Advertisement

1921ರ ಮಾಪಿಳ್ಳೆ ದಂಗೆ ಜೆಹಾದಿಗಳು ಹಿಂದೂಗಳ ಮೇಲೆ ನಡೆಸಿದ ನರಮೇಧ : ಯೋಗಿ

02:28 AM Sep 26, 2021 | Team Udayavani |

ತಿರುವನಂತಪುರ: 1921ರಲ್ಲಿ ಕೇರಳದ ಮಲಬಾರ್‌ನಲ್ಲಿ ನಡೆದ ಮಾಪಿಳ್ಳೆ ದಂಗೆ ಅಥವಾ ಮಲಬಾರ್‌ ದಂಗೆಯು ಜೆಹಾದಿಗಳು ಹಿಂದೂಗಳ ಮೇಲೆ ನಡೆಸಿದ ಪೂರ್ವ ನಿಯೋಜಿತ ನರಮೇಧ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

ಆರ್‌ಎಸ್‌ಎಸ್‌ ಬೆಂಬಲಿತ ಪಾಂಚಜನ್ಯ ವಾರಪತ್ರಿಕೆ ಏರ್ಪಡಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ. “ಭಾರತದ ಇತಿಹಾಸವನ್ನು ಸರಿಯಾದ ದೃಷ್ಟಿಯಲ್ಲಿ ಅರ್ಥ ಮಾಡಿಕೊಳ್ಳುವ ಆವಶ್ಯಕತೆಯಿದೆ. 100 ವರ್ಷಗಳ ಹಿಂದೆ ರಾಜ್ಯದ ಜೆಹಾದಿಗಳು ಸಾವಿರಾರು ಹಿಂದೂಗಳನ್ನು ಹತ್ಯೆ ಮಾಡಿದರು. ಸಾಕಷ್ಟು ದಿನಗಳ ಕಾಲ ನರಮೇಧ ನಡೆಯಿತು. 10 ಸಾವಿರಕ್ಕೂ ಅಧಿಕ ಹಿಂದೂಗಳು ಸಾವನ್ನಪ್ಪಿರುವ ವರದಿಯಿದೆ. ಅದು ಭೂ ಮಾಲಕರ ಮೇಲೆ ನಡೆಸಿದ ದಂಗೆ ಎಂದು ಕೆಲವರು ವಾದಿಸುತ್ತಾರೆ. ಹಾಗಾಗಿದ್ದರೆ ಅಷ್ಟೊಂದು ಸಾವಿರ ಹಿಂದೂಗಳ ಕೊಲೆ ಹೇಗಾಗುತ್ತಿತ್ತು. ಅವರು ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೇ? ಸತ್ಯ ಏನೆಂದರೆ ಈ ಇತಿಹಾಸವನ್ನೆಲ್ಲ ಬರೆದವರು ಎಡಪಂಥೀಯರು. ಓಟ್‌ಬ್ಯಾಂಕ್‌ ಮಾಡುತ್ತಿದ್ದ ಪಕ್ಷಗಳೂ ಅದಕ್ಕೆ ಬೆಂಬಲಿಸಿದರು’ ಎಂದು ಯೋಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next