Advertisement

ಉ.ಪ್ರದೇಶದಲ್ಲಿ ನ್ಯೂ ಅಯೋಧ್ಯಾ ಟೌನ್‌ ಶಿಪ್‌

10:15 AM Apr 07, 2018 | Karthik A |

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ, ಸರಯೂ ನದಿಯ ದಡದ ಸುಮಾರು 500 ಎಕರೆ ವಿಸ್ತೀರ್ಣದಲ್ಲಿ ‘ನ್ಯೂ ಅಯೋಧ್ಯಾ’ ಎಂಬ ಹೊಸ ಟೌನ್‌ಶಿಪ್‌ ನಿರ್ಮಿಸಲು ನಿರ್ಧರಿಸಿದೆ. ಈ ಟೌನ್‌ಶಿಪ್‌ ಅಯೋಧ್ಯೆ ಬಳಿಯ ಮಾಝಾ ಬರ್ಹಾತಾ ಹಾಗೂ ಜೈಸಿಂಗ್‌ ಮೌ ಎಂಬ ಹಳ್ಳಿಗಳ ನಡುವೆ, ಲಕ್ನೋ – ಗೋರಖ್‌ಪುರ ಎಕ್ಸೆಪ್ರಸ್‌ ಹೈವೇಗೆ ಹೊಂದಿಕೊಂಡಂತೆ ನಿರ್ಮಾಣವಾಗಲಿದೆ. ಒಟ್ಟು, ಅಂದಾಜು 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಗಿ ಸರಕಾರ ಸಿದ್ಧತೆ ನಡೆಸಿದೆ. ಕಳೆದ ಅಕ್ಟೋಬರ್‌ನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ 328 ಅಡಿಯ ದೈತ್ಯ ಪ್ರತಿಮೆಯನ್ನು 330 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ಯೋಗಿ ಘೋಷಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next