Advertisement
“ಮೊದಲು ಮಾಡಿದ ಗಾಳಿಪಟ ಇಂದಿಗೂ ಅದೆಷ್ಟೋ ಜನರಿಗೆ ಫೇವರೆಟ್ ಸಿನಿಮಾ. ಇದು ಕೂಡ ಅಂಥದ್ದೇ ಸಿನಿಮಾ ಆಗಲಿದೆ ಅನ್ನೋದು ನಮ್ಮ ವಿಶ್ವಾಸ. ನಾವೆಲ್ಲರೂ ಅದೇ ನಿರೀಕ್ಷೆ ಇಟ್ಟುಕೊಂಡು ಕೆಲ್ಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ನಾವೇನು ಅಂದುಕೊಂಡಿದ್ದೇವೋ, ಹಾಗೆ ಸಿನಿಮಾ ಬರ್ತಿದೆ…’
Related Articles
Advertisement
ಅಂದಹಾಗೆ, ಸುಮಾರು 45 ದಿನಗಳ ಕಾಲ ನಡೆದ “ಗಾಳಿಪಟ-2′ ಚಿತ್ರದ ಮೊದಲ ಶೆಡ್ನೂಲ್ ಶೂಟಿಂಗ್‌ನಲ್ಲಿ ಚಿತ್ರದ ಮಾತಿನ ಭಾಗ ಸುಮಾರು 3-4 ಹಾಡುಗಳನ್ನು ಚಿತ್ರೀಕರಿಸಲಾಗಿದೆಯಂತೆ. ನಟರಾದ ಗಣೇಶ್, ಅನಂತನಾಗ್, ದಿಗಂತ್, ಪವನ್, ರಂಗಾಯಣ ರಘು, ಪದ್ಮಜಾ ರಾವ್ ಹೀಗೆ ಅನೇಕ ಕಲಾವಿದರ ದಂಡೇ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಇದೆಲ್ಲದಕ್ಕೂ ಕಾರಣವಾಗಿದ್ದು, ಇದರ ಹಿಂದೆ ಶಕ್ತಿಯಾಗಿ ನಿಂತಿದ್ದು, ನಿರ್ಮಾಪಕ ರೆಡ್ಡಿ ಎನ್ನುವುದು ಭಟ್ಟರ ಮಾತು. “ಇಂಥದ್ದೊಂದು ಕಥೆ ಇಟ್ಟುಕೊಂಡು ಅದಕ್ಕೆ ಬೇಕಾದ ಲೊಕೇಶನ್ ಹುಡುಕಿಕೊಂಡು ಸಿನಿಮಾ ಮಾಡಲು ಹೊರಟಾಗ ನಿರ್ಮಾಪಕರಾದವರು ಸಾಕಷ್ಟು ಗಟ್ಟಿ ಇರಬೇಕು. ಇಲ್ಲದಿದ್ದರೆ, ಈ ಥರದ ಸಿನಿಮಾ ಮಾಡೋದಕ್ಕೆ ಕಷ್ಟ. ಆದರೆ ನಮ್ಮ ನಿರ್ಮಾಪಕರು ಅದೆಲ್ಲವನ್ನೂ ಭರಿಸಿ ನಮಗೆ ಹೆಗಲಾಗಿ ನಿಂತಿದ್ದಾರೆ. ಹಾಗಾಗಿ ಎಲ್ಲವೂ ಸರಾಗವಾಗಿ ಸಾಗುತ್ತಿದೆ’ ಎನ್ನುತ್ತಾರೆ ಭಟ್ಟರು.
“ನಿರ್ದೇಶಕನಾಗಿ ಅಲ್ಲದೆ ಪ್ರೇಕ್ಷಕನಾಗಿ ನನಗೂ ಈ ಸಿನಿಮಾದ ಮೇಲೆ ಸಾಕಷ್ಟು ಕುತೂಹಲವಿದೆ. ಒಂದು ಒಳ್ಳೆಯ ಸಿನಿಮಾ ತನಗೆ ಏನು ಬೇಕೋ ಅದೆಲ್ಲವನ್ನು ತಂತಾನೇ ಪಡೆದುಕೊಳ್ಳುತ್ತದೆ. ಹಾಗೆ, “ಗಾಳಿಪಟ-2′ ಕೂಡ ತನಗೇನು ಬೇಕೋ ಅದೆಲ್ಲವನ್ನು ಪಡೆದುಕೊಂಡು ಸಾಗುತ್ತಿದೆ. ಆದಷ್ಟು ಬೇಗ ಈ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಇಡಲು ಎಲ್ಲರೂ ಶ್ರಮಿಸುತ್ತಿದ್ದೇವೆ’ ಎನ್ನುತ್ತಾರೆ ಭಟ್ಟರು.
ಸದ್ಯ ಮೊದಲ ಹಂತದ ಶೂಟಿಂಗ್ ಮುಗಿಸಿರುವ “ಗಾಳಿಪಟ-2′ ಚಿತ್ರದ ಎರಡನೇ ಹಂತದ ಶೂಟಿಂಗ್ ಬಹುತೇಕ ವಿದೇಶಗಳಲ್ಲಿ ನಡೆಸಲು ಯೋಗರಾಜ್ ಭಟ್ ಆ್ಯಂಡ್ ಟೀಮ್ ಪ್ಲಾನ್ ಹಾಕಿಕೊಂಡಿದೆ. “ಚಿತ್ರಕಥೆ ಮತ್ತು ಸನ್ನಿವೇಶಗಳು ಮಂಜು, ಹಿಮವನ್ನು ಬಯಸುತ್ತಿರುವುದರಿಂದ, ಅದರಲ್ಲೂ ಸಾಕಷ್ಟು ಹಿಮ ಬೀಳುವ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲು ನಿರ್ಧರಿಸಲಾಗಿದೆ’ ಎಂಬ ವಿವರಣೆ ಕೊಡುತ್ತಾರೆ ಯೋಗರಾಜ್ ಭಟ್ಟರು.
ಒಬ್ಬ ಪ್ರೇಕ್ಷಕನಾಗಿ ನಾನು ಕೂಡಾ ಈ ಸಿನಿಮಾ ಬಗ್ಗೆ ಕುತೂಹಲ ಹೊಂದಿದ್ದೇನೆ -ಯೋಗರಾಜ್ ಭಟ್
ಜಿ.ಎಸ್ ಕಾರ್ತಿಕ ಸುಧನ್