Advertisement

ಯುಪಿಯಲ್ಲಿ ಗೋ ಕಳ್ಳ ಸಾಗಣೆ, ಗುಟ್ಕಾ ಬ್ಯಾನ್; ಸಿಎಂ ಯೋಗಿ ಆದೇಶ

03:07 PM Mar 22, 2017 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಾಗಿದೆ ಎಂದು ಲೋಕಸಭೆಯಲ್ಲಿ ವಿದಾಯ ಭಾಷಣ ಮಾಡುತ್ತ ಹೇಳಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಠಿಣ ಕ್ರಮ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಗೋ ಕಳ್ಳಸಾಗಾಣೆ ಬಂದ್ ಮಾಡುವಂತೆ ಆದೇಶ ನೀಡಿರುವ ಸಿಎಂ ಯೋಗಿ ಅವರು ಹಲವು ದಿಟ್ಟ ಹೆಜ್ಜೆ ಮುಂದಿಟ್ಟಿದ್ದಾರೆ. ಬಿಜೆಪಿ ನೇತೃತ್ವದ ಉತ್ತರಪ್ರದೇಶ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 3 ದಿನಗಳ ಬಳಿಕ ಈ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಕಸಾಯಿಖಾನೆಗಳನ್ನು ಬಂದ್ ಮಾಡುವ ನಿಟ್ಟಿನಲ್ಲಿ ರೂಪರೇಷೆ ಸಿದ್ಧಪಡಿಸುವಂತೆ ಸಿಎಂ ಯೋಗಿ ಅವರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೆ ಕಾನೂನುಬದ್ಧವಾಗಿ ನಡೆಸುತ್ತಿರುವ ಕಸಾಯಿಖಾನೆಗಳನ್ನು ಕೂಡಾ ಬಂದ್ ಮಾಡುತ್ತಾರೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ವರದಿ ವಿವರಿಸಿದೆ.

ಮಂಗಳವಾರ ವಾರಣಾಸಿಯ ಜೈಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲ್ ಗಡಾ ಪ್ರದೇಶದಲ್ಲಿನ ಅಕ್ರಮ ಕಸಾಯಿಖಾನೆಯನ್ನು ಜಿಲ್ಲಾಧಿಕಾರಿಗಳು ಬಂದ್ ಮಾಡಿದ್ದರು.
ಅಷ್ಟೇ ಅಲ್ಲ ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಪಾನ್ ಮಸಾಲ, ಗುಟ್ಕಾ ಬಳಸಲು ನಿಷೇಧ ಹೇರಲಾಗಿದೆ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿಯೇ, ಅಕ್ರಮ ಕಸಾಯಿಖಾನೆ ಹಾಗೂ ಗೋ ಕಳ್ಳ ಸಾಗಾಣೆ ಬಂದ್ ಮಾಡುವ ಭರವಸೆ ನೀಡಿತ್ತು.

Advertisement

ರೋಡ್ ರೋಮಿಯೋ ನಿಗ್ರಹ ದಳ:
ಉತ್ತರಪ್ರದೇಶದಲ್ಲೀಗ ಎಲ್ಲೆಂದರಲ್ಲಿ ಕಾಟ ಕೊಡುತ್ತಿದ್ದ ರೋಡ್ ರೋಮಿಯೋ ನಿಗ್ರಹ ದಳ ಕಾರ್ಯಾರಂಭಿಸಿದ್ದು, ಇದರಿಂದಾಗಿ ವಿದ್ಯಾರ್ಥಿಗಳು, ಪ್ರೇಮಿಗಳು ಪೊಲೀಸರ ಬಲೆಗೆ ಬೀಳುವಂತಾಗಿದೆ.

ಕಾಲೇಜು, ಪಾರ್ಕ್ ಸುತ್ತಮುತ್ತ ರೋಡ್ ರೋಮಿಯೋ ನಿಗ್ರಹ ದಳ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ರೋಡ್ ರೋಮಿಯೋ ನಿಗ್ರಹ ದಳದ ವಿರುದ್ಧ ವಿದ್ಯಾರ್ಥಿಗಳು, ಜೋಡಿಗಳು ಅಸಮಾಧಾನವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next