಸ್ಲೇ ಇಲ್ಲ. ಅವತ್ತು ಬರ್ತಾ ಬರ್ತಾ ಕುಂಕುಮ ಕೇಳಿದ್ರಲ್ಲ, ಆವಾಗ ನಾನೇ ನಿಮ್ಮ ಹಣೆಗಿಟ್ಟು ಬಿಡ್ಲಾ ಅನ್ನೋ ಕ್ರಿಮಿನಲ್ ಯೋಚೆ° ಒಂದ್ಸಲ ಬಂತು. ಅದನ್ನ ನಿಮØತ್ರ ಹೇಳಿÉಲ್ಲ ಅಷ್ಟೆ. ಆಮೇಲೆ ದೇವ್ರನ್ನ ಕಿಂಡಿಯಿಂದ ನೋಡ್ಕೊಂಡ್ ಬನ್ನಿ ಅಂದ್ರೆ ನೀವೊಳ್ಳೆ ಚಿಕ್ಕ ಮಗು ಥರ ನೋಡಿದಾಗ ನಾನೇ ಬಂದು, ಬನ್ನಿ ಅಂತ ಕರೊRಂಡ್ ಹೋದ್ನಲ್ಲ? ಅವತ್ತು ನಾವಿಬ್ರೂ ಒಟ್ಟಿಗೇ ಏಳು ಹೆಜ್ಜೆ ಇಟ್ಟಿರಬಹುದಾ ಅಂತ ನನ್ನ ಸಂಶಯ.
ನೀವಾಡೋ ಕೆಲವು ಮಾತುಗಳು ಸೀದಾ ಹೃದಯಕ್ಕೇ ನಾಟುತ್ತವೆ. ಅವತ್ತು ನಾನೇನೋ ಅಂದಿದ್ದಕ್ಕೆ ಅಪ್ಪಾನೂ ಹೀಗೇ ಹೇಳ್ತಾರೆ ಅಂದಾಗ ಎಷ್ಟ್ ಖುಷಿಯಾಯ್ತು ಗೊತ್ತಾ? ಯಾಕಂದ್ರೆ, ಹೆಚ್ಚಾಗಿ ಹುಡ್ಗಿàರು ಅವ್ರ ಹುಡ್ಗ ಅವ್ರಪ್ಪನ ಥರಾನೇ ಇರ್ಬೇಕು ಅಂತ ಆಸೆ ಪಡ್ತಾರಂತೆ. ಒಂದಂತೂ ಪ್ರಾಮಿಸ್ ಮಾಡ್ತೀನಿ: ನಿಮ್ಮಪ್ಪಾನೂ ಹೊಟ್ಟೆಕಿಚ್ಚು ಪಡೋವಷ್ಟು ಚೆನ್ನಾಗಿ ನಿಮ್ಮನ್ನ ನೋಡ್ಕೊàತೀನಿ. ನನ್ ಜೊತೆ ಇರಿ¤àರಲ್ವಾ? ಹಾಂ, ನೀವ್ ನೋವು ತಿನ್ನೋವಾಗ ನೋಡಕ್ಕಾಗಲ್ಲಾ ರೀ. ಅವಾಗೆಲ್ಲ ನೀವಿದ್ದಲ್ಲೇ ಬಂದು ನಿಮ್ಮ ತಲೇ ನೇವರಿಸ್ತಾ ಮುದ್ದು ಮಾಡ್ಬೇಕು ಅನ್ನೋ ಆಸೆಯಾಗುತ್ತೆ. ಆದ್ರೂ ನಿಮ್ ಮೇಲೆ ಒಂದ್ ಕೋಪ ನಂಗೆ ಹಾಗೇ ಇದೆ. ಏನ್ ಗೊತ್ತಾ? ನಾನ್ ಮಾತ್ರ ನಿಮ್ಗೆ ಶೋನಾ, ಕ್ಯೂಟಿ ಅನ್ನೋ ಸ್ವೀಟ್ ಹೆಸರಿಟ್ರೆ, ನೀವು ನನ್ನನ್ನ ಬ್ರಹ್ಮಚಾರಿ, ಸನ್ಯಾಸಿ ಅನ್ನೋ ಅಡ್ಡಹೆಸರಿಂದ ಕರೀತೀರಲ್ಲ, ನ್ಯಾಯಾನಾ ಇದು?
ಇನ್ನೊಮ್ಮೆ ನೀವ್ ನನ್ನ ಕರೆದ್ರಿ ಮಾತಾಡ್ಬೇಕು ಅಂತ. ನಿಜ, ನಂಗೂ ತುಂಬ ಕನಸು ಇತ್ತು. ಹೀಗ್ ಮಾಡ್ಬೇಕು, ಹಾಗ್ ಮಾಡ್ಬೇಕು, ನಿಮ್ಮನ್ನ ಮನಸಾರೆ ಇಷ್ಟಪಡ್ತೀನಿ ಅಂತ ಕಣ್ಣಲ್ ಕಣ್ಣಿಟ್ಟು ಹೇಳ್ಬೇಕು ಅಂತೆಲ್ಲ. ನಿಮ್ಮ ನಿರೀಕ್ಷೆ ಸುಳ್ಳು ಮಾಡಿದ್ನಲ್ಲ, ಅದ್ಕೆ ತುಂಬ ಬೇಜಾರಿದೆ. ಆದ್ರೆ ನಾನವತ್ತು ಮಾತಾಡಿದ್ದು ನಮ್ ಭವಿಷ್ಯದ ಬಗ್ಗೇನೆ ಅಲ್ವಾ? ನಂಗೆ ನಾವು ಬೇರೆಯವ್ರ ಥರಾ ಕನಸಲ್ಲೇ ಬದೊRàದಕ್ಕಿಂತ ವಾಸ್ತವ ಅರ್ಥ ಮಾಡ್ಕೊಂಡು ಬದುಕಬೇಕು ಅನ್ನೋ ಆಸೆ. ಅದ್ಕೆà ಅವತ್ತು ಏನೂ ಹೇಳ್ಳೋಕೆ ಆಗ್ಲಿಲ್ಲ.
ನೀವ್ ಹೇಳಿದ್ ಹಾಗೆ ನಮ್ಮಿಬ್ರದ್ದೂ ಪೊಲೈಟ್ ಲವ್. ನಾವಿಬ್ರೂ ಒಬ್ಬರನ್ನೊಬ್ರು ಪರಿಶುದ್ಧ ಭಾವದಿಂದ ಇಷ್ಟಪಡ್ತಿದ್ದೀವಿ. ಅಲ್ಲಿ ಮರ್ಯಾದೆ, ಗೌರವ, ಪ್ರೀತಿ, ಕಾಳಜಿ, ಕೀಟಲೆ, ಹುಸಿಕೋಪ, ನಸುನಗು ಎಲ್ಲಾನೂ ಇದೆ. ಮುಂದೇನೂ ಇರುತ್ತೆ. ನೀವ್ ಕೊಟ್ಟ ದಾರ ಗಟ್ಟಿಯಾಗಿ ನನ್ನ ಕೈ ಹಿಡ್ಕೊಂಡು ಕೂತಿದೆ. ನಿಮ್ಮ ಪೇಂಟಿಂಗ್‌ನಲ್ಲಿ “ಆರ್ಟ್ ಬೈ ಶೋನಾ’ ಅನ್ನೋ ಸಹಿ ನೋಡ್ತಿದ್ರೆ ಅವು ನನ್ನ ನೋಡಿ ನಕ್ಕ ಹಾಗೆ ಕಾಣುÕತ್ತೆ. ನಿಮ್ಮ ಫೋಟೋ ನನ್ನ ನೋಡಿ ಕಣ್ ಹೊಡೆಯುತ್ತೆ (ಮೊದೆÉà ತರೆಲ ಅಲ್ವಾ ನೀವು), ನಿಮ್ಮ ಕಿರೀಟದಲ್ಲಿ ನಿಮ್ ಉಸಿರಿನ ಶಬ್ದ, ಆ ಉಸಿರಲ್ಲೂ ನೀವ್ ನನಗಿಟ್ಟ ಹೆಸರೇ ಕೇಳುÕತ್ತೆ. ಇವಿಷ್ಟು ಸಾಕಲ್ವಾ ನನ್ನ- ನಿಮ್ಮ ಪ್ರೀತಿಗೆ?
ಈಗ ನೀವ್ ನನ್ನಿಂದ 500 ಕಿಲೋಮೀಟರ್ ದೂರದಲ್ಲಿದ್ದೀರಾ. ನೆನೆಸ್ಕೊಂಡ್ರೆ ಅಳು ಬರುತ್ತೆ. ಆದ್ರೆ ಮನಸ್ಸಿನ ಹತ್ರ ಕೇಳಿದ್ರೆ ಅದು ನೀವು ನನ್ನೊಳ್ಗೆà ಇದ್ದೀರಿ ಅನ್ನೋ ಉತ್ತರ ಕೊಡುತ್ತೆ. ಆದ್ರೂ ನಿಮ್ಮನ್ನ ತುಂಬ ಮಿಸ್ ಮಾಡ್ಕೊಳ್ತೀನಿ. ಇಲ್ಲೀವರೆಗೂ ನಿಮ್ಗೆàನಾದ್ರೂ ನನ್ನಿಂದ ತುಂಬ ನೋವಾಗಿದ್ರೆ ಪ್ಲೀಸ್ ಸಾರಿ.
ನಿಮ್ಮನ್ನ ತುಂಬ ತುಂಬ ಇಷ್ಟಪಡ್ತೀನಿ.
ಮತ್ತೆ ನನ್ನ ಸನ್ಯಾಸಿ ಅಂತ ಕಿಚಾಯಿಸ್ಬೇಡಿ. ಕೂಗಿ ಹೇಳ್ತಿದ್ದೀನಿ, ನಾನು ಸನ್ಯಾಸಿ ಅಲ್ಲ…
ಲವ್ ಯು
ಕೇವಲ ನಿಮ್ಮವನು,
ಅಚ್ಚು
-ಅರ್ಜುನ್ ಶೆಣೈ