Advertisement

ಯೋಗಿ ಸಂಪುಟ 2.0 ರಲ್ಲಿ ಐವರು ಮಹಿಳೆಯರಿಗೆ ಸಚಿವ ಪದವಿ

08:23 PM Mar 25, 2022 | Team Udayavani |

ಲಕ್ನೋ : ಎರಡನೇ ಬಾರಿ ಯುಪಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್ ಅವರ ಸಂಪುಟ 2.0 ರಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು 52 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಪ್ರಮಾಣವಚನ ಸ್ವೀಕರಿಸಿದ 52 ಮಂದಿಯಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು, 16 ಕ್ಯಾಬಿನೆಟ್ ಸಚಿವರು ಮತ್ತು 34 ರಾಜ್ಯ ಸಚಿವರು ಸೇರಿದ್ದಾರೆ.

ಬೇಬಿ ರಾಣಿ ಮೌರ್ಯ

ಆಗ್ರಾ ಗ್ರಾಮಾಂತರ ಕ್ಷೇತ್ರದ ಶಾಸಕಿ ಬೇಬಿ ರಾಣಿ ಮೌರ್ಯ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, 65 ವರ್ಷದ ನಾಯಕಿ ಕಳೆದ ವರ್ಷ ಉತ್ತರಾಖಂಡ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ಅವರು 1995 ರಲ್ಲಿ ಆಗ್ರಾದ ಮೇಯರ್ ಆದ ಮೊದಲ ದಲಿತ ಮಹಿಳೆಯಾಗಿದ್ದರು. ಈ ಚುನಾವಣೆಯಲ್ಲಿ ಅವರು ಬಿಎಸ್ಪಿಯ ಕಿರಣ್ ಪ್ರಭಾ ಕೇಶರಿ ವಿರುದ್ಧ 76,608 ಮತಗಳ ಅಂತರದಿಂದ ಭಾರಿ ಗೆಲುವು ಸಾಧಿಸಿದ್ದರು.

ಗುಲಾಬ್ ದೇವಿ (ರಾಜ್ಯ ಸಚಿವೆ, ಸ್ವತಂತ್ರ)

Advertisement

ಸಂಭಾಲ್ ಜಿಲ್ಲೆಯ ಚಂದೌಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಕುಮಾರಿ ವಿಮಲೇಶ್ ಅವರನ್ನು 35,367 ಮತಗಳ ಅಂತರದಿಂದ ಸೋಲಿಸಿದ ಗುಲಾಬ್ ದೇವಿ ಐದು ಬಾರಿ ಶಾಸಕಿಯಾಗಿದ್ದಾರೆ. ಅವರು 1991 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಹಿರಿಯ ನಾಯಕಿಯಾಗಿದ್ದಾರೆ.

ವಿಜಯ ಲಕ್ಷ್ಮಿ ಗೌತಮ್ (ರಾಜ್ಯ ಸಚಿವೆ)

ವಿಜಯ್ ಲಕ್ಷ್ಮಿ ಗೌತಮ್ ಅವರು 2022 ರ ಚುನಾವಣೆಯಲ್ಲಿ ಎಸ್‌ಬಿಎಸ್‌ಪಿಯ ಮನ್‌ಬೋಧ್ ಪ್ರಸಾದ್ ಅವರನ್ನು 16,608 ಮತಗಳಿಂದ ಸೋಲಿಸುವ ಮೂಲಕ ಡಿಯೋರಿಯಾ ಜಿಲ್ಲೆಯ ಸೇಲಂಪುರದಿಂದ ಗೆದ್ದಿದ್ದರು. 2017 ರ ಚುನಾವಣೆಯಲ್ಲಿ ಸೇಲಂಪುರ ಕ್ಷೇತ್ರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಸೋಲು ಅನುಭವಿಸಿದ ನಂತರ ಅವರು ಬಿಜೆಪಿಗೆ ಸೇರಿದ್ದರು.

ಪ್ರತಿಭಾ ಶುಕ್ಲಾ

ಪ್ರತಿಭಾ ಶುಕ್ಲಾ ಅವರು 13,417 ಮತಗಳ ಅಂತರದಿಂದ ಕಾನ್ಪುರ್ ದೇಹತ್ ಜಿಲ್ಲೆಯ ಅಕ್ಬರ್‌ಪುರ್ – ರಾನಿಯಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಆರ್‌ಪಿ ಕುಶ್ವಾಹಾ ಅವರನ್ನು ಸೋಲಿಸಿದ್ದರು. 2007ರಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.

ರಜನಿ ತಿವಾರಿ

ಬಿಜೆಪಿಯ ರಜನಿ ತಿವಾರಿ ಅವರು ಹರ್ದೋಯ್ ಜಿಲ್ಲೆಯ ಶಹಾಬಾದ್ ಕ್ಷೇತ್ರದಿಂದ ಎಸ್‌ಪಿಯ ಆಸಿಫ್ ಖಾನ್ ಬಬ್ಬು ವಿರುದ್ಧ 6,479 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2022ರ ಚುನಾವಣೆಯಲ್ಲಿ ಗೆದ್ದು ನಾಲ್ಕನೇ ಬಾರಿ ಶಾಸಕಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next