Advertisement
ವಿವಿಧ ಆಸನಗಳ ಪ್ರದರ್ಶನ: ಮೊದಲಿಗೆ 4 ನಿಮಿಷ ಚಲನ ಕ್ರಿಯೆ ಮತ್ತು ಭುಜದ ವ್ಯಾಯಾಮ ಮಾಡಿದ ಯೋಗಪಟುಗಳು, ಬಳಿಕ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ ಸೇರಿದಂತೆ 19 ಬಗೆಯ ಆಸನಗಳನ್ನು ಪ್ರದರ್ಶಿಸಿದರು. ನಂತರ 14 ನಿಮಿಷಗಳ ವರೆಗೆ ಕಪಾಲಭಾತಿ, ನಾಡಿ ಶೋಧನ, ಶೀತಲೀ, ಬ್ರಾಮರೀ, ಧ್ಯಾನವನ್ನು ಒಳಗೊಂಡಂತೆ ಪ್ರಾಣಾಯಾಮ ಮಾಡಿದರು.
Related Articles
Advertisement
ಇದಲ್ಲದೆ 111 ತರಬೇತುದಾರರು ಪ್ರತೀ ಭಾನುವಾರಗಳಂದು ನಾನಾ ಬಡಾವಣೆಗಳಿಗೆ ತೆರಳಿ ಯೋಗ ತರಬೇತಿ ನೀಡುವ ಮುಖಾಂತರ ಈ ವರೆಗೆ 40,000 ಯೋಗಾಸಕ್ತರನ್ನು ಸಂಘಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಸೇರಿಸಿ ಒಂದೂವರೆ ಲಕ್ಷ ಜನರನ್ನು ಒಳಗೊಂಡ ಬೃಹತ್ ಯೋಗ ಪ್ರದರ್ಶಿಸಿ ವಿಶ್ವ ದಾಖಲೆ ನಿರ್ಮಿಸುವುದಾಗಿ ತಿಳಿಸಿದರು.
ಗಣ್ಯರು ಅಂಬಾಸಿಡರ್: ಮುಂದಿನ ದಿನಗಳಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಶ್ರೀನಾಥ್ ಸೇರಿದಂತೆ 10 ಮಂದಿ ಗಣ್ಯರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ಯೋಗ ವಿವಿ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಯೋಗ ವಿವಿ ಸ್ಥಾಪಿಸುವ ಉದ್ದೇಶದಿಂದ 200 ಎಕರೆ ಜಾಗ ಗುರುತಿಸಿದ್ದೇವೆ. ಭವಿಷ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ವಿವಿ ಸ್ಥಾಪನೆಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.