Advertisement

ಸಾನ್ನಿಧ್ಯ ವೃದ್ಧಿಗೆ ಯೋಗಾಚಾರ್ಯರಿಂದ ಅಖಂಡ ಮೌನ ಜಪ

01:00 AM Mar 06, 2019 | Team Udayavani |

ಮಂಜೇಶ್ವರ: ಪಾವೂರು ಸಮೀಪದ ಕೊಪ್ಪಳ ಶಿವಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದು, ಕಳೆದ 11 ವರ್ಷಗಳ ಹಿಂದೆ ಅನ್ಯಧರ್ಮೀಯರ ಆಕ್ರಮಣ ಮತ್ತು ಅವರಿಂದ ಕದಿಯಲ್ಪಟ್ಟ ಶ್ರೀ ಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶ್ರೀ ಸಾನ್ನಿಧ್ಯದ ಶಕ್ತಿ ವೃದ್ಧಿಗಾಗಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು 48 ದಿನಗಳ ಒಂದು ಮಂಡಲ ಉದಯಾಸ್ತಮಾನ ಮೌನ ನಾಮಜಪಕ್ಕೆ ತೊಡಗಿದ‌ರು.

Advertisement

ಇದರ ಪೂರ್ವಭಾವಿಯಾಗಿ ರವಿವಾರ ವರ್ಕಾಡಿಯ ನೀರೊಳಿಕೆಯ ಶ್ರೀ ಮಾತಾ ಸೇವಾಶ್ರಮದಿಂದ ವರ್ಕಾಡಿ ಬೇಕರಿ ಮಾರ್ಗವಾಗಿ ಪಾವೂರು ಮೂಲಕ ಶಿವಪುರ ಶ್ರೀ ಕ್ಷೇತ್ರಕ್ಕೆ ಪುಂಡರೀಕಾಕ್ಷ ಅವರನ್ನು ಮೆರವಣಿಗೆಯೊಂದಿಗೆ ಕರೆತರಲಾಯಿತು. ಬಳಿಕ ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೃತ್ಯುಂಜಯೇಶ್ವರ ಸೇವಾ ಮಂದಿರದಲ್ಲಿ ವಾಸ್ತು ಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಧರ ಶೆಟ್ಟಿ ಪಾವೂರುಗುತ್ತು, ಎಂ.ಬಿ. ಪುರಾಣಿಕ್‌, ಗೋಪಾಲ ಶೆಟ್ಟಿ ಅರಿಬೈಲು, ನಾರಾಯಣ ಭಟ್‌ ತಲೆಂಗಳ, ಸುರೇಶ್‌ ಶೆಟ್ಟಿ ಪರಂಕಿಲ, ಸುಬ್ಬ ಗುರುಸ್ವಾಮಿ ಪಾವೂರು, ಯಾದವ ಮಂಜೇಶ್ವರ, ಶೈಲೇಶ್‌ ಅಂಜರೆ, ಸೇಸಪ್ಪ ಅರಿಂಗುಳ, ಐತ್ತಪ್ಪ ಶೆಟ್ಟಿ ದೇವಂದಪಡು³, ತ್ಯಾಂಪಣ್ಣ ರೈ ಪಾವೂರು, ಎವರೆಸ್ಟ್‌ ಡಿ’ಸೋಜ ಪಾಲೆತ್ತಡಿ, ಬಾಲಕೃಷ್ಣ ಶೆಟ್ಟಿ ಮುಗೇರುಗುತ್ತು, ಆನಂದ ಟಿ.ತಚ್ಚಿರೆ, ಕುಶಾಲಾಕ್ಷಿ ಕಾನದಕಟ್ಟ, ಬೇಬಿ ಕೊಪ್ಪಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಂಘಗಳ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಸದಸ್ಯರುಗಳು, ಸ್ಥಳೀಯರು ಉಪಸ್ಥಿತರಿದ್ದರು.

ಮಹಾಮೃತ್ಯುಂಜಯ ಕ್ಷೇತ್ರವು ದಶಕಗಳಿಂದ ಜೀರ್ಣಾವಸ್ಥೆಗೆ ತಲಪಿ ಬಳಿಕ ಅನ್ಯಧರ್ಮೀಯರ ಪಾಲಾಗಿತ್ತು. ಕಳೆದ 11 ವರ್ಷಗಳ ಹಿಂದೆ ಇಲ್ಲಿಯ ಗುಡ್ಡದ ಮೇಲಿದ್ದ ಅನಾಥ ಶಿವಲಿಂಗವನ್ನು ಕಿತ್ತೆಸೆದು ಅಪವಿತ್ರಗೊಳಿಸಲಾಗಿತ್ತು. ಎಚ್ಚೆತ್ತ ಸ್ಥಳೀಯ ನಾಗರಿಕರು ಬಳಿಕ ಒಗ್ಗಟ್ಟಾಗಿ ನ್ಯಾಯಾಲಯದ ಮೊರೆಹೋಗಿದ್ದರು. 
ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ನ್ಯಾಯಾಲಯ ಬಳಿಕ ದೇಗುಲವಿದ್ದ ಪ್ರದೇಶವನ್ನು ವಿವಾದಿತ ಹಾಗೂ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಪೊಲೀಸ್‌ ಸರ್ಪಗಾವಲು ಏರ್ಪಡಿಸಿತ್ತು.

ಆ ಬಳಿಕ ನ್ಯಾಯಾಲಯದ ನಿರ್ದೇಶಾನುಸಾರ ಪೂಜೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಈ ವರೆಗೆ ಸಾಧ್ಯವಾಗದಿರುವುದರಿಂದ ಸಾನ್ನಿಧ್ಯ ವೃದ್ಧಿಗಾಗಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಅಖಂಡ ಮೌನ ಜಪಕ್ಕೆ ಸೋಮವಾರದ ಮಹಾ ಶಿವರಾತ್ರಿಯ ಪರ್ವ ಕಾಲದಲ್ಲಿ ತೊಡಗಿಸಿಕೊಂಡರು. ಜತೆಗೆ ಸ್ಥಳೀಯ ಭಕ್ತರು ಶಿವ ಪಂಚಾಕ್ಷರಿ ಪಾರಾಯಣಕ್ಕೂ ಈ ಸಂದರ್ಭ  ಚಾಲನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next