Advertisement

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

12:24 PM Jan 06, 2025 | Team Udayavani |

ನಟ ಯೋಗಿ (Yogi) ಹಾಗೂ ನಿರ್ದೇಶಕ ವಿಜಯ್‌ ಪ್ರಸಾದ್‌ (Vijay Prasad) ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ “ಸಿದ್ಲಿಂಗು’ ಚಿತ್ರ ಹಿಟ್‌ ಲೀಸ್ಟ್‌ ಸೇರಿದ್ದಲ್ಲದೇ, ಯೋಗಿ ಅವರಿಗೆ ಒಂದು ಬ್ರೇಕ್‌ ನೀಡಿದ್ದ ಸಿನಿಮಾ ಇದಾಗಿತ್ತು. ಈಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ “ಸಿದ್ಲಿಂಗು 2′ ಸಿನಿಮಾ (Sidlingu 2 Cinema) ನಿರ್ಮಾಣವಾಗಿ, ಫೆಬ್ರವರಿ 14, ಪ್ರೇಮಿಗಳ ದಿನದಂದು ಚಿತ್ರ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

Advertisement

ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ ಕೆಲಸದಲ್ಲಿ ಬಿಝಿಯಾಗಿರುವ “ಸಿದ್ಲಿಂಗು 2′ ಚಿತ್ರತಂಡ, ಡಬ್ಬಿಂಗ್‌ ಕಾರ್ಯವನ್ನೂ ಮುಗಿಸುವ ಹಂತಕ್ಕೆ ತಲುಪಿದ್ದು, ಶೀಘ್ರ ನಾಯಕಿ ಸೋನುಗೌಡ ಅವರ ಫ‌ಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳಿಸಲು ಸಜ್ಜಾಗುತ್ತಿದೆ.

ಇದರ ಜೊತೆಗೆ ಹಾಡಿನ ಲಿರೀಕಲ್‌ ವಿಡಿಯೊ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ತಂಡ, ಜನವರಿ ಅಂತ್ಯದಲ್ಲಿ ಮತ್ತೂಂದು ಹಾಡಿನ ಸಂಪೂರ್ಣ ವಿಡಿಯೊ ಬಿಡುಗಡೆಗೊಳಿಸಲು ಯೋಜನೆ ಹಾಕಿಕೊಂಡಿದೆ. ಅನೂಪ್‌ ಸೀಳಿನ್‌ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದ್ದು, ಪದ್ಮಜಾ ರಾಜ್‌, ಆಂಟೊನಿ ಕಮಲ್, ಮಹಾಂತೇಶ್‌ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next