ಹೊಸದಿಲ್ಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ತಮ್ಮನ್ನು ಟೀಕಿಸಿ ಮಾಡಿದ್ದ ಟ್ವೀಟ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.
ಟ್ವಿಟರ್‌ನಲ್ಲೇ ಈ ಬಗ್ಗೆ ಪ್ರತಿಕ್ರಿ ಯಿಸಿರುವ ಅವರು, “”ಯೋಗಿ ಆದಿತ್ಯನಾಥ್ ಅವರೇನೂ ಕಮ್ಮಿ ಯಿಲ್ಲ. ಅನೇಕ ರಾಜ್ಯಗಳ ನಾಯಕ ರೊಂದಿಗೆ ನಮ್ಮ ಯೋಗಿ ಆದಿತ್ಯನಾಥ್ ಟ್ವಿಟರ್-ಟ್ವಿಟರ್ ಆಟವಾಡುತ್ತಿದ್ದಾರೆ. ಈ ಗೇಮ್‌ನಲ್ಲಿ ದೈತ್ಯ “ಕ್ರೀಡಾಪಟು’ಗಳನ್ನೇ ಪರಾಭವ ಗೊಳಿಸಿ ದ್ದಾರೆ ಎಂದು ಮೋದಿ ಪ್ರಶಂಸಿದ್ದಾರೆ.
ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ವತಿಯಿಂದ ನಡೆಸಲಾಗುತ್ತಿರುವ ಸದ್ಭಾವನಾ ಯಾತ್ರೆ ಅಂಗವಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬೃಹತ್ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಆಗಮಿಸಿದ್ದರು. ಆ ವೇಳೆ, ಟ್ವಿಟರ್‌ನಲ್ಲಿ ಅವರನ್ನು ಸ್ವಾಗತಿಸಿದ್ದ ಸಿಎಂ ಸಿದ್ದರಾಮಯ್ಯ, “”ಕರ್ನಾಟಕಕ್ಕೆ ಆಗ ಮಿಸಿ ರುವ ಯೋಗಿಯವರಿಗೆ ಸ್ವಾಗತ. ಜಂಗಲ್ ರಾಜ್ ಸಿಎಂ ಆದ ಯೋಗಿ ಅವರು ಕರ್ನಾಟಕ ದಿಂದ ಕಲಿಯುವುದು ಬಹಳಷ್ಟಿದೆ. ಒಮ್ಮೆ ಇಂದಿರಾ ಕ್ಯಾಂಟೀನ್, ಪಡಿತರ ಅಂಗಡಿಗಳಿಗೆ ಹೋಗಿ ಇಲ್ಲಿನ ವ್ಯವಸ್ಥೆ ತಿಳಿದು ಕೊಂಡರೆ ಉತ್ತರ ಪ್ರದೇಶದಲ್ಲಿ ಸಂಭವಿಸುವ ಪೌಷ್ಟಿಕತೆ ಕೊರ ತೆಯ ಸಾವು ತಪ್ಪಿಸಬಹುದು” ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಯೋಗಿ, “”ಸಿದ್ದರಾಮಯ್ಯನವರೇ, ಸ್ವಾಗತಿಸಿದ್ದಕ್ಕೆ ಧನ್ಯವಾದ. ನಿಮ್ಮಲ್ಲಿ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ಇದು ಅಧಿಕವಾಗಿದೆ. ಆದರೆ, ನಾನು ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾದಾಗಿನಿಂದ ನಿಮ್ಮ ಸ್ನೇಹಿತರು ಈ ಹಿಂದೆ ಅಧಿಕಾರ ದಲ್ಲಿದ್ದಾಗ ಮಾಡಿರುವ ದುರವಸ್ಥೆಯನ್ನು ಸರಿಪಡಿಸುತ್ತಿದ್ದೇನೆ” ಎಂದು ತಿಳಿಸಿದ್ದರು.