Advertisement
ರೋಡ್ ಶೋ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಕ್ಷೇತ್ರದ ಮೂಲೆ ಮೂಲೆಯಿಂದ ಕಾರ್ಯಕರ್ತರು ತಂಡೋಪತಂಡವಾಗಿ ಬಿ.ಸಿ.ರೋಡಿನತ್ತ ಆಗಮಿಸಿದರು. ರೋಡ್ ಶೋ ಆರಂಭಗೊಂಡ ಕೈಕಂಬದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೂ ಜನತೆ ರೋಡ್ ಶೋನಲ್ಲಿ ಪಾಲ್ಗೊಳ್ಳುವ ಜತೆಗೆ ಹೆದ್ದಾರಿ ಇಕ್ಕೆಲಗಳು, ಬಹುಮಹಡಿಯ ಕಟ್ಟಡಗಳ ಮುಂದೆ ನಿಂತು ಯೋಗಿಯತ್ತ ಕೈ ಬೀಸಿದರು. ಕಾರ್ಯಕರ್ತರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ, ಪೋಟೊಗಳನ್ನು ಕ್ಲಿಕ್ಕಿಸಿ ಯೋಗಿಯನ್ನು ಸಂಭ್ರಮೋತ್ಸಾಹದಿಂದ ಸ್ವಾಗತಿಸಿದರು.
ಸಂಜೆ 6.15ರ ಸುಮಾರಿಗೆ ಯೋಗಿ ಅವರಿದ್ದ ಹೆಲಿಕಾಪ್ಟರ್ ಮುಗಿಲೆತ್ತರದಲ್ಲಿ ಕಾಣುತ್ತಿದ್ದಂತೆ ಕಾರ್ಯಕರ್ತರು ಯೋಗಿಯ ಕುರಿತು ಜಯಘೋಷವನ್ನು ಹಾಕಿದ್ದು, ಉಳಿದಂತೆ ರೋಡ್ ಶೋ ಉದ್ದಕ್ಕೂ ಬಿಜೆಪಿ ಪಕ್ಷದ ಜತೆಗೆ ಪ್ರಧಾನಿ ಮೋದಿಯವರಿಗೆ ಜಯಘೋಷವನ್ನು ಹಾಕಿದರು.
Related Articles
Advertisement
ಸ್ಥಳೀಯ ಕ್ಷೇತ್ರಗಳಿಗೆ ಪ್ರಣಾಮಸ್ಥಳೀಯ ಕ್ಷೇತ್ರಗಳಾದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವರು, ಶ್ರೀ ಮಹಾಲಿಂಗೇಶ್ವರ ದೇವರು, ಧರ್ಮಸ್ಥಳ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವರು, ನಂದಾವರ ಶ್ರೀ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಮೊದಲಾದ ದೇವರುಗಳಿಗೆ ಪ್ರಣಾಮಗಳನ್ನು ಸಲ್ಲಿಸಿ ಯೋಗಿ ತಮ್ಮ ಮಾತನ್ನು ಪ್ರಾರಂಭಿಸಿದರು. ಮತ್ತೆ ರಾಜೇಶ್ ನಾೖಕ್‌ರನ್ನು ಗೆಲ್ಲಿಸಿ
2018ರಲ್ಲಿಯೂ ನಾನು ರಾಜೇಶ್ ನಾೖಕ್ ಅವರ ಪರವಾಗಿ ಮತಯಾಚನೆ ನಡೆಸಿದ್ದೆ, ಅವರನ್ನು ಅತ್ಯಧಿಕ ಬಹುಮತದಿಂದ ಆರಿಸುವಂತೆ ವಿನಂತಿಸಿದ್ದೆ, ಅದಕ್ಕೆ ನೀವೆಲ್ಲರೂ ಅಭೂತಪೂರ್ವವಾಗಿ ಸ್ಪಂದಿಸಿ, ಅವರನ್ನು ಗೆಲ್ಲಿಸಿದೀªರಿ, ಅದರ ಬಳಿಕ ಬಂಟ್ವಾಳ ಕ್ಷೇತ್ರ ಅಮೋಘ ಪ್ರಗತಿಗೆ ಸಾಕ್ಷಿಯಾಗಿದೆ, ಇನ್ನೊಮ್ಮೆ ಅವರನ್ನು ಗೆಲ್ಲಿಸಿ, ಕ್ಷೇತ್ರದ ಮತ್ತಷ್ಟು ಪ್ರಗತಿಗೆ ಕಾರಣಕರ್ತರಾಗಿ ಎಂದು ಕರೆಯಿತ್ತರು. ಅಯೋಧ್ಯೆಗೆ ಸ್ವಾಗತಿಸಿದ ಯೋಗಿ
2024ರಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಅಲ್ಲಿಗೆ ನಿಮ್ಮನ್ನು ರಾಮನ ಭಕ್ತನಾಗಿ ಸ್ವಾಗತಿಸುತ್ತೇನೆ ಎಂದು ಯೋಗಿ ಸರ್ವರನ್ನೂ ಆಮಂತ್ರಿಸಿದರು.